ಬೆಂಗಳೂರು: ರಾಜಧಾನಿಯ ಹೊರ ವರ್ತುಲ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಐಟಿ ಕಂಪನಿಗಳ ಉದ್ಯೋಗಿಗಳಿಗೆ ಇನ್ನು ಒಂದು ವಾರ ಕಾಲ ವರ್ಕ್ ಫ್ರಂ ಹೋಂ ನೀಡಲಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನ ಔಟರ್ ರಿಂಗ್ ರೋಡ್ ವ್ಯಾಪ್ತಿ ಭಾರಿ ಮಳೆಗೆ ತತ್ತರಿಸಿ ಅಕ್ಷರಶಃ ಕೆರೆಯಂತಾಗಿದೆ, ಹೊಳೆಯಂತಾಗಿದೆ. ಹಲವಾರು ಐಟಿ ಕಂಪನಿಗಳಿಗೆ ನೀರು ನುಗ್ಗಿದ್ದರೆ, ಹಲವು ಕಡೆಗಳಲ್ಲಿ ಉದ್ಯೋಗಿಗಳು ಕಚೇರಿಗೇ ಹೋಗಲಾಗದ ಸ್ಥಿತಿ ನಿರ್ಮಾಣಗೊಂಡಿದೆ. ಹೊರ ವರ್ತುಲ ರಸ್ತೆಯಲ್ಲಿ ಬಹುತೇಕ ಕಡೆ ೧ರಿಂದ ಮೂರು ಅಡಿ ನೀರು ನಿಂತಿದೆ. ಯಾವ ವಾಹನವೂ ಸಾಗಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇದೆ. ಹೀಗಾಗಿ ಸಿಬ್ಬಂದಿ ಕಚೇರಿ ತಲುಪಲು ಸಾಧ್ಯವಾಗುತ್ತಿ. ಹೀಗಾಗಿ ವರ್ಕ್ ಫ್ರಂ ಹೋಮ್ ನೀಡಲಾಗಿದೆ
ಬೆಂಗಳೂರಿನಲ್ಲಿ ಬೆಳಗ್ಗೆ ಬಿಸಿಲಿದ್ದು ಸಂಜೆಯ ಹೊತ್ತಿಗೆ ಮಳೆಯಾಗುತ್ತಿದೆ. ಅದರಲ್ಲೂ ಮಹದೇವಪುರ, ಹುಳಿಮಾವು, ಸರ್ಜಾಪುರ ಅಷ್ಟೇ ಅಲ್ಲದೇ ಔಟರ್ ರಿಂಗ್ ರೋಡ್‌ನ ವ್ಯಾಪ್ತಿಯಲ್ಲಿ ಬಹುತೇಕ ಏರಿಯಾಗಳಲ್ಲಿ ಜೋರು ಮಳೆಯಾಗ್ತಿರೋದು ಮಾತ್ರವಲ್ಲದೇ, ರಸ್ತೆಗಳು ಕೆರೆಯಂತಾಗಿದೆ.
ಸಾಮಾನ್ಯ ದಿನಗಳಲ್ಲೇ ಉದ್ಯೋಗಿಗಳು ತಮ್ಮ ಕಂಪನಿ ತಲುಪಬೇಕು ಅಂದ್ರೆ ಕನಿಷ್ಠ ಒಂದೂವರೆಯಿಂದ ಎರಡು ಗಂಟೆಗಳ ಕಾಲ ಟ್ರಾಫಿಕ್‌ನಲ್ಲೇ ಕಳೆಯುತ್ತಾರೆ. ಹೀಗಿರೋವಾಗ ಸಣ್ಣ ಪ್ರಮಾಣದ ಮಳೆ ಬಂದಾಗಂತೂ ಅವರ ಪರಿಸ್ಥಿತಿ ಭಯಾನಕವಾಗಿರುತ್ತದೆ. ಮಳೆಯಲ್ಲಿ ಸಿಕ್ಕಿ ಹಾಕಿಕೊಂಡು ಐದಾರು ಗಂಟೆ ಕಳೆದದ್ದೂ ಇದೆ. ಕೋವಿಡ್ ಸಂದರ್ಭದಲ್ಲಿ ಕಾರ್ಪೋರೇಟ್ ಕಂಪನಿಗಳು ವರ್ಕ್ ಫ್ರಂ ಹೋಂ ಕಡ್ಡಾಯಗೊಳಿಸಿತ್ತು. ಇದೀಗ ಬಹಳಷ್ಟು ತಿಂಗಳುಗಳ ನಂತರ ಮತ್ತದೇ ಪ್ಲಾನಿನತ್ತ ಮೊರೆಹೋಗಿವೆ.
ಔಟರ್ ರಿಂಗ್ ರೋಡ್ ಸಮಸ್ಯೆ ಬಗ್ಗೆ ಇತ್ತೀಚೆಗೆ ಅಲ್ಲಿನ ಬ್ಯಾಂಕಿಂಗ್ ಮತ್ತು ಐಟಿ ಕಂಪನಿಗಳ ಒಕ್ಕೂಟ ಧ್ವನಿ ಎತ್ತಿತ್ತು. ಮುಖ್ಯಮಂತ್ರಿಗಳಿಗೆ ಪತ್ರ ಬರೆದದ್ದು ಮಾತ್ರವಲ್ಲದೆ, ಸರಿಯಾದ ಮೂಲ ಸೌಕರ್ಯ ಒದಗಿಸದೆ ಹೋದರೆ ಬೆಂಗಳೂರಿನಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರಗೊಳ್ಳಬೇಕಾದೀತು ಎಂದು ಎಚ್ಚರಿಕೆಯನ್ನೂ ನೀಡಿತ್ತು.
ಇದನ್ನೂ ಓದಿ| Rain News | 8 ವರ್ಷದ ಬಳಿಕ ದಾಖಲೆ ಮಳೆ: ಇಂದು ರಾತ್ರಿಯೂ ಕಾದಿದೆ ಬೆಂಗಳೂರಿಗೆ ಜಲ ಕಂಟಕ