Site icon Vistara News

Rain news | ವೇದಾವತಿ ನದಿಯಲ್ಲಿ ಸಿಲುಕಿದ್ದ 24 ಮಂದಿ ರಕ್ಷಣೆ

rain

ಬಳ್ಳಾರಿ: ಇಲ್ಲಿನ ವೈ.ಕಗ್ಗಲ್ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ತೋಟದಲ್ಲಿ ಹೂವು ಕೀಳಲು ಹೋಗಿ ವೇದಾವತಿಯ ನದಿಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಭೀತಿಯಲ್ಲಿದ್ದ 24 ಜನರನ್ನು (Rain news) ಫಯರ್ ಬ್ರಿಗೇಡ್ ಮತ್ತು ಪೊಲೀಸರ ತಂಡ ರಕ್ಷಣೆ ಮಾಡಿದೆ. ವೇದಾವತಿ ನದಿಯಲ್ಲಿ ನೀರು ಕಡಿಮೆ ಇದ್ದರಿಂದ ನದಿ ದಾಟಿ ಹೂವು ಕೀಳುವುದಕ್ಕೆ ಹೋಗಿದ್ದಾರೆ.

ಆದರೆ, ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪಿಡಿ ಹಳ್ಳಿ ಪೊಲೀಸರು, ಎಸಿ ಆಕಾಶ್ ಶಂಕರ್, ತಹಸೀಲ್ದಾರ್ ವಿಶ್ವನಾಥ್, ಫಯರ್ ಬ್ರಿಗೇಡ್ ತಂಡದವರು ಬೋಟ್ ಮತ್ತು ಜಾಕೆಟ್ ಬಳಸಿಕೊಂಡು 24 ಜನರನ್ನು ಭಾರಿ ಪ್ರಮಾಣದಲ್ಲಿ ಹರಿಯುತ್ತಿದ್ದ ನದಿಯಿಂದ ರಕ್ಷಣೆ ಮಾಡಿದ್ದಾರೆ.

ಪ್ರಾಣಪಾಯದಿಂದ ಪಾರಾದವರು

ರಕ್ಷಣಾ ತಂಡಕ್ಕೆ ಪ್ರಶಂಸೆ

ಫಯರ್ ಬ್ರಿಗೇಡ್ ಮತ್ತು ಪೊಲೀಸರು ಪ್ರಾಣದ ಹಂಗು ತೊರೆದು ಹರಿಯುವ ನದಿಯಲ್ಲಿ ಬಂದು ರಕ್ಷಣೆ ಮಾಡಿದ್ದು, ಅದಕ್ಕೆ ಅಗತ್ಯ ಕ್ರಮವಹಿಸಿದ್ದ ಎಸಿ ಮತ್ತು ತಹಸೀಲ್ದಾರ್ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರಾಣಾಪಾಯದಿಂದ ಪಾರಾದವರು ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ | Rain News | ರಾತ್ರಿಯಿಡಿ ಸುರಿದ ಮಳೆಗೆ ಸಾಯಿಲೇಔಟ್‌ ಮುಳುಗಡೆ

Exit mobile version