ರಾಯಚೂರು: ಕಲ್ಯಾಣ ಕರ್ನಾಟಕದ ತೀರಾ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ರಾಯಚೂರಿನ ರಿಮ್ಸ್ ಆಸ್ಪತ್ರೆಯ ವೈದ್ಯಕೀಯ ವಿಭಾಗವು ಸಾಧನೆಗೈದಿದೆ. ಹುಟ್ಟು ಕಿವುಡುತನದಿಂದ ಬಳಲುತ್ತಿದ್ದ ಇಬ್ಬರು ಪುಟ್ಟ ಬಾಲಕರಿಗೆ ರಿಮ್ಸ್ ವೈದ್ಯರು ಇಯರ್ ಕಾಕ್ಲೇರ್ ಪ್ಲಾಂಟ್ ಸರ್ಜರಿ ಮಾಡಿ ಇತಿಹಾಸ ಬರೆದಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ರಾಜ್ಯ ಸರ್ಕಾರವು ಹುಟ್ಟು ಕಿವುಡುತನ ಪರಿಹಾರಕ್ಕೆಂದೆ ಕಾಕ್ಲೇರ್ ಪ್ಲಾಂಟ್ ಸ್ಕೀಂ ಅನ್ನು ಪರಿಚಯಸಿದೆ. ರಾಜ್ಯಾದ್ಯಂತ ಒಟ್ಟು 500 ಹುಟ್ಟು ಕಿವುಡು ಮಕ್ಕಳಿಗೆ ಕಾಕ್ಲೇರ್ ಪ್ಲಾಂಟ್ ಸರ್ಜರಿಗೆ ಟಾರ್ಗೆಟ್ ನೀಡಲಾಗಿದೆ. ಅದರಂತೆ ರಾಯಚೂರು ನಗರದ ರಿಮ್ಸ್ ಆಸ್ಪತ್ರೆಗೆ 80 ಮಕ್ಕಳ ಟಾರ್ಗೆಟ್ ನೀಡಲಾಗಿದೆ.
ಸರ್ಜರಿ ಕುರಿತು ರಿಮ್ಸ್ ವೈದ್ಯರ ಮಾತು
ಅದರ ಭಾಗವಾಗಿ ಸಿಂಧನೂರು ಹಾಗೂ ಸಿರವಾರ ತಾಲೂಕಿನ ಇಬ್ಬರು ಮಕ್ಕಳಿಗೆ ಈ ಕಾಕ್ಲೇರ್ ಪ್ಲಾಂಟ್ ಸರ್ಜರಿ ಮಾಡಲಾಗಿದೆ. ಸುಮಾರು ನಾಲ್ಕೈದು ಗಂಟೆಗಳ ಕಾಲ ನಡೆಯುವ ಈ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಇದೇ ಕಾಕ್ಲೇರ್ ಪ್ಲಾಂಟ್ ಸರ್ಜರಿ ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಲು ಸುಮಾರು 12 ಲಕ್ಷ ರೂ. ಖರ್ಚಾಗುತ್ತದೆ. ಆದರೆ, ಸರ್ಕಾರದ ಈ ಸ್ಕೀಂನಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ.
ಇದನ್ನೂ ಓದಿ: Praveen Nettaru Murder: ಪ್ರವೀಣ್ ಹತ್ಯೆ ಆರೋಪಿ ತುಫೈಲ್‌ನನ್ನು NIA ಹಿಡಿದದ್ದು ಹೀಗೆ!
ಬಿಪಿಎಲ್ ಕಾರ್ಡ್, ಎಪಿಎಲ್ ಕಾರ್ಡ್‌ದಾರರಿಗೆ ಮಾತ್ರ ಎಂಬ ನಿಯಮವಿಲ್ಲ. ಎಲ್ಲ ವರ್ಗದ ಜನರಿಗೂ ಇದು ಅನ್ವಯವಾಗಲಿದ್ದು ಹುಟ್ಟು ಕಿವುಡು ಮಕ್ಕಳನ್ನು ಹೊಂದಿರುವ ಪೋಷಕರು ಆರು ವರ್ಷದೊಳಗೆ ರಿಮ್ಸ್ ಆಸ್ಪತ್ರೆಗೆ ಕರೆತರುವಂತೆ ರಿಮ್ಸ್ ಆಸ್ಪತ್ರೆ ಆಡಳಿತ ವರ್ಗ ತಿಳಿಸಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ