Site icon Vistara News

Panchamasali Reservation | ಮೀಸಲಾತಿ ಬಗ್ಗೆ ರಾಜಕಾರಣಿಗಳು ಸ್ಪಷ್ಟಪಡಿಸಬೇಕು, ಧರ್ಮಗುರುಗಳಲ್ಲ: ರಂಭಾಪುರಿ ಶ್ರೀ

Panchamasali Reservation

ರಾಯಚೂರು: ಮೀಸಲಾತಿಗಾಗಿ ಯಾರೋ ಏನೋ ಗುಂಪು ‌ಮಾಡಿ, ಸಂಘರ್ಷ ಮಾಡಿ ಸರ್ಕಾರಕ್ಕೆ ಗಡುವು ಸಲ್ಲಿಸಿದರೆ, ಅದು ಎಷ್ಟರ ಮಟ್ಟಿಗೆ ಸಫಲವಾದೀತು? ಮೀಸಲಾತಿ (Panchamasali Reservation) ಬಗ್ಗೆ ರಾಜಕಾರಣಿಗಳು ಸ್ಪಷ್ಟಪಡಿಸಬೇಕು, ಧರ್ಮ ಪೀಠಗಳು ಹೇಳುವುದು ಸಮಂಜಸ ಎನ್ನಿಸುವುದಿಲ್ಲ. ಆದರೆ ವೀರಶೈವರು ಎಲ್ಲರೂ ಒಂದಾಗಿ, ಚೆಂದಾಗಿ ಹೋಗಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಪಂಚಮಸಾಲಿ 2ಎ ಮೀಸಲಾತಿಗೆ ಸರ್ಕಾರಕ್ಕೆ ಗಡುವು ನೀಡಿರುವ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಸ್ಪಂದಿಸಿ, ನಾನು ಯಾವುದೇ ಧರ್ಮದ ಒಳಪಂಗಡದ ಬಗ್ಗೆ ಹೇಳುದಿಲ್ಲ. ವೀರಶೈವದಲ್ಲಿ ಪ್ರತಿಯೊಂದು ಒಳಪಂಗಡ ಸವಲತ್ತು ಬಯಸುವುದು ಸಹಜ. ಆದರೆ ಸಂವಿಧಾನಕ್ಕೆ ಒಂದು ಎಲ್ಲೆಯಿದೆ. ಸಂವಿಧಾನದ ವಿಚಾರಗಳನ್ನು ಇಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುತ್ತದೆ. ಅದನ್ನು ಮೀರಿ‌ ನಡೆಯಲು ರಾಜಕಾರಣಿಗಳಿಗೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ | Karnataka Elections | ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಲ್ಲ, ಕಟ್ಟಿದರೂ ನಾನು ಹೋಗಲ್ಲ ಎಂದ ಸೋಮಶೇಖರ್‌ ರೆಡ್ಡಿ

ಭಾರತ-ಚೀನಾ ಗಡಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ಗಡಿ ಭಾಗದಲ್ಲಿ ನೆರೆ ರಾಷ್ಟ್ರಗಳು ಪರೋಕ್ಷವಾಗಿ ದಬ್ಬಾಳಿಕೆ ಮಾಡುತ್ತಿವೆ. ಈ ಹಿಂದಿನ ಕೇಂದ್ರ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಅಂತಹ ಕೆಲಸಗಳಾಗಿಲ್ಲ. ಇದರಿಂದ ಚೀನಾ ಇವತ್ತು ವಿನಾಕಾರಣ ಗೊಂದಲಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂತಹ ದುಷ್ಟಶಕ್ತಿಗಳನ್ನು ಯಾವ ರೀತಿ ನಿಯಂತ್ರಿಸಬೇಕು ಎಂಬುವುದು ತಿಳಿದಿದೆ. ಭಾರತದ ಅಖಂಡತೆಯನ್ನು ಉಳಿಸಿ, ಬೆಳೆಸುವ ವಿಚಾರದಲ್ಲಿ ಅವರ ನಿಲುವು ಗಟ್ಟಿಯಾಗಿದೆ. ಇಂತಹ ಸಮಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ದೇಶ ಸರ್ವಾಂಗೀಣ ಪ್ರಗತಿಗಾಗಿ ಒಗ್ಗಟ್ಟಿನಿಂದ ಸಹಕರಿಸಬೇಕು. ಇದನ್ನು ಮೀರಿ ಚೀನಾ ದಾಳಿ ನಡೆಸಿದರೆ ಭಾರತ ಸರ್ಕಾರ ತಕ್ಕ ಉತ್ತರ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Pejavara sri | ದಲಿತರ ಮನೆಗಳಿಗೆ ಭೇಟಿ ನೀಡುವ ಹಿರಿಯ ಶ್ರೀಗಳ ಸಂಪ್ರದಾಯ ಮುಂದುವರಿಸಿದ ಪೇಜಾವರ ಸ್ವಾಮೀಜಿ

Exit mobile version