ರಾಯಚೂರು: ಗರ್ಭಿಣಿಯನ್ನು ರಕ್ಷಿಸಿ ಸಕಾಲಕ್ಕೆ ಆಸ್ಪತ್ರೆಗೆ ತಲುಪಿಸಲು ಚಾಲಕ ಪ್ರವಾಹದ ನಡುವೆಯೇ ಆಂಬ್ಯುಲೆನ್ಸ್ ಚಲಾಯಿಸಿದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ನಡೆದಿದೆ.
ಮಸ್ಕಿ ತಾಲೂಕಿನ ವೆಂಕಟಪುರ ಗ್ರಾಮದಿಂದ ಹೆರಿಗೆ ನೋವಿನಲ್ಲಿ ಬಳಲುತ್ತಿದ್ದ ಗರ್ಭಿಣಿ ಬಗ್ಗೆ ನಿನ್ನೆ ಸಂಜೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಸ್ಕಿ ತಾಲೂಕು 108 ಆರೋಗ್ಯ ಕವಚ ಆಂಬ್ಯುಲೆನ್ಸ್ ಗರ್ಭಿಣಿಯನ್ನು ಕರೆತರಲು ವೆಂಕಟಾಪುರ ಗ್ರಾಮಕ್ಕೆ ತೆರಳಿತ್ತು. ಅದರೆ ಸುಮಾರು ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ವೆಂಕಟಾಪುರ್ ಮಾರ್ಗ ಮಧ್ಯದಲ್ಲಿ ಬರುವ ಮಾರಾಲ್ದಿನ್ನಿ ಸೇತುವೆ ನೀರಿನಿಂದ ಸಂಪೂರ್ಣವಾಗಿ ಮುಳುಗಡೆಯಾಗಿತ್ತು.
ಆದರೆ ಮಹಿಳೆ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದುದರಿಂದ ಚಾಲಕ ರಿಸ್ಕ್ ತೆಗೆದುಕೊಂಡು ಪ್ರವಾಹದ ನಡುವೆಯೇ ಜಾಗರೂಕತೆಯಿಂದ ಆಂಬ್ಯುಲೆನ್ಸ್ ಚಲಾಯಿಸಿ ವೆಂಕಟಾಪುರ ತಲುಪಿಸಿದ್ದಾನೆ. ಚಾಲಕ ಮಲ್ಲಿಕಾರ್ಜುನ ಸುಂಕದ್, ಶುಶ್ರೂಷಕ ಬಸವಲಿಂಗ ಅವರ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳೆಯನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ | Ambulance Problem | ವೈದ್ಯರು ಇಲ್ಲ, ಆಂಬ್ಯುಲೆನ್ಸ್ ಚಾಲಕನೂ ಇಲ್ಲದೆ ಎದೆನೋವಿನಿಂದ ವ್ಯಕ್ತಿ ಸಾವು