ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯ (Rajasthan Results 2023) ಮತ ಎಣಿಕೆಯ ಮುನ್ನಡೆ ಪ್ರವೃತ್ತಿ ಲಭ್ಯವಾಗಿದ್ದು, ಬೆಳಗ್ಗೆ 9.30ರ ಹೊತ್ತಿಗೆ ಕಾಂಗ್ರೆಸ್ ಮತ್ತು ಬಿಜೆಪಿ (Congress-BJP fight) ನಡುವೆ ಕತ್ತುಕತ್ತಿನ ಹಣಾಹಣಿ ನಡೆಯುತ್ತಿದೆ ರಾಜಸ್ಥಾನದಲ್ಲಿ ಸದ್ಯ ಕಾಂಗ್ರೆಸ್ ಆಡಳಿತದಲ್ಲಿದೆ. ರಾಜಸ್ಥಾನದ ಜನರು ಪ್ರತಿ ಚುನಾವಣೆಯಲ್ಲೂ ಆಡಳಿತವನ್ನು ಬದಲಾವಣೆ ಮಾಡುವ ಪ್ರವೃತ್ತಿಯನ್ನು ಹೊಂದಿದ್ದಾರೆ. ಸದ್ಯದ ಟ್ರೆಂಡ್ ಅದನ್ನೇ ತೋರಿಸುತ್ತಿದೆ.
ರಾಜಸ್ಥಾನದಲ್ಲಿ 199 ಕ್ಷೇತ್ರಗಳಿದ್ದು ಬಿಜೆಪಿ 101 ಮತ್ತು ಕಾಂಗ್ರೆಸ್ 84 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. 14 ಕ್ಷೇತ್ರದಲ್ಲಿ ಇತರರು ಮುನ್ನಡೆಯಲ್ಲಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿಯ ವಸುಂಧರಾ ರಾಜೇ, ಕಾಂಗ್ರೆಸ್ನ ಸಚಿನ್ ಪೈಲಟ್ ಮುನ್ನಡೆಯಲ್ಲಿದ್ದಾರೆ.
ಇಲ್ಲಿ 14 ಕ್ಷೇತ್ರಗಳಲ್ಲಿ ಪಕ್ಷೇತರರು ಮತ್ತು ಇತರರು ಮುನ್ನಡೆಯಲ್ಲಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಇಲ್ಲಿ ಇವರೇ ನಿರ್ಣಾಯಕರಾಗುವ ಸಾಧ್ಯತೆ ಕಾಣಿಸುತ್ತಿದೆ.
ಮತದಾನೋತ್ತರ ಸಮೀಕ್ಷೆಗಳು ಹೇಳಿದ್ದೇನು?
ರಾಜಸ್ಥಾನದಲ್ಲಿ ಬಹುತೇಕ ಚುನಾವಣೋತ್ಸ ಸಮೀಕ್ಷೆಗಳು ಭಾರತೀಯ ಜನತಾ ಪಾರ್ಟಿಗೆ ಅಧಿಕಾರವನ್ನು ನೀಡಿವೆ. ಆಡಳಿತಾರೂಢ ಕಾಂಗ್ರೆಸ್ ಅಧಿಕಾರ ವಂಚಿತವಾಗಲಿದೆ. ಇಟಿಜಿ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್: 56-72; ಬಿಜೆಪಿ: 108-128; ಇತರರು: 13-21 ಸ್ಥಾನಗಳನ್ನು ಗೆಲ್ಲಲಿದ್ದರೆ, ಪಿಎಂಎಆರ್ಕ್ಯೂ ಪ್ರಕಾರ, ಕಾಂಗ್ರೆಸ್: 69-81 ಬಿಜೆಪಿ: 105-125; ಇತರರು: 5-15 ಹಾಗೂ ಟಿವಿ 9 ಭಾರತ್ ವರ್ಷ್ -ಪೋಲ್ಸ್ಟ್ರಾಟ್ ಸಮೀಕ್ಷೆಯು ಬಿಜೆಪಿ 100-110 ಕಾಂಗ್ರೆಸ್ +: 90-110; ಇತರರು: 05-15 ಸ್ಥಾನಗಳನ್ನು ಗೆಲ್ಲಲಿದ್ದಾರೆಂದು ಹೇಳಿದೆ.
ಇದನ್ನೂ ಓದಿ: Assembly Election Results 2023 Live: ತೆಲಂಗಾಣದಲ್ಲಿ ಮ್ಯಾಜಿಕ್ ನಂಬರ್ ಗಡಿ ದಾಟಿದ ಕಾಂಗ್ರೆಸ್
ಅದೇ ರೀತಿ ಜನ್ ಕಿ ಬಾತ್ ಸಮೀಕ್ಷೆಯು ಬಿಜೆಪಿ: 100-122 ಕಾಂಗ್ರೆಸ್: 62-85 ಇತರರು: 14-15 , ಸಿಎನ್ಎನ್ 18 ಸಮೀಕ್ಷೆಯು, ಬಿಜೆಪಿ: 111, ಕಾಂಗ್ರೆಸ್: 74 ,ಇತರೆ: 14 ಹಾಗೂ ಸಟ್ಟಾ ಬಜಾರ್ ಬಿಜೆಪಿ- 115, ಕಾಂಗ್ರೆಸ್- 68 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಹೇಳಿದೆ.