Site icon Vistara News

Rain News: ಕರಾವಳಿಯಲ್ಲಿ ಶುರುವಾಗಿದೆ ಗುಡ್ಡ ಕುಸಿತ ಭೀತಿ; ಹೆದ್ದಾರಿ ಸಂಚಾರವೀಗ ಬಹಳ ಫಜೀತಿ!

Land slide in karwar

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗವಾಗಿರುವ (Coastal Karnataka) ಕಾರವಾರದಲ್ಲಿ ಹೆದ್ದಾರಿ ಬಳಿ ಗುಡ್ಡ ಕುಸಿತದ ಆತಂಕ ಎದುರಾಗಿದೆ. ಈ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯೇ (Rain News) ಇದಕ್ಕೆ ಕಾರಣವಾಗಿದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.

ಕಾರವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಅರಗಾ ಗ್ರಾಮದ ಬಳಿ ಭಾರಿ ಮಳೆಗೆ ರಸ್ತೆ ಮೇಲೆ ಬೃಹತ್ ಬಂಡೆಗಲ್ಲು ಕುಸಿದು ಬಿದ್ದಿದೆ. ಹೆದ್ದಾರಿ ಮೇಲೆ ಕಲ್ಲು, ಮಣ್ಣು ಕುಸಿತದಿಂದ ಒಂದು ಬದಿ ಸಂಚಾರ ಬಂದ್ ಆಗಿದೆ. ಗುಡ್ಡದ ಮಣ್ಣು ಕುಸಿಯುವ ಆತಂಕದಿಂದ ಐಆರ್‌ಬಿಯವರು ಸಂಚಾರವನ್ನು ಬಂದ್ ಮಾಡಿದ್ದಾರೆ.

ಇದನ್ನೂ ಓದಿ: Education News: ಒಂದೂ ಮಕ್ಕಳಿಲ್ಲದ ಶಾಲೆಗೆ ಇಬ್ಬರು ಶಿಕ್ಷಕರು! ಇದು ದಾಸನಹುಂಡಿ ಸಕಿಪ್ರಾ ಶಾಲೆಯ ಕಥೆ-ವ್ಯಥೆ

ರಸ್ತೆ ಮೇಲೆ ಬಿದ್ದಿರುವ ಕಲ್ಲು ಬಂಡೆಗಳು

ಐಆರ್‌ಬಿ ಕಂಪನಿ ಎಡವಟ್ಟು?

ಇದು ಹೆದ್ದಾರಿ ಅಗಲೀಕರಣಕ್ಕಾಗಿ ಐಆರ್‌ಬಿ ಕಂಪನಿ ಮಾಡಿದ ಎಡವಟ್ಟು ಎನ್ನಲಾಗಿದೆ. ಅಪಾಯಕಾರಿಯಾಗಿ ಗುಡ್ಡ ಕೊರೆದಿರುವುದೇ ಈ ಅವಘಡಕ್ಕೆ ಕಾರಣ ಎಂಬ ಆರೋಪವೂ ಕೇಳಿಬಂದಿದೆ. ಮುಂದೆ ಹೆಚ್ಚು ಮಳೆಯಾದಲ್ಲಿ ಅವಘಡ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಭಾಗದಲ್ಲಿ ಈಗ ಸಂಚರಿಸಬೇಕಾದರೆ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಹೋಗಬೇಕಾಗಿದೆ.

ತಂಡ್ರಕುಳಿ ಗ್ರಾಮದಲ್ಲಿ ಮನೆ ಮೇಲೆ ಬಿದ್ದ ಬಂಡೆಗಲ್ಲು

ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರ ತಂಡ್ರಕುಳಿ ಗ್ರಾಮದಲ್ಲಿ ಸೋಮವಾರ ಸಂಜೆ ಭಾರಿ ಮಳೆ ಸುರಿದಿದ್ದು, ಗುಡ್ಡದಿಂದ ಬಂಡೆಗಲ್ಲೊಂದು ಕುಸಿದು ಮನೆಗೆ (weather report) ಅಪ್ಪಳಿಸಿದೆ. ಈ ಮನೆಯು ರಾಷ್ಟ್ರೀಯ ಹೆದ್ದಾರಿಯ ಕೆಳಗೆ ಇದ್ದು, ಈ ಭಾಗದಲ್ಲಿ ಸಾಲು ಸಾಲು ಮನೆಗಳು ಇವೆ. ಈ ಮನೆಗಳಿಗೆ ಹೊಂದಿಕೊಂಡಿದ್ದ ಗುಡ್ಡದಿಂದ ಈಗ ಬಂಡೆಯೊಂದು ಕುಸಿದು ಗೋಡೆಗೆ ಬಡಿದಿದೆ.

ರಸ್ತೆ ಮಾರ್ಗವನ್ನು ಬ್ಲಾಕ್‌ ಮಾಡಲಾಗಿರುವುದು

ಗ್ರಾಮದ ಗಣೇಶ ತುಳಸು ಅಂಬಿಗ ಎಂಬುವವರ ಮನೆಗೆ ಬಂಡೆಗಲ್ಲು ಬಿದ್ದಿದ್ದು, ಅದೃಷ್ಟವಶಾತ್ ದುರಂತವೊಂದು ತಪ್ಪಿದೆ. ಬಂಡೆ ಅಪ್ಪಳಿಸಿದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದೆ. ಕುಟುಂಬಸ್ಥರು ಮನೆಯಲ್ಲಿದ್ದಾಗಲೇ ಈ ಅವಘಡ ನಡೆದಿದೆ. ಜೂ.28ರಂದು ಗಣೇಶ ಅವರ ಮನೆಯಲ್ಲಿ ಮದುವೆ ಕಾರ್ಯ ನಿಗದಿಯಾಗಿತ್ತು. ಮದುವೆಗಾಗಿ ಮನೆಯನ್ನು ಸಿಂಗಾರ ಮಾಡಲಾಗಿತ್ತು. ಅಷ್ಟರಲ್ಲಿ ಈ ಅವಘಡ ನಡೆದಿದೆ. ಅಲ್ಲದೆ, ಈಗ ಈ ಭಾಗದ ಜನರು ಗುಡ್ಡ ಕುಸಿತದ ಆತಂಕದಲ್ಲಿದ್ದಾರೆ.

ಇದನ್ನೂ ಓದಿ: ಹೆಂಡತಿಯರೇ ನಿಮಗೆ ಬೇರೆ ಸಂಬಂಧ ಇದ್ರೆ ಓಡಿ ಹೋಗಿ, ಕಟ್ಟಿಕೊಂಡ ಗಂಡನ ಕೊಲೆ ಮಾಡಬೇಡಿ!

2017ರಲ್ಲಿ ನಡೆದಿತ್ತು ಭೀಕರ ಅವಘಡ!

ಈ ಹಿಂದೆ 2017ರಲ್ಲಿ ಇದೇ ತಂಡ್ರಕುಳಿ ಗ್ರಾಮದಲ್ಲಿ ಗುಡ್ಡಕುಸಿತ ಅವಘಡ ನಡೆದಿತ್ತು. ಈ ವೇಳೆ ಮೂವರು ಮಕ್ಕಳು ಜೀವಂತ ಸಮಾಧಿ ಆಗಿದ್ದರು. ಇದೀಗ ಮತ್ತೆ ಭಾರಿ ಮಳೆಗೆ ಗುಡ್ಡ ಕುಸಿಯುತ್ತಿದ್ದು, ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ.

Exit mobile version