ರಾಯಚೂರು: ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಬೀದಿ ನಾಯಿಯೊಂದು ದಾಳಿ (Dog Attack) ನಡೆಸಿ ಅಟ್ಟಾಡಿಸಿ ಕಿತ್ತು ತಿಂದಿತ್ತು. ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ನಾಲ್ಕು ವರ್ಷದ ಬಾಲಕಿ ಇದೀಗ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ರಾಯಚೂರಿನ ಕೊರವಿಹಾಳ ಗ್ರಾಮದಲ್ಲಿ ಬೀದಿ ನಾಯಿ ದಾಳಿಗೆ ನಾಲ್ಕು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಲಾವಣ್ಯ(4) ನಾಯಿ ಕಡಿತಕ್ಕೆ ಬಲಿಯಾದವಳು.
ಕೊರವಿಹಾಳ ಗ್ರಾಮದ ಕೀರಲಿಂಗ ಎಂಬುವವರ ಮಗಳು ಲಾವಣ್ಯ ಕಳೆದ ಶನಿವಾರ ಮೃತಪಟ್ಟಿದ್ದು, ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಲಾವಣ್ಯ ಸೇರಿ ನಾಲ್ಕೈದು ಮಕ್ಕಳು ಮನೆ ಮುಂದೆ ಆಟವಾಡುತ್ತಿದ್ದರು. ಈ ವೇಳೆ ಬೀದಿ ನಾಯಿಯೊಂದು ಮಕ್ಕಳ ಮೇಲೆ ಏಕಾಏಕಿ ದಾಳಿ ನಡೆಸಿತ್ತು. ದಾಳಿ ಸಮಯದಲ್ಲಿ ಲಾವಣ್ಯಳ ಕತ್ತಿನ ಹಿಂಭಾಗಕ್ಕೆ ದಾಳಿ ಮಾಡಿದ ನಾಯಿ ಕ್ರೂರವಾಗಿ ಕಚ್ಚಿತ್ತು.
ಕಳೆದ 15 ದಿನಗಳ ಹಿಂದೆ ನಡೆದ ಈ ದಾಳಿಯಲ್ಲಿ ಕೊರವಿಹಾಳ ಗ್ರಾಮದ ಏಳು ಮಕ್ಕಳಿಗೆ ನಾಯಿ ಕಚ್ಚಿತ್ತು. ಇತ್ತ ನಾಯಿ ದಾಳಿಯಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಲಾವಣ್ಯಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇತ್ತೀಚೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಾವಣ್ಯ ಕಳೆದ ಶನಿವಾರ ಏಕಾಏಕಿ ಮೃತಪಟ್ಟಿದ್ದಾಳೆ.
ಇದನ್ನೂ ಓದಿ: Dogs Attack: ನಾಯಿಗಳು ದಾಳಿ ಮಾಡಲು ಬಂದರೆ ಏನು ಮಾಡಬೇಕು? ಹೇಗೆ ರಕ್ಷಿಸಿಕೊಳ್ಳಬೇಕು?
ರೊಚ್ಚಿಗೆದ್ದು ನಾಯಿಯನ್ನೆ ಕೊಂದರು
ಒಬ್ಬಂಟಿಯಾಗಿ ಓಡಾಡುವರನ್ನು ಕಂಡರೆ ಸಾಕು ರೊಚ್ಚಿಗೆದ್ದ ಬೀದಿ ನಾಯಿಗಳು (Street Dog Attack ) ಅಟ್ಟಾಡಿಸಿಕೊಂಡು ಹೋಗಿ ದಾಳಿ ಮಾಡುತ್ತಿರುವುದು ಕಂಡು ಬಂದಿತ್ತು. ವಯೋವೃದ್ಧರು ಹಾಗೂ ಶಾಲಾ ಮಕ್ಕಳು ಒಬ್ಬೊಬ್ಬರೇ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿತ್ತು. ಸಿಕ್ಕ ಸಿಕ್ಕವರ ಮೇಲೆ ಎರಗಿ ಕಚ್ಚುತ್ತಿದ್ದ ನಾಯಿಯಿಂದ ಇತರೆ ಮಕ್ಕಳ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಈ ಎಲ್ಲ ಘಟನೆ ಬಳಿಕ ರೊಚ್ಚಿ ಗೆದ್ದ ಗ್ರಾಮಸ್ಥರು ದಾಳಿ ಮಾಡಿದ್ದ ಬೀದಿ ನಾಯಿಯನ್ನು ಹಿಡಿದು ಕೊಂದು ಹಾಕಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ