ರಾಯಚೂರು: ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆಯಿಂದ (Shakti scheme) ಕೋಟ್ಯಂತರ ಮಹಿಳೆಯರಿಗೆ ಅನುಕೂಲವಾಗುತ್ತಿದೆ. ಶಕ್ತಿ ಯೋಜನೆಯ ಎಫೆಕ್ಟ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಸದ್ಯ ಫುಲ್ ರಷ್ ಆದ ಬಸ್‌ನಲ್ಲಿ ಮಹಿಳೆಯರಿಬ್ಬರು ಸೀಟ್ ಸಿಗದೆ ಮಗುವನ್ನು ಲಗೇಜ್ ಕ್ಯಾರಿಯರ್‌ನಲ್ಲಿ ಮಲಗಿಸಿದ ಘಟನೆ ನಡೆದಿದೆ.
ಸೋಮವಾರ ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ರಾಯಚೂರಲ್ಲಿ ಬಹುತೇಕ ಸರಕಾರಿ ಬಸ್‌ಗಳು ಫುಲ್ ರಶ್ ಆಗಿವೆ. ಹೀಗಾಗಿ ಸೀಟು ಸಿಗದೆ ತಾಯಿಯೊಬ್ಬರು ಲಗೇಜು ಸಮೇತ ಮಗುವನ್ನು ಕ್ಯಾರಿಯರ್‌ನಲ್ಲಿ ಮಲಗಿಸಿದ್ದರು. ಲಿಂಗಸಗೂರು-ಕಲಬುರಗಿ ಮಾರ್ಗದ ಬಸ್‌ನಲ್ಲಿ ಈ ಘಟನೆ ನಡೆದಿದೆ.
ಇನ್ನೂ ಬಸ್ ಹತ್ತಿ ಒಳಗೆ ಬಂದವರೆಲ್ಲರೂ ತಾಯಿಯ ಐಡಿಯಾ ಕಂಡು ಫಿದಾ ಆಗಿದ್ದರು. ತಮ್ಮ ಕೈಯಲ್ಲಿದ್ದ ಮೊಬೈಲ್ ಹಿಡಿದು ವಿಡಿಯೊ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.
ಲಿಂಗಸಗೂರು-ಕಲಬುರಗಿ ಮಾರ್ಗದ ಬಸ್ ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಉಸಿರಾಡಲು ಕಷ್ಟ ಎಂಬಂತೆ ಪ್ರಯಾಣಿಕರಿಂದ ತುಂಬಿ ತುಳುಕುತಿತ್ತು. ಇದರೊಟ್ಟಿಗೆ ಬಿಸಿಲನಾಡು ಎನ್ನಿಸಿಕೊಂಡಿರುವ ರಾಯಚೂರಿನಲ್ಲಿ ತಾಪಮಾನ ಏರಿಕೆ ಆಗುತ್ತಲೇ ಇದ್ದು, ಬಿಸಿಲ ಧಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ಇದರೊಟ್ಟಿ ರಶ್ ಆಗಿರುವ ಬಸ್‌ನಲ್ಲಿ ಪ್ರಯಾಣ ಮಾಡುವುದು ಕಷ್ಟವೇ ಸರಿ..
ಹೀಗಾಗಿ ಸೀಟ್ ಸಿಗದೆ ನಿಂತಿದ್ದ ಮಹಿಳೆಯೊಬ್ಬರು, ಮಗುವನ್ನು ಹಿಡಿದುಕೊಂಡು ಪ್ರಯಾಣಿಸುವುದು ಕಷ್ಟ ಎಂಬುದು ಅರಿವಿಗೆ ಬಂದಿದೆ. ಹೀಗಾಗಿ ಕೈಯಲ್ಲಿದ್ದ ಲಗೇಜ್‌ಗಳನ್ನು ಕ್ಯಾರಿಯರ್‌ನಲ್ಲಿ ಹಾಕಿ, ಮಗುವನ್ನು ಮಲಗಿಸಿದ್ದಾರೆ. ಸದ್ಯ ಮಗುವಿನ ಪ್ರಯಾಣದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಮೋದಿ ಮತ್ತೆ ಪಿಎಂ ಆಗಲೆಂದು 13 ಸಾವಿರ ಅಡಿಯಿಂದ ಸ್ಕೈ ಡೈವ್ ಮಾಡಿದ ವಿಜಯಪುರ ಫ್ಯಾನ್ಸ್!
Ticket to lovebirds: ಸಾರಿಗೆ ಬಸ್ಸಲ್ಲಿ ಅಜ್ಜಿ-ಮೊಮ್ಮಗಳಿಗೆ ಉಚಿತ ಪ್ರಯಾಣ; 4 ಲವ್ ಬರ್ಡ್ಸ್‌ಗೆ 444 ರೂ. ಟಿಕೆಟ್!
ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆಯಿಂದ (Shakti scheme) ಕೋಟ್ಯಂತರ ಮಹಿಳೆಯರಿಗೆ ಅನುಕೂಲವಾಗುತ್ತಿದೆ. ಯೋಜನೆ ಆರಂಭವಾದ ಮೇಲೆ ಸದ್ದಿಲ್ಲದೆ ಸಾರಿಗೆ ನಿಗಮಗಳು ಟಿಕೆಟ್ ದರ ಏರಿಕೆ ಮಾಡುತ್ತಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಈ ನಡುವೆ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಿದ ಅಜ್ಜಿ-ಮೊಮ್ಮಗಳಿಗೆ ಉಚಿತ ಟಿಕೆಟ್ ಸಿಕ್ಕಿದ್ದರೆ, ಅವರ ಜತೆಗಿದ್ದ 4 ಲವ್ ಬರ್ಡ್ಸ್‌ಗೆ ಬರೋಬ್ಬರಿ 444 ರೂ. ಟಿಕೆಟ್ (Ticket to lovebirds) ನೀಡಿರುವುದು ಕಂಡುಬಂದಿದೆ.
ಪಂಜರದಲ್ಲಿ ನಾಲ್ಕು ಲವ್ ಬರ್ಡ್‌ಗಳನ್ನು ತೆಗೆದುಕೊಂಡು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದ ಅಜ್ಜಿ-ಮೊಮ್ಮಗಳು, ಆಧಾರ್ ಕಾರ್ಡ್ ತೋರಿಸಿದ್ದರಿಂದ ಅವರಿಗೆ ಕಂಡಕ್ಟರ್ ಉಚಿತ ಪ್ರಯಾಣದ ಟಿಕೆಟ್ ನೀಡಿದ್ದಾರೆ. ಆದರೆ, 4 ಪುಟ್ಟ ಹಕ್ಕಿಗಳಿಗೆ 444 ರೂಪಾಯಿ ಟಿಕೆಟ್ ನೀಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ