Site icon Vistara News

Rain News | ತಾಳಿಕೋಟೆ ಪಟ್ಟಣದ ಡೋಣಿ ನದಿಯಲ್ಲಿ ಮತ್ತೆ ಪ್ರವಾಹ, ಮನೆಗಳತ್ತವೂ ನೀರು!

Rain News

ವಿಜಯಪುರ: ತಾಳಿಕೋಟೆ ಪಟ್ಟಣದಲ್ಲಿ ಡೋಣಿ ನದಿಯಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ (Rain News) ಎದುರಾಗಿದೆ. ಶುಕ್ರವಾರ (ಆಗಸ್ಟ್‌ 5) ಡೋಣಿ ನದಿ ನೀರು ಸಾರವಾಡದಲ್ಲಿ ವ್ಯಾಪಿಸಿದಂತೆ ಪಟ್ಟಣದ ಹೊರವಲಯದ ವಿಜಯಪುರ ರಸ್ತೆಯ ಜಮೀನು ಮನೆಗಳತ್ತಲೂ ವ್ಯಾಪಿಸುತ್ತಿವೆ.

ಡೋಣಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ನದಿಯಲ್ಲಿ ಹೂಳು ತುಂಬಿಕೊಂಡಿರುವುದು ಸೇರಿದಂತೆ ಹೆಚ್ಚಿನ ತಿರುವುಗಳಿವೆ. ಈ ಕಾರಣದಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಲು ಕಾರಣವಾಗಿದೆ.

ಡೋಣಿ ನದಿಪಾತ್ರದ ಜನಜೀವನ ಅಸ್ತವ್ಯಸ್ತ

ಕ್ಷಣಕ್ಷಣಕ್ಕೂ ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು, ಬೋಳವಾಡ, ಗುತ್ತಿಹಾಳ, ಬೊಮ್ಮನಹಳ್ಳಿ ಸೇರಿದಂತೆ ತಾಲೂಕಿನ ಡೋಣಿ ನದಿಪಾತ್ರದ ಗ್ರಾಮಗಳಿಗೆ, ಜಮೀನುಗಳಿಗೆ ನೀರು ನುಗ್ಗುವ ಆತಂಕ ಹೆಚ್ಚಾಗಿದೆ. ತಾಳಿಕೋಟೆ ಪಟ್ಟಣದ ಕೆಳಸೇತುವೆ ಮತ್ತೆ ಜಲಾವೃತಗೊಂಡಿದೆ. ಬಿಜ್ಜಳ‌ ಹೆದ್ದಾರಿ-61 ರಸ್ತೆ ಸಂಚಾರದಲ್ಲಿ ವ್ಯತ್ಯಯ ಕಂಡಿದೆ. ಪಟ್ಟಣದ ವಿಜಯಪುರ ರಸ್ತೆಯ ವಿದ್ಯುತ್ ಪ್ರಸರಣಾ ಕೇಂದ್ರದವರೆಗೂ ಡೋಣಿ ನದಿ ವ್ಯಾಪಿಸಿದೆ. ಇತ್ತ ಮಿಣಜಗಿ ಕ್ರಾಸ್ ಹತ್ತಿರದವರೆಗಿನ ಜಮೀನುಗಳಲ್ಲಿ ಸಹ ಡೋಣಿ ನದಿ ನೀರು ಆವರಿಸುತ್ತಿದೆ.

ಇದನ್ನೂ ಓದಿ | Rain News | ಆಗುಂಬೆ ಘಾಟಿಯಲ್ಲಿ ಭಾರಿ ಮಳೆಗೆ ವಾಹನದ ಮೇಲೆ ಬಿದ್ದ ಮರ

ಹೊಸದಾಗಿ ನಿರ್ಮಾಣ ಮಾಡಿದ್ದ ಮೇಲ್ಸೇತುವೆ ಶಿಥಿಲಗೊಂಡ ಕಾರಣ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ವಿಜಯಪುರ, ಬಾಗಲಕೋಟೆ, ತಾಳಿಕೋಟೆ ಪಟ್ಟಣ ಮಾತ್ರವಲ್ಲದೆ ಸುರಪುರ, ರಾಯಚೂರು, ಯಾದಗಿರಿ, ಕಲಬುರಗಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಬಿಜ್ಜಳ ರಾಜ್ಯ ಹೆದ್ದಾರಿ-61ರ ಸಂಚಾರ ಬಂದ್‌ ಆಗಿದೆ . ತಾಲೂಕಿನ ಮೂಕಿಹಾಳ ಮೂಲಕ ಹಡಗಿನಾಳ ರಸ್ತೆಯಿಂದ ಹೊಸ ಸೇತುವೆಯ ತಾತ್ಕಾಲಿಕ ಸಂಪರ್ಕ ರಸ್ತೆಯನ್ನು ಬಳಕೆ ಮಾಡಲಾಗುತ್ತಿದ್ದು, ಈ ಮೂಲಕ ತಾಳಿಕೋಟೆ ತಲುಪಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಇದನ್ನೂ ಓದಿ | Rain news | ಕೊಡಗಿನಲ್ಲಿ ಜಲಸ್ಫೋಟ : ರಬ್ಬರ್ ತೋಟ ಕುಸಿದು ಅಪಾರ ಹಾನಿ

Exit mobile version