Site icon Vistara News

Murder Case : ಜಾತಿ ಕಲಹ; ಕಾಂಗ್ರೆಸ್‌ ಮುಖಂಡನ ಕಗ್ಗೊಲೆ!

murder case

ರಾಯಚೂರು: ಜಾತಿ ಕಲಹಕ್ಕೆ ಕಾಂಗ್ರೆಸ್ ಮುಖಂಡನೊಬ್ಬನ ಕಗ್ಗೊಲೆ (Murder Case) ಆಗಿದೆ. ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಕಾಂಗ್ರೆಸ್ ಮುಖಂಡ ಪ್ರಸಾದ್ (40) ಕೊಲೆಯಾದವರು.

ಪ್ರಸಾದ್‌ ಸೋಮವಾರ ಬೆಳಗ್ಗೆ ಬೈಕ್‌ನಲ್ಲಿ ತಮ್ಮ ಗದ್ದೆಗೆ ಹೋಗುವಾಗ ಕೆಲವರು ಅಡ್ಡಗಟ್ಟಿದ್ದಾರೆ. ನೋಡ ನೋಡುತ್ತಿದ್ದಂತೆ ಮಾರಾಕಾಸ್ತ್ರದಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಸ್‌ಪಿ ನಿಖಿಲ್.ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಾನ್ವಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕೊಲೆಯಾದ ಕಾಂಗ್ರೆಸ್‌ ಮುಖಂಡ ಪ್ರಸಾದ್‌

ಆಸ್ಪತ್ರೆ ಬಳಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸದ್ಯ ಪ್ರಕರಣ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Physical Abuse : ಮಾಲ್‌ನಲ್ಲಿ ಯುವತಿಗೆ ಡಿಕ್ಕಿ ಹೊಡೆದು ಹಿಂಭಾಗ ಮುಟ್ಟಿ ಎಸ್ಕೇಪ್‌ ಆದ ಕಾಮುಕ!

ಹೇಮಾವತಿ ಹಿನ್ನೀರಿನಲ್ಲಿ ಅನುಮಾನಾಸ್ಪದ ಶವ ಪತ್ತೆ!

ಹಾಸನ ತಾಲೂಕಿನ‌ ಶೆಟ್ಟಿಹಳ್ಳಿ ಗ್ರಾಮದ ಸಮೀಪದ ಹೇಮಾವತಿ ಹಿನ್ನೀರಿನಲ್ಲಿ ಅನುಮಾನಾಸ್ಪದ ಶವ ಪತ್ತೆಯಾಗಿದೆ. ಕೊಲೆ‌‌ ಮಾಡಿ ಜಲಾಶಯಕ್ಕೆ ಮೃತದೇಹವನ್ನು ಬಿಸಾಡಿದ್ದಾರೆ. ಮೃತದೇಹಕ್ಕೆ ಕಲ್ಲುಕಟ್ಟಿ ಡ್ಯಾಂಗೆ ಎಸೆದಿದ್ದಾರೆ.

ಮೀನುಗಾರರಿಗೆ ಸೋಮವಾರ ಬೆಳಗ್ಗೆ ನೀರಲ್ಲಿ ಮೃತದೇಹವು ತೇಲುತ್ತಿರುವುದು ಕಂಡಿದೆ. ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೀರಿನಲ್ಲಿ ಕೊಳೆಯುತ್ತಿದ್ದ ಮೃತದೇಹವನ್ನು ಅಗ್ನಿಶಾಮಕ ದಳ ಮೇಲಕ್ಕೆ ಎತ್ತಿದ್ದಾರೆ. ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version