Site icon Vistara News

ಸಿಂಧನೂರು ರಾಸಲೀಲೆ ಪ್ರಕರಣ; ಆರೋಪಿ ಶಿಕ್ಷಕನ ಬಂಧನ

sindhanur sex scandal

ಸಿಂಧನೂರು: ಮಹಿಳೆಯೋರ್ವಳೊಂದಿಗೆ ರಾಸಲೀಲೆ ನಡೆಸಿ, ಶಾಲೆಯ ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಎದುರಿಸುತ್ತಿರುವ ಶಿಕ್ಷಕ ಮಹ್ಮದ್ ಅಜರುದ್ದೀನ್‌ ನನ್ನು ಇಂದು ಮುಂಜಾನೆ ಧಾರವಾಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ತಾಲೂಕಿನ ಸಿಂಗಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ ಮಹ್ಮದ್‌ ಅಜರುದ್ದೀನ್‌ ನಡೆಸಿದ ರಾಸಲೀಲೆಯ ವಿಡಿಯೋ ವೈರಲ್ ಆಗಿತ್ತು. ಆನಂತರ ಶಿಕ್ಷಕ ತಲೆಮರೆಸಿಕೊಂಡಿದ್ದ. ಈಗಾಗಲೇ ಶಿಕ್ಷಣ ಇಲಾಖೆ ಆತನನ್ನು ಅಮಾನತು ಮಾಡಿದೆ.

ಆರೋಪಿ ಶಿಕ್ಷಕ ಮಹ್ಮದ್‌

ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ ಈತ ತಾನೇ ವಿಡಿಯೋ‌ ಮಾಡಿಕೊಂಡಿದ್ದಾನೆ. ನಾಲ್ಕು ದಿನದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ‌ ಹರಿದಾಡುತ್ತಿದ್ದಂತೆ ಶಿಕ್ಷಕ, ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಅಲ್ಲದೆ ಈತ ಶಾಲೆಯ ಮಕ್ಕಳಿಗೂ ಲೈಂಗಿಕ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ.

ಸಿಂಗಾಪುರದಲ್ಲಿ ಕೆಲಸ ಮಾಡುತ್ತಿದ್ದ ಮಹ್ಮದ್‌ ಅಜರುದ್ದೀನ್‌ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಮನೆ ಮಾಡಿಕೊಂಡಿದ್ದ. ಅಲ್ಲಿಯೇ ಟ್ಯೂಷನ್ ಕೂಡ ನಡೆಸುತ್ತಿದ್ದ. ಗೃಹಿಣಿಯೊಬ್ಬರನ್ನು‌ ಕಾರಟಗಿಯ ತನ್ನ ನಿವಾಸಕ್ಕೆ ಕರೆಯಿಸಿಕೊಂಡು ಅನೈತಿಕ ಚಟುವಟಿಕೆ ನಡೆಸಿದ್ದಾನೆ ಎನ್ನಲಾಗಿದೆ.

ಎರಡು ವರ್ಷಗಳ ಹಿಂದೆಯೇ ದೂರು!
ತನ್ನ ಪತಿಯ ರಾಸಲೀಲೆ ಬಗ್ಗೆ ನನಗೆ ಮಾಹಿತಿ ಇತ್ತು. ಆತನೊಂದಿಗೆ ಈ ಕುರಿತು ಜಗಳವಾಡುತ್ತಿದ್ದೆ. ಅಲ್ಲದೆ, ೨೦೨೦ರಲ್ಲಿ ಬಿಇಒಗೆ ದೂರು ಸಹ ನೀಡಿದ್ದೆ ಎಂದು ಮಹ್ಮದ್‌ ಅಜರುದ್ದೀನ್‌ನ ಪತ್ನಿ ಬೇಗಂ ತಿಳಿಸಿದ್ದಾರೆ. ತಾವು ಶಿಕ್ಷಣಾಧಿಕಾರಿಗಳಿಗೆ ಈ ಹಿಂದೆಯೇ ನೀಡಿದ್ದ ದೂರಿನ ಪತ್ರವನ್ನೂ ಅವರು ಮಾಧ್ಯಮಗಳಿಗೆ ಒದಗಿಸಿದ್ದಾರೆ.

ಟ್ಯೂಷನ್ ಗೆ ಬರುವ ಮಕ್ಕಳಿಗೂ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ಕಾರಟಗಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

ಇದನ್ನೂ ಓದಿ |11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕೇರಳದ ಮದರಸಾ ಶಿಕ್ಷಕ, 67 ವರ್ಷ ಜೈಲು ಶಿಕ್ಷೆ

Exit mobile version