ಮಸ್ಕಿ: ಕ್ರೀಡಾಪಟುಗಳು (Athletes) ಸೋಲು-ಗೆಲುವು ಲೆಕ್ಕಿಸದೇ ಕ್ರೀಡಾ (Sports) ಮನೋಭಾವದಿಂದ ಆಟವಾಡಬೇಕು ಎಂದು ಸಿ.ಆರ್.ಪಿ. ರಾಮಸ್ವಾಮಿ ಹೇಳಿದರು.
ಪಟ್ಟಣದ ಬಿ.ಎಂ.ಎಲ್ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಸ್ಕಿ ಬಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ದೈಹಿಕ ಸದೃಢತೆಗೆ ಕ್ರೀಡಾಕೂಟಗಳು ಅವಶ್ಯವಿದ್ದು, ಸೋಲು ಗೆಲುವು ಲೆಕ್ಕಿಸದೇ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Koppala News: ಮಂಗಗಳ ವಾಸಸ್ಥಾನವಾದ ಕುಕನೂರಿನ ತಹಸೀಲ್ದಾರ್ ಕಾರ್ಯಾಲಯ!
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಯಾನಂದ ಜೋಗಿನ್ ಮಾತನಾಡಿ, ಗ್ರಾಮೀಣ ಪ್ರತಿಭೆಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಶಾಲಾ ಹಂತದ ಕ್ರೀಡಾಕೂಟಗಳು ಬುನಾದಿ ಹಾಕುತ್ತವೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: Vijayanagara News: ಶಿವಪುರ ಗ್ರಾಮದಲ್ಲಿ ಕಾಡುಹಂದಿಗಳ ದಾಳಿ; ಮೆಕ್ಕೆಜೋಳ ಬೆಳೆ ನಾಶ
ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ನರಸರೆಡ್ಡಿ, ಪ್ರಭಾರಿ ಶಿಕ್ಷಣ ಅಧಿಕಾರಿ ಬಸಪ್ಪ ತನಿಖೆದಾರ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಲ್ಲಿಕಾರ್ಜುನ್ ಮೇಟಿ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಸ್ವಾಮಿ, ಜೋಗಿನಾ ರಾಮಣ್ಣ ಪ್ರೌಢಶಾಲೆಯ ಮುಖ್ಯಗುರು ಸಿದ್ದರೆಡ್ಡಿ, ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವೀರೇಶ ಹೂಗಾರ, ಬಿಎಂಎಲ್, ಜೋಗಿನ ರಾಮಣ್ಣ ಸ್ಮಾರಕ ಪ್ರೌಢಶಾಲೆ, ರಾಷ್ಟ್ರೀಯ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ, ತಾಲೂಕ ದೈಹಿಕ ಶಿಕ್ಷಣ ಶಿಕ್ಷಕರು, ವಿವಿಧ ಶಾಲೆ ಶಿಕ್ಷಕರು ಪಾಲ್ಗೊಂಡಿದ್ದರು.