ಶಿವಮೊಗ್ಗ : ಭಾರಿ ಮಳೆಯಿಂದಾಗಿ (Rain News) ಜಿಲ್ಲೆಯ ಆಗುಂಬೆ ಮತ್ತು ತೀರ್ಥಹಳ್ಳಿ ಮಾರ್ಗದಲ್ಲಿ ರಸ್ತೆ ಕುಸಿತದಿಂದ ಶನಿವಾರ (ಜು.16) ಸಂಪರ್ಕ ಕಡಿತಗೊಂಡಿದೆ. ನೇರಳೆಕೂಡಿಗೆ ಬಳಿ ಸುಮಾರು 200 ಅಡಿಗಳಷ್ಟು ರಸ್ತೆ ಕುಸಿದಿದೆ. 4 ವರ್ಷಗಳ ಹಿಂದಷ್ಟೇ ಹೊಸದಾಗಿ ಮಾಡಲಾಗಿದ್ದ ಆಗುಂಬೆಯಿಂದ ಶೃಂಗೇರಿಗೆ ಹೋಗುವ ಹೆದ್ದಾರಿ ಇದಾಗಿದೆ.
ಅಲ್ಲದೆ, ಕಳೆದ ಭಾನುವಾರ ಧರೆ ಕುಸಿದಿದ್ದ ಜಾಗದಲ್ಲೇ ಮತ್ತೆ ರಸ್ತೆ ಬಿರುಕು ಬಿಟ್ಟಿದೆ. ಆಗುಂಬೆಯ 11ನೇ ತಿರುವಿನಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಘಾಟಿಯ ಮಣ್ಣು ತೆಗೆಸಿ ಸುಗಮ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದರು. ರಸ್ತೆ ಬಿರುಕಿನಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಅಪಾಯದ ಸಾಧ್ಯತೆ ಇರುವುದರಿಂದ ಆಗುಂಬೆ ಘಾಟ್ ಬಂದ್ ಮಾಡುವ ಚಿಂತನೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ | Rain News | ಮಳೆಗೆ ಕೊಚ್ಚಿ ಹೋದ ರಸ್ತೆ: ನೀರಲ್ಲಿ ಹೋಮವಾಯ್ತು ಸಾರ್ವಜನಿಕರ ತೆರಿಗೆ ಹಣ
ಘಾಟಿ ಬಂದ್ ಮಾಡಿದರೆ ಶಿವಮೊಗ್ಗದಿಂದ ಮಣಿಪಾಲ ,ಉಡುಪಿ, ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಸಂಚಾರ ಸ್ಥಗಿತಗೊಳ್ಳಲಿದೆ. ಒಂದು ವೇಳೆ ಬಂದ್ ಆದರೆ ಮಣಿಪಾಲ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ತೊಂದರೆ ಆಗಲಿದೆ.
Rain News | ರಸ್ತೆ ಜಲಾವೃತ, ಮೂರನೇ ಬಾರಿಗೆ ನಾಪೋಕ್ಲು-ಭಾಗಮಂಡಲ ರಸ್ತೆ ಸಂಪರ್ಕ ಕಡಿತ