ಚಿಕ್ಕಮಂಗಳೂರು: ಕಾಫಿ ನಾಡು ಚಿಕ್ಕಮಗಳೂರು ವರುಣಾರ್ಭಟಕ್ಕೆ ಅಕ್ಷರಶಃ ನಲುಗಿದೆ. ಭಾನುವಾರ ರಾತ್ರಿಯಿಂದಲೇ ಆರಂಭವಾಗಿರುವ ಮಳೆ ಬೆಳಗ್ಗೆಯೂ ಗುಡುಗು ಸಿಡಿಲಿನೊಂದಿಗೆ ಅಬ್ಬರಿಸುತ್ತಿದೆ. ಚಿಕ್ಕಮಗಳೂರು ನಗರವೂ ಸೇರಿದಂತೆ ನಾನಾ ನಗರಗಳು ಹೊಳೆಗಳಂತಾಗಿವೆ. ಗುಡ್ಡ ಪ್ರದೇಶಗಳಿಂದ ಕೆಸರು ನೀರು ಹರಿದು ರಸ್ತೆಯಲ್ಲೇ ಕೆಸರಿನಿಂದ ತುಂಬಿಸಿವೆ. ಕೆಲವು ಕಡೆ ನಗರಗಳಲ್ಲಿ ಮೂರು ಅಡಿಯಷ್ಟು ನೀರು ನಿಂತಿದೆ. ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದೆ. ಅದರಲ್ಲೂ ಪ್ರಮುಖವಾಗಿ ಬಾಳೆ ಹೊನ್ನೂರು ಮತ್ತು ಕಳಸ ಭಾಗದಲ್ಲಿ ಭಾರಿ ಅನಾಹುತಗಳು ಸಂಭವಿಸಿವೆ.
ಸತತ ಮಳೆಗೆ ಬಾಳೆಹೊನ್ನೂರು ಪಟ್ಟಣದ ರಸ್ತೆ ನದಿಯಂತಾಗಿದೆ. ಚಿಕ್ಕಮಗಳೂರು- ಶೃಂಗೇರಿ ರಾಜ್ಯ ಹೆದ್ದಾರಿ ಜಲಾವೃತವಾಗಿದ್ದು, ರಸ್ತೆಯಲ್ಲಿ ಮೂರು ಅಡಿಗೂ ಹೆಚ್ಚು ನೀರು ನಿಂತಿದೆ. ವಾಹನ ಚಲಾಯಿಸಲು ಆಗದೆ ಚಾಲಕರು ಪರದಾಟ ಮಾಡುತ್ತಿದ್ದಾರೆ.
ಕಳಸ ತಾಲೂಕಿನ ಸುತ್ತಮುತ್ತಲೂ ಬಾರಿ ಮಳೆ ಸುರಿದಿದ್ದು, ಮಲೆನಾಡಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಇದನ್ನೂ ಓದಿ| Rain news | ಭಾರಿ ಮಳೆಗೆ ತತ್ತರಿಸಿದ ಬೆಂಗಳೂರು, ಜನಜೀವನ ಅಸ್ತವ್ಯಸ್ತ