Site icon Vistara News

Raichur News: ವಿಶ್ವ ಪರಿಸರ ದಿನಾಚರಣೆಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಕಡಿವಾಣಕ್ಕೆ ವಿಶೇಷ ಜಾಗೃತಿ

World Environment Day in Raichur district

ರಾಯಚೂರು: ಜಿಲ್ಲೆಯ ರಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ (World Environment Day) ಅಂಗವಾಗಿ ಸಸಿ ನೆಡುವ‌ ಮೂಲಕ ಪರಿಸರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ಗ್ರೀನ್ ರಾಯಚೂರು, ಶಿಲ್ಪಾ ಫೌಂಡೇಶನ್, ಪರ್ಯಾವರಣ ಸಂರಕ್ಷಣ ಗತಿವಿಧಿ ಸಂಸ್ಥೆ, ವಿಸ್ತಾರ ನ್ಯೂಸ್‌ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನೀರು ಹಾಕುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು. ಇದೇ ವೇಳೆ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಕಡಿವಾಣ ಹಾಕುವ ಬಗ್ಗೆ ಜಾಗೃತಿ ‌ಮೂಡಿಸಲಾಯಿತು.

ಇದನ್ನೂ ಓದಿ: NIRF Ranking 2023 : ಬೆಂಗಳೂರು ಐಐಎಸ್‌ಸಿ ಸೆಕೆಂಡ್‌; ಲಾ ಮತ್ತು ರಿಸರ್ಚ್‌ನಲ್ಲಿ ಬೆಂಗಳೂರು ಫಸ್ಟ್‌

ಪರಿಸರ ಮಾಲಿನ್ಯ ನಿಯಂತ್ರಣ ‌ಮಂಡಳಿಯ ಅಧಿಕಾರಿ ಎಂ. ನತೇಶ್ ಮಾತನಾಡಿ, ವಿದ್ಯಾ‌ರ್ಥಿಗಳು, ಅಧ್ಯಾಪಕರು ಸೇರಿದಂತೆ ಎಲ್ಲರೂ ಸೇರಿ ಪರಿಸರವನ್ನು ಉಳಿಸಬೇಕಿದೆ. ಕಳೆದ ಬಾರಿ ಗ್ರೀನ್ ರಾಯಚೂರು ಸಂಸ್ಥೆಗೆ ಪರಿಸರ ರಾಜ್ಯ ಪ್ರಶಸ್ತಿ ಬಂದಿತ್ತು. ಈ ಬಾರಿ ಸಿಂಧನೂರಿನ ವನಸಿರಿ ಸಂಸ್ಥೆಗೆ ಪರಿಸರ ರಾಜ್ಯ ಪ್ರಶಸ್ತಿ ಲಭಿಸಿದೆ. ರಾಯಚೂರು ಜಿಲ್ಲೆಗೆ ಸತತವಾಗಿ ಎರಡೂ ಬಾರಿ ಪರಿಸರ ರಾಜ್ಯ ಪ್ರಶಸ್ತಿ ಒಲಿದು ಬಂದಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ರಾಯಚೂರು ಜಿಲ್ಲೆ‌ ಪರಿಸರ ಉಳಿವಿಗೆ ಮಾದರಿ ಆಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ಗ್ರೀನ್ ರಾಯಚೂರು ಸಂಸ್ಥೆಯ ಗೌರವಾಧ್ಯಕ್ಷ ಕೊಂಡ ಶ್ರೀ ಕೃಷ್ಣಮೂರ್ತಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮನೆಯ ‌ಮುಂದೆ ಒಂದು ಗಿಡ ನೆಟ್ಟರೆ ಸಾಕು ಪರಿಸರ ಉಳಿಯುತ್ತದೆ ಎಂದ ಅವರು, ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಪ್ಲೇಟ್ ಬದಲು ಸ್ಟಿಲ್ ಪ್ಲೇಟ್ ಜನರಿಗೆ ವಿತರಿಸಿ, ಪ್ಲಾಸ್ಟಿಕ್ ಬ್ಯಾನ್ ಬಗ್ಗೆ ಅರಿವು ಮೂಡಿಸುತ್ತಿರುವುದು ಗಮನಕ್ಕೆ ಬಂದಿತು. ನಮ್ಮಲ್ಲೂ ಏಕೆ ಇದನ್ನು ಅಳವಡಿಕೆ ಮಾಡಬಾರದೆಂದು ವಿಚಾರ ಮಾಡಿ, ಒಂದು ಕಾರ್ಯಕ್ರಮಕ್ಕೆ ಏನೆಲ್ಲ ವಸ್ತುಗಳು ಬೇಕು ಎಂದು ಅಧ್ಯಯನ ಮಾಡಿ, ಈಗ ಅನುಷ್ಠಾನಕ್ಕೆ ತರುವ ಪ್ರಯತ್ನವಾಗಿದೆ ಎಂದರು.

ಇದನ್ನೂ ಓದಿ: Murder Case: ಟೋಲ್‌ ವಿಚಾರಕ್ಕೆ ಕಿರಿಕ್‌; ಹಾಕಿ ಸ್ಟಿಕ್‌ನಿಂದ ಬಡಿದು ಕೊಂದೇಬಿಟ್ಟರು ದುರುಳರು

ಗ್ಲಾಸ್, ಪ್ಲೇಟ್, ಸ್ಪೂನ್ ಉಚಿತವಾಗಿ ವಿತರಣೆ‌ ಮಾಡಲು ಶುರು ಮಾಡಿದ್ದೇವೆ. ಯಾರೇ ಆಗಲಿ ನಮ್ಮನ್ನು ಸಂಪರ್ಕ ಮಾಡಿದರೆ, ಉಚಿತವಾಗಿ ಸ್ಟೀಲ್ ಪ್ಲೇಟ್‌ಗಳನ್ನು ಕೊಟ್ಟು ನಾವೇ ಅದನ್ನು ಮರಳಿ ತರುತ್ತವೆ. ಇದು ಬಡ ಕುಟುಂಬದ‌ ಜನರಿಗೂ ಅನುಕೂಲವಾಗುತ್ತವೆ. ಇನ್ನು ಸಭೆ ಸಮಾರಂಭಗಳಲ್ಲಿ ‌ಪ್ಲಾಸ್ಟಿಕ್ ಪ್ಲೇಟ್ ಬ್ಯಾನ್ ಮಾಡಬೇಕು, ಅದರಲ್ಲಿ ಪ್ಲಾಸ್ಟಿಕ್‌ ಪೇಪರ್ ಇರುತ್ತದೆ ಇದು ಜನರ ಜೀವಕ್ಕೆ ಹಾನಿಯುಂಟು ಮಾಡುತ್ತದೆ ಎಂದು ತಿಳಿಸಿದರು.

ರಿಮ್ಸ್ ನಿರ್ದೇಶಕ ಡಾ.ಬಸವರಾಜ್ ಪೀರಾಪುರ ಮಾತನಾಡಿ, ಪ್ರತಿ ವಿದ್ಯಾರ್ಥಿಗೆ ಒಂದು ಸಸಿ ನೆಡುವ ಮತ್ತು ನಿರ್ವಹಣೆ ‌ಮಾಡುವ ಜವಾಬ್ದಾರಿ ನೀಡಲಾಗಿದೆ. ಈಗಾಗಲೇ ರಿಮ್ಸ್ ಆವರಣದಲ್ಲಿ ಸಾಕಷ್ಟು ಗಿಡ‌ ಮರಗಳನ್ನು ನೆಡಲಾಗಿದೆ. ಹೊರಾಂಗಣಕ್ಕೂ ನಮ್ಮ‌ ಕ್ಯಾಂಪಸ್‌ಗೂ‌ ಹೋಲಿಕೆ‌‌ ಮಾಡಿದರೆ, ನಮ್ಮಲ್ಲಿ‌ ಬಿಸಿಲಿನ ತಾಪಮಾನ ಒಂದು ಡಿಗ್ರಿ ‌ಕಡಿಮೆ ಇರುತ್ತದೆ ಎಂದರು.

ಶಿಲ್ಪಾ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥ ವಿಷ್ಣುಕಾಂತ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರೀನ್ ರಾಯಚೂರು ಸಂಸ್ಥೆಯ ಅಧ್ಯಕ್ಷೆ ಸರಸ್ವತಿ ಪರಿಸರ ರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಿದರು.

ಇದನ್ನೂ ಓದಿ: Chakravarthy Sulibele: ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್‌

ಈ ಸಂದರ್ಭದಲ್ಲಿ ರಾಜೇಂದ್ರ, ವೆಂಕಟೇಶ್, ಸಂದ್ಯಾ ನಾಯ್ಕ್, ಗಿರೀಶ್, ಡಾ. ಅಮರವರ್ಮ ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version