Site icon Vistara News

Rachita Ram: ಲಾಲ್‌ಬಾಗ್ ಕಾರ್ಮಿಕನಿಗೆ ಗುದ್ದಿದ ರಚಿತಾ ರಾಮ್ ಕಾರು; ಕ್ಷಮೆ ಕೇಳದ ನಟಿ ವಿರುದ್ಧ ಜನರ ಆಕ್ರೋಶ

Rachita Ram

ಬೆಂಗಳೂರು: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ (lalbagh flower show) ನಟಿ ರಚಿತಾ ರಾಮ್‌ ಅವರು ಸೋಮವಾರ ಭೇಟಿ ನೀಡಿದ್ದರು. ಅಲ್ಲಿಂದ ವಾಪಸ್‌ ತೆರಳುವಾಗ ನಟಿ ಇದ್ದ ಕಾರು ಪೌರ ಕಾರ್ಮಿಕರೊಬ್ಬರಿಗೆ ಕಾರು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್‌ ಯಾವುದೇ ಅನಾಹುತವಾಗಿಲ್ಲ. ಆದರೆ, ಅಪಘಾತ ನಡೆದ ಬಳಿಕವೂ ನಟಿ ರಚಿತಾ ರಾಮ್‌ (Rachita Ram) ಅವರು ಸೌಜನ್ಯಕ್ಕೂ ಕ್ಷಮೆ ಕೇಳದೆ ಹೋಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಚಾಲಕನ ನಿರ್ಲಕ್ಷ್ಯವೋ ಅಥವಾ ಕಾರ್ಮಿಕನ ನಿರ್ಲಕ್ಷ್ಯವೋ ಗೊತ್ತಿಲ್ಲ. ಆದರೆ, ಕಾರಿನಡಿ ಸಿಲುಕಿದ್ದರೆ ಕಾರ್ಮಿಕನ ಜೀವಕ್ಕೆ ಕಂಟಕವಾಗುತ್ತಿತ್ತು. ಆದರೆ, ಅದೃಷ್ಟವಶಾತ್‌ ಅನಾಹುತ ತಪ್ಪಿದೆ. ಅಪಘಾತದ ದೃಶ್ಯ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರು ಗುದ್ದಿದ್ದಕ್ಕೆ ಕಾರ್ಮಿಕನಿಗೆ ನಟಿ ಕ್ಷಮೆಯಾಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Jailer Movie: ಗೆದ್ದು ಬೀಗಿದ ʻತಲೈವಾʼ; ಬೆಂಗಳೂರಿನಲ್ಲಿ ‘ಜೈಲರ್‌’ಗೆ ಡಿಮ್ಯಾಂಡೋ ಡಿಮ್ಯಾಂಡ್‌!

Exit mobile version