Site icon Vistara News

Self Harming : ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಲ್ಯಾಂಡ್‌ ರೆಕಾರ್ಡ್‌ ಸಿಬ್ಬಂದಿ

Land record staff commits suicide by consuming acid

ರಾಯಚೂರು: ರಾಯಚೂರು ಎಸಿ ಕಚೇರಿಯ ಲ್ಯಾಂಡ್ ರೆಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಆ್ಯಸಿಡ್ ಕುಡಿದು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ರಾಯಚೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದ ಬಳಿ ಈ ಘಟನೆ ನಡೆದಿದೆ. ವಾಸಿಂ ಚೌದರಿ (36) ಮೃತ ದುರ್ದೈವಿ.

ವಾಸಿಂ ಲ್ಯಾಂಡ್ ರೆಕಾರ್ಡ್ ಕಿಪರ್ ಹುದ್ದೆಯಲ್ಲಿ ಡಿ ದರ್ಜೆ ಸಿಬ್ಬಂದಿ ಆಗಿದ್ದ. ನಗರದಲ್ಲಿರುವ ಈಜುಕೊಳದ ಬಳಿ ತೆರಳಿದ ವಾಸಿಂ ಕೂಲೆಂಟ್ ವಾಟರ್ ಬಾಟಲ್‌ಗೆ ಆ್ಯಸಿಡ್ ಬೇರಸಿ ಕುಡಿದಿದ್ದ. ಮೇಲಾಧಿಕಾರಿ ಗುಲ್ಬರ್ಗಕ್ಕೆ ತೆರಳಿದ್ದ ವೇಳೆಯೇ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆತನನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ ವಾಸಿಂ ಚಿಕಿತ್ಸೆ ಫಲಿಸದೇ ಫೆ.9ರಂದು ಮೃತಪಟ್ಟಿದ್ದಾನೆ.

ವಾಸಿಂ ಮೇಲಾಧಿಕಾರಿ ಕಿರುಕುಳಕ್ಕೆ ಬೇಸತ್ತಿದ್ದ ಎಂದು ತಿಳಿದು ಬಂದಿದೆ. ಕಚೇರಿಯ ಫೈಲ್ ವಿಚಾರಕ್ಕೆ ಸಿಬ್ಬಂದಿ ಮನನೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಕುಟುಂಬಸ್ಥರು, ಬಲವಂತವಾಗಿ ಆ್ಯಸಿಡ್ ಕುಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಸೂಕ್ತ ರೀತಿಯಲ್ಲಿ ಪೊಲೀಸರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version