Site icon Vistara News

Rain News | ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ: ಸುರಕ್ಷಿತ ಪ್ರದೇಶಕ್ಕೆ ಗರ್ಭಿಣಿಯರ ಶಿಫ್ಟ್‌

Rain News

ರಾಯಚೂರು: ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ ಅಧಿಕ ‌ಪ್ರಮಾಣದಲ್ಲಿ ನೀರನ್ನು ಹೊರ ಬಿಟ್ಟ ಪರಿಣಾಮ ಪ್ರವಾಹ ಭೀತಿ ಎದುರಾಗಿದೆ. ನೆರೆಪೀಡಿತ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ‌ ಅಲರ್ಟ್ ಘೋಷಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಇಲಾಖೆ‌ಯು ಈ ಭಾಗದಲ್ಲಿರುವ ಗರ್ಭಿಣಿಯರ ಸ್ಥಳಾಂತರಕ್ಕೆ ಮುಂದಾಗಿದೆ.

ಇದನ್ನೂ ಓದಿ | Weather Report | ರಾಜ್ಯಾದ್ಯಂತ ಮುಂದಿನ 24 ಗಂಟೆ ಭಾರಿ ಮಳೆ ಮುನ್ಸೂಚನೆ

ಜಿಲ್ಲೆಯ ‌ಲಿಂಗಸುಗೂರು ತಾಲೂಕಿನ ಹಂಚಿನಾಳ ಗ್ರಾಮದ ತುಂಬು ಗರ್ಭಿಣಿಯರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಕೃಷ್ಣಾ ನದಿ ಪ್ರವಾಹದಿಂದ ಶಿಲಹಳ್ಳಿ ಸೇತುವೆ ಮುಳುಗಡೆ ಆಗುವ ಸಾಧ್ಯತೆ ಇದೆ. ಈ ಸೇತುವೆ ಹಂಚಿನಾಳ ಮತ್ತು ಲಿಂಗಸುಗೂರು ನಡುವೆ ಸಂಪರ್ಕ ‌ಕಲ್ಪಿಸುತ್ತದೆ. ಆದ್ದರಿಂದ ಸಂಪರ್ಕ ಕಡಿತವಾಗುವ ಗ್ರಾಮಗಳಿಂದ ಸ್ಥಳಾಂತರ ಮಾಡುತ್ತಿದ್ದಾರೆ.

ಈಗಾಗಲೇ ಹಂಚಿನಾಳ ಗ್ರಾಮದಲ್ಲಿ ‌ವೈದ್ಯರ ತಂಡ ಮೊಕ್ಕಾಂ ಹೂಡಿ ಕಾರ್ಯಾಚರಣೆ ನಡೆಸುತ್ತಿದೆ. ನೆರೆಪೀಡಿತ ಪ್ರದೇಶಗಳಲ್ಲಿ ವೈದ್ಯರ ತಂಡವು ತಾತ್ಕಾಲಿಕ ಕ್ಯಾಂಪ್ ಹಾಕಿಕೊಂಡಿದ್ದು, ಚಿಕಿತ್ಸೆ ನೀಡಲು ತಿರ್ಮಾನಿಸಲಾಗಿದೆ. ಮಕ್ಕಳು, ವೃದ್ಧರಿಗೆ ಗ್ರಾಮದಲ್ಲಿ ತುರ್ತು ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಆರೋಗ್ಯ ಸಮಸ್ಯೆಯ ಭೀತಿಯಿಂದ ದೂರಾಗಿದ್ದಾರೆ.

ಇದನ್ನೂ ಓದಿ | Rain News| ಭೀಕರ ಮಳೆಗೆ ಬೀಳುತ್ತಿವೆ ಮನೆಗಳು, ತತ್ತರಿಸುತ್ತಿದೆ ಬದುಕು

Exit mobile version