ಬೆಂಗಳೂರು: ರಾಜಧಾನಿ ಎಕ್ಸ್‌ಪ್ರೆಸ್‌ಗೆ (Rajadhani Express Train) ಎಸಿ ಪ್ರಥಮ ದರ್ಜೆ ದೃಢೀಕೃತ ಟಿಕೆಟ್‌ಗಳನ್ನು ಹೊಂದಿದ್ದರೂ(confirmed ticket), ಟಿಕೆಟ್ ಇಲ್ಲದ ಪ್ರಯಾಣಿಕರು ಎಂಬ ಕಾರಣಕ್ಕಾಗಿ ಹಿರಿಯ ದಂಪತಿಗೆ 22,300 ರೂಪಾಯಿ ದಂಡ ವಿಧಿಸಲಾಗಿತ್ತು(Fine For Couple). ರೈಲ್ವೆಯ ಈ ಕ್ರಮದ ವಿರುದ್ಧ ಗ್ರಾಹಕ ಕೋರ್ಟ್‌ಗೆ (Consumer Court) ದಂಪತಿ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಬೆಂಗಳೂರಿನ ವೃದ್ಧ ದಂಪತಿಗೆ 40,000 ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದೆ(compensation).
ವೈಟ್‌ಫೀಲ್ಡ್ ನಿವಾಸಿ ಅಲೋಕ್ ಕುಮಾರ್ ಅವರು 77 ಮತ್ತು 71 ವರ್ಷ ವಯಸ್ಸಿನ ತಮ್ಮ ಪೋಷಕರಿಗೆ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು. ಆದರೆ 2022ರ ಮಾರ್ಚ್ 21ರ ಪ್ರಯಾಣವು ವಯಸ್ಸಾದ ದಂಪತಿಗಳಿಗೆ ಆಘಾತಕಾರಿ ಅನುಭವವಾಗಿ ಮಾರ್ಪಟ್ಟಿತ್ತು. ಟಿಕೆಟ್ ಪರೀಕ್ಷಕರು ಅವರ ಪಿಎನ್‌ಆರ್ ಸಂಖ್ಯೆಯನ್ನು ಪರಿಶೀಲಿಸಿ, ರೂಮ್ ಇಲ್ಲ ದೃಢಪಡಿಸಿದ ಟಿಕೆಟ್‌ಗಳು ಎಂದು ತಿಳಿಸಿದ್ದಾರೆ. ದಂಪತಿಗಳು ತಮ್ಮ ದೃಢೀಕೃತ ಟಿಕೆಟ್‌ಗಳನ್ನು ಟಿಕೆಟ್ ಪರೀಕ್ಷಕರಿಗೆ ತೋರಿಸಿದ್ದಾರೆ. ಆದರೆ ಅವರು ವೃದ್ಧ ದಂಪತಿ “ಟಿಕೆಟ್ ರಹಿತ ಪ್ರಯಾಣಿಕರು” ನಮೂದಿಸಿ, 22,300 ರೂ ದಂಡವನ್ನು ವಿಧಿಸಿದ್ದಾರೆ.
ಈ ವಿಷಯ ಅಲೋಕ್ ಕುಮಾರ್ ಅವರಿಗೆ ಗೊತ್ತಾದ ಕೂಡಲೇ ಅವರು ಐಆರ್‌ಸಿಟಿಸಿ, ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಮತ್ತು ಸರಿಯಾದ ಪ್ರತಿಕ್ರಿಯೆ ಕೂಡ ಬಂದಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬಳಿಕ ಅವರು ನೈಋತ್ಯ ರೈಲ್ವೆಯ ವಲಯದ ಮುಖ್ಯ ಬುಕಿಂಗ್ ಅಧಿಕಾರಿ ಮತ್ತು ಐಆರ್‌ಸಿಟಿಸಿ ಅಧಿಕಾರಿಗಳ ವಿರುದ್ಧ ಬೆಂಗಳೂರಿನ ಗ್ರಾಹಕ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದಾರೆ.
ಐಆರ್‌ಸಿಟಿಸಿ ಇದು ಕೇವಲ ಪ್ರಯಾಣಿಕರಿಗೆ ಆನ್‌ಲೈನ್ ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಆಗಿದೆ ಮತ್ತು ಪ್ರಯಾಣಿಕರಿಗೆ ದಂಡ ವಿಧಿಸುವಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೊಂಡಿದೆ. ಇನ್ನೂ ವಿಚಾರಣೆಗೆ ಹಾಜರಾಗುವಂತೆ ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ನೋಟಿಸ್ ನೀಡಿದರೂ ಗೈರು ಹಾಜರಾಗಿದ್ದಾರೆ. ಬಳಿಕ ಈ ಕುರಿತು ತೀರ್ಪು ನೀಡಿದ ಗ್ರಾಹಕ ನ್ಯಾಯಾಲಯವು, ಕುಮಾರ್ ಅವರ ಪೋಷಕರಿಗೆ ಕಿರುಕುಳಕ್ಕಾಗಿ ಪರಿಹಾರವಾಗಿ 30,000 ರೂಪಾಯಿಗಳನ್ನು ಪಾವತಿಸಲು ಆದೇಶಿಸಿದೆ. ಕುಮಾರ್ ಅವರ ವ್ಯಾಜ್ಯ ವೆಚ್ಚಕ್ಕೆ 10,000 ರೂ. ನೀಡುವಂತೆ ಸೂಚಿಸಿದೆ.
ಈ ಸುದ್ದಿಯನ್ನೂ ಓದಿ: Consumer Court : ಡಿಕೆ ಬ್ರದರ್ಸ್‌ಗೆ ಗ್ರಾಹಕ ಕೋರ್ಟ್ ಶಾಕ್; ಬಡ್ಡಿ ಸಹಿತ 17 ಲಕ್ಷ ರೂ. ವಾಪಸ್‌ಗೆ ಆರ್ಡರ್