ತುಮಕೂರು: ರಾಜ್ಯಾದ್ಯಂತ ಮತ್ತೆ ಮಳೆ ಅಬ್ಬರ (Rain Effect) ಹೆಚ್ಚಾಗಿದ್ದು, ಗುರುವಾರ ರಾತ್ರಿ ಸುರಿದ ಮಳೆಗೆ ಗೊರವನಹಳ್ಳಿ ತೀತಾ ಗ್ರಾಮದ ನಡುವಿನ ರಸ್ತೆ ಸೇತುವೆ ಬಿರುಕುಬಿಟ್ಟಿದೆ.
ತೀತಾ ಡ್ಯಾಂನಿಂದ ಹೊರಗೆ ಹೋಗುವ ನೀರಿನ ಹಳ್ಳಕ್ಕೆ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಈಗ ಅದೇ ಬಿರುಕುಬಿಟ್ಟಿದ್ದು, ಆತಂಕವನ್ನು ಹುಟ್ಟುಹಾಕಿದೆ. ಈ ಸಂಬಂಧ ಕೊರಟಗೆರೆ ಪೊಲೀಸರು ನಿಗಾ ವಹಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಅಲ್ಲದೆ, ಗುರುವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಬ್ರಿಡ್ಜ್ ಕುಸಿದಿದೆ. ಜನರು ಎಚ್ಚರಿಕೆಯಿಂದ ಸಂಚರಿಸುವಂತೆ ಕೊರಟಗೆರೆ ತಾಲೂಕು ಆಡಳಿತ ಸೂಚನೆ ಸೂಚನೆ ನೀಡಿದೆ. ಈಗಾಗಲೇ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇದನ್ನೂ ಓದಿ | ತುಮಕೂರಿನಲ್ಲಿ ಆರದ ಫ್ಲೆಕ್ಸ್ ವಿವಾದ, ಗಣೇಶೋತ್ಸವಕ್ಕೆ ಹಾಕಿದ ಸಾವರ್ಕರ್, ತಿಲಕ್ ಚಿತ್ರವಿರುವ ಬ್ಯಾನರ್ ತೆರವು