Site icon Vistara News

Rain news| ಮುಂದಿನ ಎರಡು ದಿನ ಭಾರಿಮಳೆ: ಎಲ್ಲೆಲ್ಲಿ ಎಲ್ಲೋ ಅಲರ್ಟ್‌?

Rain In Bangalore

ಬೆಂಗಳೂರು : ಸಿಲಿಕಾನ್‌ ಸಿಟಿಯಲ್ಲಿ ಶುಕ್ರವಾರ (ಜೂನ್‌ 17) ರ ರಾತ್ರಿ ಎಡೆಬಿಡದೆ ಮಳೆ (Rain news) ಸುರಿದಿದೆ. ಶುಕ್ರವಾರದಂದು 43 ಮಿ.ಮೀ ಮಳೆಯಾಗಿದ್ದು, ಏರ್ ಪೋರ್ಟ್ ಬಳಿ 6.6 ಮಿ.ಮೀ, ಹೆಚ್ ಎ ಎಲ್ ಬಳಿ 55.2 ಮಿಮೀ ಮಳೆ ಆಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಶನಿವಾರ ( ಜೂನ್‌ 18) ಹಾಗೂ ಭಾನುವಾರ ( ಜೂನ್‌ 19) ರಂದು ಎಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ | Rain In Bangalore | ಮಿಥುನ್‌ ಮೃತದೇಹ ಹುಡುಕಲು ಬೋಟ್‌ ಬಳಕೆ, ಹೇಗೆ ನಡೀತಿದೆ ಕಾರ್ಯಾಚರಣೆ?

ಕರಾವಳಿ ಜಿಲ್ಲೆಗಳಿಗೆ ಮುಂದಿನ ನಾಲ್ಕು ದಿನ ಎಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಿಗೂ ಎಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಬೆ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ | ಬೆಂಗಳೂರಲ್ಲಿ ಭಾರಿ ಮಳೆ: ರಾಜಕಾಲುವೆಯಲ್ಲಿ ಕೊಚ್ಚಿಹೋದ ಯುವಕ, ಗೋಡೆ ಕುಸಿದು ಮಹಿಳೆ ಬಲಿ

Exit mobile version