Site icon Vistara News

ಮೆಡಿಕಲ್‌ ಕಾಲೇಜಿನಲ್ಲಿ ಸ್ಟೀಲ್‌ ರಾಡ್‌ನಿಂದ ವಿದ್ಯಾರ್ಥಿ ಹಲ್ಲೆ, ಇಬ್ಬರಿಗೆ ಗಾಯ

medical students

ರಾಯಚೂರು: ಇಲ್ಲಿನ ಮೆಡಿಕಲ್ ಕಾಲೇಜಿನ ಕ್ಲಾಸ್‌ರೂಂನಲ್ಲಿಯೇ ವಿದ್ಯಾರ್ಥಿಗಳು ಲೆಕ್ಚರರ್‌ ಮುಂದೆ ಉಕ್ಕಿನ ರಾಡ್ ಹಿಡಿದು ಮಾರಾಮಾರಿಯಲ್ಲಿ ತೊಡಗಿದ್ದು, ಒಬ್ಬ ವಿದ್ಯಾರ್ಥಿಯ ತಲೆಗೆ ಗಂಭೀರ ಗಾಯವಾಗಿದೆ.

ರಾಯಚೂರಿನ ನವೋದಯ ‌ಮೆಡಿಕಲ್ ಕಾಲೇಜಿನಲ್ಲಿ ಘಟನೆ ನಡೆದಿದೆ. ಗಲಾಟೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಯ ತಲೆಗೆ ಗಂಭೀರ ಗಾಯವಾಗಿದೆ. ಇನ್ನೊಬ್ಬ ನರ್ಸಿಂಗ್ ವಿದ್ಯಾರ್ಥಿ ಹಣೆಗೆ ಬಲವಾದ ಪೆಟ್ಟು ಬಿದ್ದಿದೆ. ಶಂಕರ್ ಮತ್ತು ಶಂಭುಲಿಂಗ ಗಾಯಗೊಂಡ ನರ್ಸಿಂಗ್ ವಿದ್ಯಾರ್ಥಿಗಳು. ಅದೇ ತರಗತಿಯ ರೋಹಿತ್ ಎಂಬ ವಿದ್ಯಾರ್ಥಿ ಹಲ್ಲೆ ನಡೆಸಿದ್ದಾನೆ.

ಮೂವರೂ ಪ್ರಥಮ ವರ್ಷದ ಬಿಎಸ್‌ಸಿ‌ ನರ್ಸಿಂಗ್ ವಿದ್ಯಾರ್ಥಿಗಳಾಗಿದ್ದು, ತಾನು ಸ್ಟೇಟಸ್ ಹಾಕಿದ್ದ ತಾಯಿಯ ಫೋಟೋ ದುರ್ಬಳಕೆ ಮಾಡಿದ್ದಾರೆ ಎಂಬುದು ‌ರೋಹಿತ್‌ ಆರೋಪ‌. ತನ್ನನ್ನು ಸದಾ ರೇಗಿಸುತ್ತಿದ್ದ ಶಂಭುಲಿಂಗ, ಶಂಕರ್‌ರಿಗೆ ಪಾಠ ಕಲಿಸಲು ಮುಂದಾದ ರೋಹಿತ್‌ ಕಾಲೇಜ್‌ ಟೆರೇಸ್‌ನಿಂದ ಸ್ಟೀಲ್‌ ರಾಡ್‌ ತೆಗೆದುಕೊಂಡು ಬಂದು ಇಬ್ಬರಿಗೂ ಬಾರಿಸಿದ್ದಾನೆ. ಕಣ್ಣೆದುರೇ ನಡೆದ ಭೀಕರ ಮಾರಾಮಾರಿ ಕಂಡು ಲೆಕ್ಚರರ್ ದಿಗ್ಭ್ರಾಂತರಾಗಿದ್ದಾರೆ.

ಘಟನೆ ಮುಚ್ಚಿ ಹಾಕಲು ಕಾಲೇಜ್ ಪ್ರಿನ್ಸಿಪಾಲ್ ಯತ್ನಿಸಿದ್ದು, ಆಸ್ಪತ್ರೆ ಬಳಿ ಯಾರನ್ನೂ ಬಿಡದಂತೆ ನವೋದಯ ಸಂಸ್ಥೆಯ ರಿಜಿಸ್ಟ್ರಾರ್ ಹೇಳಿದ್ದಾರೆ ಎನ್ನಲಾಗಿದೆ. ತರಗತಿ ಹಾಗೂ ಕಾಲೇಜು ಕಾರಿಡಾರ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸದೆ ನಿರ್ಲಕ್ಷ್ಯ ತೋರಲಾಗಿದೆ.

ಇದನ್ನೂ ಓದಿ | Assault | ಹಾಸ್ಟೆಲ್‌ ಅಡುಗೆ ಸಿಬ್ಬಂದಿಯಿಂದ ವಿದ್ಯಾರ್ಥಿನಿ ಮೇಲೆ ಮಾರಣಾಂತಿಕ ಹಲ್ಲೆ; ದಿನವೂ ದೌರ್ಜನ್ಯ ಆರೋಪ

Exit mobile version