ರಾಯಚೂರು: ರಾಯಚೂರಿನ ಶಕ್ತಿನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ (Raichur RTPS) ಅಗ್ನಿ ಅವಘಡ ಸಂಭವಿಸಿದೆ.
ಈ ಹಿನ್ನೆಲೆಯಲ್ಲಿ ಆರ್‌ಟಿಪಿಎಸ್‌ನ 7 ನೇ ಘಟಕದ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 210ಮೆಗಾ ವ್ಯಾಟ್ ವಿದ್ಯುತ್ ಘಟಕ ಇದಾಗಿದೆ. ಆಕಸ್ಮಿಕ ಬೆಂಕಿಯ ಕೆನ್ನಾಲಿಗೆಗೆ ಯು. ಸಿ.ಬಿ. ಸ್ವಿಚ್ ಗೇರ್, ಬ್ರೇಕರ್ ಸುಟ್ಟು ಕರಕಲಾಗಿದೆ.
ಬ್ರೇಕರ್ ಸುಟ್ಟ ಕಾರಣ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿದೆ. ಪ್ಯಾನೆಲ್ ರಿಪೇರಿಗೆ ಕನಿಷ್ಠ ಒಂದು ವಾರ ಕಾಲಾವಧಿಯ ಅಗತ್ಯವಿದೆ. ಒಂದು ವಾರಕಾಲ 7ನೇ ಘಟಕ ಸ್ಥಗಿತಕ್ಕೆ ನಿರ್ಧಾರ ಮಾಡಲಾಗಿದೆ.