Site icon Vistara News

Ragging Case: ವಿಜಯಪುರದಲ್ಲಿ ಕಾಲೇಜು ಹುಡುಗಿಯರ ಚುಡಾಯಿಸುತ್ತಿದ್ದರಿಗೆ ಬಿತ್ತು ಧರ್ಮದೇಟು

#image_title

ವಿಜಯಪುರ: ಇಲ್ಲಿನ ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದಲ್ಲಿ ಕಾಲೇಜಿಗೆ ಹೋಗಿ ಬರುವ ಹುಡುಗಿಯರನ್ನು ಚುಡಾಯಿಸುತ್ತಿದ್ದ (Ragging Case) ರೋಡ್‌ ರೋಮಿಯೊ ಯುವಕರಿಗೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ.

ಮಸಬಿನಾಳ ಗ್ರಾಮದ ಇಬ್ಬರು ಯುವಕರನ್ನು ಹಿಡಿದು ಸ್ಥಳೀಯರೆಲ್ಲರೂ ಸೇರಿ ಥಳಿಸಿದ್ದಾರೆ. ಪ್ರತಿನಿತ್ಯ ಕಾಲೇಜು ಸುತ್ತಮುತ್ತ ಓಡಾಡುತ್ತಿದ್ದ ಈ ಪುಂಡರು ಹೆಣ್ಣು ಮಕ್ಕಳಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದರು. ಇವರಿಬ್ಬರ ಕಾಟಕ್ಕೆ ಬೇಸತ್ತು ಹುಡುಗಿಯರು ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: Road Accident: ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ; ಬೈಕ್‌ಗೆ ಲಾರಿ ಡಿಕ್ಕಿಯಾಗಿ ಇಬ್ಬರು ಸವಾರರು ಮೃತ್ಯು

ಗುರುವಾರ ಎಂದಿನಂತೆ ಕಾಲೇಜಿಗೆ ಹೊರಟಿದ್ದ ಹುಡುಗಿಯರನ್ನು ಚುಡಾಯಿಸಲು ಬಂದಿದ್ದ ಯುವಕರನ್ನು ಸ್ಥಳೀಯರೇ ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಬಿಸಿಮುಟ್ಟಿಸಿದ್ದಾರೆ. ಕೂಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Exit mobile version