ರಾಯಚೂರು: ಸಾರ್ವತ್ರಿಕ ವಿಧಾನಸಭಾ ಚುನಾವಣೆಯ (Karnataka election 2023) ಮತ ಎಣಿಕೆ (Vote counting) ಕಾರ್ಯಕ್ಕೆ ಜಿಲ್ಲಾಡಳಿತ ಸಜ್ಜುಗೊಂಡಿದೆ, ಎರಡು ಕಾಲೇಜುಗಳಲ್ಲಿ ಏಳು ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ಮೇ 10 ರಂದು ಮತದಾನ ನಡೆದಿದ್ದು, ಈ ಬಾರಿ ರಾಯಚೂರು ನಗರದ ಎಲ್‌ವಿಡಿ ಮತ್ತು ಎಸ್‌ಆರ್‌ಪಿಎಸ್ ಕಾಲೇಜುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.
ಇದನ್ನೂ ಓದಿ: Accident News: 3ನೇ ಮಹಡಿಯಿಂದ ಬಿದ್ದು ಪೇಂಟರ್ ಸಾವು; ಆಂಬ್ಯುಲೆನ್ಸ್ ಬಾರದೆ ನಡು ರಸ್ತೆಯಲ್ಲೆ ಒದ್ದಾಡಿ ಪ್ರಾಣಬಿಟ್ಟ
7 ಕ್ಷೇತ್ರಗಳ ಪೈಕಿ ರಾಯಚೂರು ನಗರ, ರಾಯಚೂರು ಗ್ರಾಮೀಣ, ಮಾನ್ವಿ ಈ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಗರದ ಎಲ್‌ವಿಡಿ ಕಾಲೇಜಿನಲ್ಲಿ ಮತ ಎಣಿಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.ಇನ್ನುಳಿದ ಲಿಂಗಸುಗೂರು, ಮಸ್ಕಿ, ಸಿಂಧನೂರು, ದೇವದುರ್ಗ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಎಸ್‌ಆರ್‌ಪಿಎಸ್ ಕಾಲೇಜಿನಲ್ಲಿ ನಡೆಯಲಿದೆ ಎಂದು ಹೇಳಿದರು.
ಲಿಂಗಸುಗೂರು ವಿಧಾನಸಭಾ ಕ್ಷೇತ್ರ
ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 255534 ಮತದಾರರ ಇದ್ದು, ಈ ಪೈಕಿ 173056 ಜನರು ಮತದಾನ ಮಾಡಿದ್ದಾರೆ. ಲಿಂಗಸುಗೂರು ಕ್ಷೇತ್ರದ ಮತ ಎಣಿಕೆ 14 ಟೇಬಲ್ ಗಳಲ್ಲಿ 20 ಸುತ್ತಿನಲ್ಲಿ ಮುಕ್ತಾಯವಾಗಲಿದೆ.
ದೇವದುರ್ಗ ವಿಧಾನಸಭಾ ಕ್ಷೇತ್ರ
ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 233472 ಮತದಾರರ ಇದ್ದು, ಈ ಪೈಕಿ ಈ ಬಾರಿ 174204 ಜನರು ಮತದಾನ ಮಾಡಿದ್ದಾರೆ. ದೇವದುರ್ಗ ಕ್ಷೇತ್ರದ ಮತ ಎಣಿಕೆ 14 ಟೇಬಲ್ ಗಳಲ್ಲಿ 19 ಸುತ್ತಿನಲ್ಲಿ ಎಣಿಕೆ ನಡೆಯಲಿದೆ.
ಇದನ್ನೂ ಓದಿ: Weather Report: ಕಳಸದಲ್ಲಿ ಭಾರಿ ಮಳೆಗೆ ಕುಸಿದು ಬಿದ್ದ ಸೇತುವೆ; ಸಿಕ್ಕಿಹಾಕಿಕೊಂಡ ಪಿಕಪ್ ವಾಹನ
ರಾಯಚೂರು ನಗರ ವಿಧಾನಸಭಾ ಕ್ಷೇತ್ರ
ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 232698 ಮತದಾರರು ಇದ್ದು, ಈ ಪೈಕಿ ಈ ಬಾರಿ 144294 ಜನರು ಮತದಾನ ಮಾಡಿದ್ದಾರೆ. ರಾಯಚೂರು ನಗರ ಕ್ಷೇತ್ರದ ಮತ ಎಣಿಕೆಯು 14 ಟೇಬಲ್ ಗಳಲ್ಲಿ 18 ಸುತ್ತು ನಡೆಯಲಿದೆ.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಒಟ್ಟು 229046 ಸಂಖ್ಯೆಯಲ್ಲಿ ಮತದಾರರು ಇದ್ದು,ಈ ಬಾರಿ 172478 ಜನರು ಮತದಾನ ಮಾಡಿದ್ದಾರೆ. ರಾಯಚೂರು ಗ್ರಾಮೀಣ ಕ್ಷೇತ್ರದ ಮತ ಎಣಿಕೆ 14 ಟೇಬಲ್ ಗಳಲ್ಲಿ 20 ಸುತ್ತು ನಡೆಯಲಿದೆ.
ಮಾನ್ವಿ ವಿಧಾನಸಭಾ ಕ್ಷೇತ್ರ
ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 233823 ಮತದಾರ ರು ಇದ್ದು,ಈ ಪೈಕಿ 156725 ಜನರು ಮತದಾನ ಮಾಡಿದ್ದಾರೆ. ಮಾನ್ವಿ ಕ್ಷೇತ್ರದ ಮತ ಎಣಿಕೆ 14 ಟೇಬಲ್ ಗಳಲ್ಲಿ 20 ಸುತ್ತು ನಡೆಯಲಿದೆ.
ಸಿಂಧನೂರು ವಿಧಾನಸಭಾ ಕ್ಷೇತ್ರ
ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 239247 ಮತದಾರರು ಇದ್ದು,ಈ ಪೈಕಿ 174230 ಜನರು ಮತದಾನ ಮಾಡಿದ್ದಾರೆ. ಸಿಂಧನೂರು ಕ್ಷೇತ್ರದ ಮತ ಎಣಿಕೆ 14 ಟೇಬಲ್ ಗಳಲ್ಲಿ 20 ಸುತ್ತು ಎಣಿಕೆ.
ಇದನ್ನೂ ಓದಿ: 30 ಸಾವಿರ ಸಂಬಳ ಪಡೆಯುವ ಸರ್ಕಾರಿ ಮಹಿಳಾ ಅಧಿಕಾರಿ, 7 ಕೋಟಿ ರೂ.ಆಸ್ತಿಗೆ ಒಡತಿ; ಬಂಗಲೆಯಲ್ಲಿ ಶೋಧ
ಮಸ್ಕಿ ವಿಧಾನಸಭಾ ಕ್ಷೇತ್ರ
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 211169 ಮತದಾರರು ಇದ್ದು,ಈ ಬಾರಿ 149956 ಜನರು ಮತದಾನ ಮಾಡಿದ್ದಾರೆ. ಮಸ್ಕಿ ಕ್ಷೇತ್ರದ ಮತ ಎಣಿಕೆ ಕಾರ್ಯವು 14 ಟೇಬಲ್ ಗಳಲ್ಲಿ 17 ಸುತ್ತು ಎಣಿಕೆ ನಡೆಯಲಿದೆ ಎಂದರು.
ಒಟ್ಟು ಕ್ಷೇತ್ರಗಳಿಗೆ 134 ಸುತ್ತು ಮತ ಎಣಿಕೆ ನಡೆಯಲಿದ್ದು,ಮತ ಎಣಿಕೆ ಕಾರ್ಯಕ್ಕೆ 378 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಭದ್ರತೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಮಾತನಾಡಿ, ಮತ ಎಣಿಕೆ ದಿನದಂದು ಜಿಲ್ಲೆಯಾದ್ಯಂತ ಪೊಲೀಸ್ ಫುಲ್ ಅಲರ್ಟ್ ಆಗಿರಲಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದೆ. ಹೀಗಾಗಿ ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದರು.
ಮತ ಎಣಿಕೆ ಕೇಂದ್ರದ ಸುತ್ತ ಎಸ್ ಪಿ 01. ಡಿಎಸ್‌ಪಿ 02, ಸಿಪಿಐ 12, ಪಿಎಸ್‌ಐ 25, ಎಎಸ್‌ಐ 52, ಪಿಸಿ 350, ಹೋಮ್ ಗಾರ್ಡ್ 100, ಕೇಂದ್ರ ಸಶಸ್ತ್ರ ಪಡೆ 03, ಕೆಎಸ್‌ಆರ್‌ಪಿ ತುಕಡಿ 02, ಜಿಲ್ಲಾ ಸಶಸ್ತ್ರ ಮೀಸಲು ತುಕಡಿ 02 ಆಯೋಜಸಲಾಗಿದೆ.
ಇದನ್ನೂ ಓದಿ: KPSC Departmental Examination : ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಯನ್ನು ಮತ್ತೆ ಮುಂದೂಡಿದ ಕೆಪಿಎಸ್‌ಸಿ
ಇನ್ನೂ 07 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 10 ಕೇಂದ್ರ ಸಶಸ್ತ್ರ ಮೀಸಲು ಪಡೆ. 8 ಕೆಎಸ್‌ಆರ್‌ಪಿ ತುಕಡಿ. 08 ಜಿಲ್ಲಾ ಸಶಸ್ತ್ರ ಮೀಸಲು ಪಡೆ. ಹೋಮ್‌ಗಾರ್ಡ್ 100 ಹಾಗೂ ಸಂಪೂರ್ಣ ಸಿವಿಲ್ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸಿಇಒ ಶಶಿಧರ್ ಕುರೇರ್ ಪಾಲ್ಗೊಂಡಿದ್ದರು.