ರಾಯಚೂರು: ಇಲ್ಲಿನ ಜಯರಾಭಾದ್ ಶಾಲೆ ಮುಂಭಾಗ ತಡರಾತ್ರಿ ಬಾಲಕರಿಬ್ಬರು ಗಲಾಟೆ (Raichur News) ಮಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಮತ್ತೊಬ್ಬನಿಗೆ ಚೂರಿಯಿಂದ ಇರಿದಿದ್ದಾನೆ.
ಕ್ಷುಲ್ಲಕ ಕಾರಣಕ್ಕೆ ಬಾಲಕರಿಬ್ಬರ ನಡುವೆ ತಡರಾತ್ರಿ ಗಲಾಟೆ ನಡೆದಿದೆ. ಈ ವೇಳೆ ಬಾಲಕ ಚೂರಿ ಇರಿದು ಕ್ರೌರ್ಯ ಮೆರೆದಿದ್ದಾನೆ. ಗಾಯಗೊಳಗಾದ ಬಾಲಕ ಹಾಗೂ ಚೂರಿ ಇರಿದ ಬಾಲಕ ಇಬ್ಬರು ಗೆಳೆಯರು ಎಂದು ತಿಳಿದು ಬಂದಿದೆ. ಗೆಳೆಯರಿಬ್ಬರು ಶಾಲೆ ಬಿಟ್ಟು ಓಡಾಡಿಕೊಂಡಿದ್ದರು ಎನ್ನಲಾಗಿದೆ.
ಗಾಯಾಳು ಬಾಲಕರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಾಲಕನ ಕಿವಿಯ ಭಾಗಕ್ಕೆ ಚೂರಿ ಇರಿಯಲಾಗಿದೆ. ಆ ಚೂರಿಯನ್ನು ತೆಗೆಯಲು ವೈದ್ಯರು ಹರಸಾಹಸ ಪಡಬೇಕಾಯಿತು. ಹೀಗಾಗಿ ರಿಮ್ಸ್‌ನಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಚಿವರ ಮನೆ ಮುಂದೆಯೇ ಅಮಾನುಷ ಕೃತ್ಯ, ಹಲವು ಬಾರಿ ಕಾರು ಹತ್ತಿಸಿ ರೌಡಿಶೀಟರ್ ಕೊಲೆ ಯತ್ನ!
ಬೆಂಗಳೂರು: ರಾಜಧಾನಿಯಲ್ಲಿ ರೌಡಿಗಳ ಪುಂಡಾಟಿಕೆ ಹಾಗೂ ಮಾರಕ ಕೃತ್ಯಗಳು ಮಿತಿ ಮೀರಿದ್ದಕ್ಕೆ ಇನ್ನೊಂದು ಉದಾಹರಣೆಯ ಪ್ರಕರಣವೊಂದು ನಡೆದಿದೆ. ಸಚಿವರೊಬ್ಬರ ಮನೆ ಮುಂದೆಯೇ ಅಮಾನುಷವಾದ ಘಟನೆ ನಡೆದಿದೆ.
ರೌಡಿಗಳು ತಮ್ಮ ಸ್ನೇಹಿತನ ಮೇಲೆ ಹಲವಾರು ಬಾರಿ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ. ಇದು ನಡೆದಿರುವುದು ಸಚಿವೆ ಶಶಿಕಲಾ ಜೊಲ್ಲೆ ಅವರ ಮನೆಯ ಮುಂದೆಯೇ ಆಗಿದೆ. ಬೆಳ್ಳಂಬೆಳಗ್ಗೆ ನಡೆದ ಈ ಘಟನೆಯಿಂದ ಜನ ಬೆಚ್ಚಿಬಿದ್ದಿದ್ದಾರೆ.
ಮಾರ್ಚ್ 21ರ ಮುಂಜಾನೆ 5.30ರಿಂದ 6 ಗಂಟೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹೈಗ್ರೌಂಡ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಗಗನ್ ಶರ್ಮಾ ಎಂಬಾತನ ಮೇಲೆ ಆತನ ಸ್ನೇಹಿತರೇ ಆದ ಸುನಿಲ್ ಕುಮಾರ್, ಅರುಣ್, ಕೃಷ್ಣ ಎಂಬುವವರು ಈ ವಿಕೃತಿ ಮೆರೆದಿದ್ದಾರೆ.
ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟರ್ ಆಗಿರುವ ಸುನಿಲ್ ಕುಮಾರ್ ಹಾಗೂ ಗಗನ್ ನಡುವೆ ಆಸ್ತಿ ವಿಚಾರಕ್ಕಾಗಿ ಮನಸ್ತಾಪ ಉಂಟಾಗಿತ್ತು. ಮಾರ್ಚ್ 20ರಂದು ರಾತ್ರಿ 10 ಗಂಟೆಗೆ ಮಾತನಾಡಬೇಕು ಎಂದು ಗಗನ್‌ನನ್ನು ಸುನಿಲ್ ಫ್ರೇಜರ್ ಟೌನ್ ಬಳಿ ಕರೆಸಿಕೊಂಡಿದ್ದ. ಅಲ್ಲಿಂದ ಕಾರಿನಲ್ಲಿ ಕೂರಿಸಿಕೊಂಡು ಸಿಟಿ ರೌಂಡ್ಸ್ ಹಾಕಿದ್ದು, 21ರ ಬೆಳಗ್ಗೆ ಜಯಮಹಲ್ ರಸ್ತೆ ಬಳಿ ಕಾರು ನಿಲ್ಲಿಸಿದ್ದಾರೆ. ಕಾರಿನ ಒಳಗೇ ಗಲಾಟೆ ಮಾಡಿಕೊಂಡಿದ್ದು, ಸುನಿಲ್ ಸೇರಿ ಮೂವರಿಂದ ಗಗನ್ ಮೇಲೆ ಹಲ್ಲೆ ನಡೆದಿದೆ. ದೊಣ್ಣೆ, ಕೈಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಕೆಳಗೆ ತಳ್ಳಿ ಮೂರ್ನಾಲ್ಕು ಬಾರಿ ಕಾರು ಹತ್ತಿಸಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: SM Krishna: ಬೆಂಗಳೂರಿಗೆ ಐಟಿ ಗರಿ ಮೂಡಿಸಿದ ಯುವಜನರ ಕಣ್ಮಣಿ, ಪದ್ಮವಿಭೂಷಣ ಎಸ್.ಎಂ. ಕೃಷ್ಣ
ಘಟನೆಯಲ್ಲಿ ಗಗನ್ ಕಾಲು, ಪಕ್ಕೆಲಬು ಮುರಿದಿದ್ದು, ಕಣ್ಣು, ಮುಖ, ಕೈಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ರೌಡಿಶೀಟರ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಸ್ಥಳೀಯರು ಜೆಸಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಸಿ ನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಆರೋಪಿ ಸುನಿಲ್‌ನನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆದಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ