ಬೆಂಗಳೂರು: ಕೊನೆಗೂ ರಾಜ್ಯದಲ್ಲಿ ಮುಂಗಾರು ಮಳೆ ಪರ್ವ ಆರಂಭವಾಗಿದೆ. ಒಂದು ತಿಂಗಳ ಕಣ್ಣಾ ಮುಚ್ಚಾಲೆ ಬಳಿಕ ವರುಣ ತನ್ನ ಅಬ್ಬರವನ್ನು ಪ್ರಾರಂಭಿಸಿದ್ದಾನೆ. ಈಗಾಗಲೇ ರಾಜ್ಯದ ಬಹುತೇಕ ಕಡೆ ಭಾರಿ ಮಳೆಯಾಗುತ್ತಿದೆ. ಕೆಲವು ಕಡೆ ಬಿರುಗಾಳಿ, ಗುಡುಗು-ಸಿಡಿಲುಗಳೊಂದಿಗೆ ಮಳೆ ಸುರಿಯುತ್ತಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆಯು ಗುರುವಾರ (ಜೂನ್ 6) ಭರ್ಜರಿ ಗಾಳಿಯೊಂದಿಗೆ ಬೀಸಲಿದೆ ಎಂದು ಹವಾಮಾನ ಇಲಾಖೆ (Weather Report) ತನ್ನ ಮುನ್ನೆಚ್ಚರಿಕೆಯಲ್ಲಿ ತಿಳಿಸಿದೆ.
ಅಲ್ಲದೆ, ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತಲೂ ಕಡಿಮೆ ಆಗುವ ಸಾಧ್ಯತೆ ಇದ್ದು, ಥಂಡಿ ವಾತಾವರಣ ಇರಲಿದೆ. ಹೀಗಾಗಿ ಜನರಿಗೆ ಸ್ವಲ್ಪ ಚಳಿ ಚಳಿ ಅನುಭವವೂ ಆಗಲಿದೆ. ಈ ನಡುವೆ ಬಲವಾದ ಗಾಳಿಯೊಂದಿಗೆ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಎಚ್ಚರಿಕೆ ವಹಿಸಲು ಸಲಹೆ ನೀಡಲಾಗಿದೆ. ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹೇಳಲಾಗಿದ್ದರೂ ಮಳೆ ಮೇಲೆ ಅವಲಂಬಿತವಾಗಿದೆ.
ಇದನ್ನೂ ಓದಿ: Viral News: ವಯಸ್ಸು 27, ಇರೋದು 4 ಸಾವಿರ ಕೋಟಿ ರೂ. ಮನೆಯಲ್ಲಿ; ಅಂದಹಾಗೆ ಈತ ಬಿಜೆಪಿ ಮಿನಿಸ್ಟರ್ ಪುತ್ರ
ಕರಾವಳಿ, ಉತ್ತರ-ದಕ್ಷಿಣ ಒಳನಾಡಲ್ಲಿ ಮಳೆ ಹಾವಳಿ
ಕರಾವಳಿಯ ಭಾಗವಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳು, ಉತ್ತರ ಒಳನಾಡಿನ ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಕರಾವಳಿಯ ಉಡುಪಿ ಜಿಲ್ಲೆ, ಉತ್ತರ ಒಳನಾಡಿನ ಬಾಗಲಕೋಟೆ, ಹಾವೇರಿ, ಕೊಪ್ಪಳ ಜಿಲ್ಲೆಗಳ ಹಾಗೂ ದಕ್ಷಿಣ ಒಳನಾಡಿನ ದಾವಣಗೆರೆ, ಹಾಸನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆಯಲ್ಲಿ ತಿಳಿಸಿದೆ.
50 ಕಿ.ಮೀ. ಇದೆ ಗಾಳಿಯ ವೇಗ
ಕರಾವಳಿ ಹಾಗೂ ಒಳನಾಡು ಪ್ರದೇಶಗಳಲ್ಲಿ ಬಿರುಗಾಳಿಯ ವೇಗವು ತುಸು ಹೆಚ್ಚೇ ಇರಲಿದೆ. ಒಳನಾಡು ಪ್ರದೇಶಗಳಲ್ಲಿ ಗಂಟೆಗೆ 40-50 ಕಿ.ಮೀ. ಗಾಳಿ ವೇಗ ಇದ್ದರೆ, ಕರಾವಳಿ ಭಾಗದಲ್ಲಿ ಗಂಟೆಗೆ 45-55 ಕಿ.ಮೀ. ನಿಂದ 65 ಕಿ.ಮೀ. ವೇಗದಲ್ಲಿ ಬೀಸುವ ವಾತಾವರಣವಿರುತ್ತದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚಿಸಲಾಗಿದೆ.
ದಕ್ಷಿಣ ಕನ್ನಡ, ಕೊಪ್ಪಳ, ವಿಜಯನಗರದಲ್ಲಿ ಗರಿಷ್ಠ 6 ಸೆಂ.ಮೀ. ಮಳೆ:
ಸುಬ್ರಹ್ಮಣ್ಯ (ದಕ್ಷಿಣ ಕನ್ನಡ ಜಿಲ್ಲೆ), ಮುನಿರಾಬಾದ್, ಕುಕನೂರು (ಕೊಪ್ಪಳ ಜಿಲ್ಲೆ), ಹೊಸಪೇಟೆ, ಕೊಟ್ಟೂರು (ವಿಜಯನಗರ ಜಿಲ್ಲೆ) ತಲಾ 6 ಸೆಂ.ಮೀ. ಮಳೆಯಾಗಿದ್ದರೆ, ವುತ್ತೂರು, ಸುಳ್ಯ (ದಕ್ಷಿಣ ಕನ್ನಡ ಜಿಲ್ಲೆ), ಕಾರ್ಕಳ, ಸಿದ್ದಾಪುರ (ಉಡುಪಿ ಜಿಲ್ಲೆ), ಮಂಚಿಕೆರೆ (ಉತ್ತರ ಕನ್ನಡ ಜಿಲ್ಲೆ), ದೇವದುರ್ಗ (ರಾಯಚೂರು ಜಿಲ್ಲೆ), ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ), ಬರಗೂರು (ತುಮಕೂರು ಜಿಲ್ಲೆ) ತಲಾ 5 ಸೆಂ.ಮೀ ಮಳೆಯಾಗಿದೆ.
ಕೊಲ್ಲೂರು (ಉಡುಪಿ ಜಿಲ್ಲೆ), ಜನಮನೆ (ಉತ್ತರ ಕನ್ನಡ ಜಿಲ್ಲೆ), ಮಾಣಿ (ದಕ್ಷಿಣ ಕನ್ನಡ ಜಿಲ್ಲೆ), ರೋಣ (ಗದಗ ಜಿಲ್ಲೆ, ಕೊಟ್ಟಿಗೆಹಾರ (ಚಿಕ್ಕಮಗಳೂರು ಜಿಲ್ಲೆ), ಕುಣಿಗಲ್ (ತುಮಕೂರು ಜಿಲ್ಲೆ) ತಲಾ 4 ಸೆಂಟಿ ಮೀಟರ್ ಮಳೆಯಾಗಿದ್ದು, ಕ್ಯಾಸಲ್ ರಾಕ್ (ಉತ್ತರ ಕನ್ನಡ ಜಿಲ್ಲೆ), ಬೆಳ್ತಂಗಡಿ, ಉಪ್ಪಿನಂಗಡಿ (ದಕ್ಷಿಣ ಕನ್ನಡ ಜಿಲ್ಲೆ), ಫರಹತಾಬಾದ್ (ಕಲಬುರಗಿ ಜಿಲ್ಲೆ), ಭಾಗಮಂಡಲ (ಕೊಡಗು ಜಿಲ್ಲೆ), ಹರಪನಹಳ್ಳಿ, ಕೂಡ್ಲಿಗಿ (ವಿಜಯನಗರ ಜಿಲ್ಲೆ), ಲಿಂಗನಮಕ್ಕಿ (ಶಿವಮೊಗ್ಗ ಜಿಲ್ಲೆ), ಹಳ್ಳೂರು (ತುಮಕೂರು ಜಿಲ್ಲೆ) ತಲಾ 3 ಸೆಂ.ಮೀ ಮಳೆಯಾಗಿದೆ. ಮುಂಡಗೋಡು, ಯಲ್ಲಾಪುರ, ಬನವಾಸಿ (ಉತ್ತರ ಕನ್ನಡ ಜಿಲ್ಲೆ), ಧರ್ಮಸ್ಥಳ (ದಕ್ಷಿಣ ಕನ್ನಡ ಜಿಲ್ಲೆ), ನಿರ್ಣಾ (ಬೀದರ್ ಜಿಲ್ಲೆ), ಗುಂಜಿ (ಬೆಳಗಾವಿ ಜಿಲ್ಲೆ), ಗುಂಡಗುರ್ತಿ (ಕಲಬುರ್ಗಿ ಜಿಲ್ಲೆ), ಗಟ್ಟೂರು (ರಾಯಚೂರು ಜಿಲ್ಲೆ), ಶೋರಾಪುರ (ಯಾದಗಿರಿ ಜಿಲ್ಲೆ), ಆಲಮಟ್ಟಿ ಎಚ್‌ಎಂಎಸ್ (ವಿಜಯಪುರ ಜಿಲ್ಲೆ), ಯಲಬುರ್ಗಾ (ಕೊಪ್ಪಳ ಜಿಲ್ಲೆ), ಕೊಪ್ಪ, ಕಮ್ಮರಡಿ, ಕಳಸ, ಶೃಂಗೇರಿ (ಚಿಕ್ಕಮಗಳೂರು ಜಿಲ್ಲೆ), ಮೂರ್ನಾಡು (ಕೊಡಗು ಜಿಲ್ಲೆ), ತಾಳಗುಪ್ಪ (ಶಿವಮೊಗ್ಗ ಜಿಲ್ಲೆ), ಮಾಗಡಿ, ಚಂದೂರಾಯನಹಳ್ಳಿ ಕೆವಿಕೆ (ರಾಮನಗರ ಜಿಲ್ಲೆ), ಚಿಕ್ಕಬಳ್ಳಾಪುರ, ಹೆಸರಘಟ್ಟ (ಬೆಂಗಳೂರು ನಗರ ಜಿಲ್ಲೆ) ತಲಾ 2 ಸೆಂಟಿ ಮೀಟರ್ ಮಳೆಯಾದ ವರದಿಯಾಗಿದೆ.
ಇದನ್ನೂ ಓದಿ: Yatindra siddaramaiah: ಅಧಿಕಾರ ಬೇಕು; ಸರ್ಕಾರಿ ಸ್ಥಾನಮಾನಕ್ಕೆ ಬೇಡಿಕೆ ಇಟ್ಟ ಯತೀಂದ್ರ ಸಿದ್ದರಾಮಯ್ಯ
ಕಿರವತ್ತಿ, ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ), ಹುಣಸಗಿ, ಕೆಂಭಾವಿ (ಯಾದಗಿರಿ ಜಿಲ್ಲೆ), ಯರವಾಡ, ಸದಲಗಾ, ಲೋಂಡಾ, ಸಂಕೇಶ್ವರ, ರಾಯಬಾಗ (ಬೆಳಗಾವಿ ಜಿಲ್ಲೆ), ಬೇವೂರು, ಗಂಗಾವತಿ (ಕೊಪ್ಪಳ ಜಿಲ್ಲೆ), ಕೆರೂರು, ಲೋಕಾಪುರ (ಬಾಗಲಕೋಟೆ ಜಿಲ್ಲೆ), ಮುಧೋಳ, ಚಿತ್ತಾಪುರ, ಅಡಕಿ (ಕಲಬುರಗಿ ಜಿಲ್ಲೆ), ಸಿಂಧನೂರು (ರಾಯಚೂರು ಜಿಲ್ಲೆ), ಕಿಗ್ಗಾವಿ (ಹಾವೇರಿ ಜಿಲ್ಲೆ), ಝಳಕಿ ಕ್ರಾಸ್ (ವಿಜಯಪುರ ಜಿಲ್ಲೆ), ಸಂಡೂರು, ಕಂಪ್ಲಿ (ಬಳ್ಳಾರಿ ಜಿಲ್ಲೆ), ರಾಮನಗರ, ಸುಂಟಿಕೊಪ್ಪ, ಸೋಮವಾರಪೇಟೆ (ಕೊಡಗು ಜಿಲ್ಲೆ), ಜಯಪುರ (ಚಿಕ್ಕಮಗಳೂರು ಜಿಲ್ಲೆ), ಮದ್ದೂರು (ಮಂಡ್ಯ ಜಿಲ್ಲೆ), ಮಂಡಗದ್ದೆ, ಹುಂಚದಕಟ್ಟೆ (ಎರಡೂ ಶಿವಮೊಗ್ಗ ಜಿಲ್ಲೆ), ಮಿಡಿಗೇಶಿ (ತುಮಕೂರು ಜಿಲ್ಲೆ), ಉಚ್ಚಂಗಿದುರ್ಗ (ದಾವಣಗೆರ ಜಿಲ್ಲೆ), ದಾವಣಗೆರೆ ಪಿಟಿಒ, ಯಲಹಂಕ (ಬೆಂಗಳೂರು ನಗರ ಜಿಲ್ಲೆ) ತಲಾ 1 ಸೆಂಟಿ ಮೀಟರ್‌ನಷ್ಟು ಮಳೆಯಾಗಿದೆ.