Site icon Vistara News

Rajyotsava Awards: ವಿಜ್ಞಾನಿಯಿಂದ ಪತ್ರಿಕಾ ವಿತರಕರವರೆಗೆ; ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪೂರ್ಣ ಪಟ್ಟಿ

V somanath and Javarappa

ಬೆಂಗಳೂರು: 68ನೇ ಕನ್ನಡ ರಾಜ್ಯೋತ್ಸವ (Kannada Rajyotsava) ಸಂದರ್ಭದಲ್ಲಿ 68 ಮಂದಿ ಸಾಧಕರು ಮತ್ತು 10 ಕನ್ನಡ ಪರ ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ (Rajyotsava Awards) ಘೋಷಿಸಲಾಗಿದೆ. ಸಂಗೀತ-ನೃತ್ಯ, ಚಲನಚಿತ್ರ, ರಂಗಭೂಮಿ, ಶಿಲ್ಪಕಲೆ/ಚಿತ್ರಕಲೆ/ಕರಕುಶಲ, ಜಾನಪದ, ಸಮಾಜಸೇವೆ, ಆಡಳಿತ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ಕ್ರೀಡೆ, ನ್ಯಾಯಾಂಗ, ಪರಿಸರ, ಸಂಕೀರ್ಣ, ಮಾಧ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ, ಹೊರನಾಡು, ಸ್ವಾತಂತ್ರ್ಯ ಹೋರಾಟಗಾರರು ಹೀಗೆ 18 ಕ್ಷೇತ್ರಗಳಲ್ಲಿ ಒಟ್ಟು 68 ಮಂದಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ವಿಜ್ಞಾನಿಗಳು, ಕಲಾವಿದರು, ಸಂಶೋಧಕರು, ಜನ ಸಾಮಾನ್ಯರು ಹೀಗೆ ನಾನಾ ವರ್ಗದ ಜನರು ಇದ್ದಾರೆ. ಒಬ್ಬ ಪತ್ರಿಕಾ ವಿತಕರರಿಗೂ ಈ ಬಾರಿಯ ಪ್ರಶಸ್ತಿ ಸಂದಿರುವುದು ವಿಶೇಷ.

ಪತ್ರಿಕಾ ವಿತರಕರ ಶ್ರಮ ಗುರುತಿಸಿ ಗೌರವಿಸಿದ ರಾಜ್ಯ ಸರ್ಕಾರ

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರನ್ನೂ ರಾಜ್ಯೋತ್ಸವ ಪ್ರಶಸ್ತಿಗಾಗಿ ಪರಿಗಣಿಸಿ ಗೌರವಿಸಲಾಗಿದೆ. ಮಾಧ್ಯಮ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಪತ್ರಿಕಾ ವಿತರಕಾ ಸಮುದಾಯದಿಂದ ಜವರಪ್ಪ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಇಡಿ ವಿತರಕ ಸಮುದಾಯವನ್ನು, ಈ ಸಮುದಾಯದ ಕಾರ್ಯಕ್ಷಮತೆ ಮತ್ತು ಶ್ರಮವನ್ನು ರಾಜ್ಯ ಸರ್ಕಾರ ಮತ್ತು ಆಯ್ಕೆ ಸಮಿತಿ ಗುರುತಿಸಿದೆ, ಗೌರವಿಸಿದೆ. ತುಮಕೂರಿನಲ್ಲಿ ಇತ್ತೀಚಿಗೆ ಜರುಗಿದ ಪತ್ರಿಕಾ ವಿತರಕರ ರಾಜ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ್ದ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು, “ರಾಜ್ಯ ಸರ್ಕಾರದ ಪ್ರಶಸ್ತಿಗಳಲ್ಲಿ ಪತ್ರಿಕಾ ವಿತರಕರನ್ನೂ ಪರಿಗಣಿಸಲಾಗುವುದು” ಎನ್ನುವ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ ಇಲ್ಲಿದೆ

ಸಂಗೀತ- ನೃತ್ಯ

1. ಡಾ ನಯನ್ ಎಸ್​ ಮೋರೆ (ಬೆಂಗಳೂರು)
2. ನೀಲಾ ಎಮ್​ ಕೊಡ್ಲಿ (ಧಾರವಾಡ)
3. ಶಬ್ಬೀರ್ ಅಹಮದ್​ (ಬೆಂಗಳೂರು)
4. ಡಾ ಎಸ್​ ಭಾಳೇಶ ಭಜಂತ್ರಿ (ಬೆಳಗಾವಿ)

ಚಲನಚಿತ್ರ

1. ಡಿಂಗ್ರಿ ನಾಗರಾಜ್​ (​ಬೆಂಗಳೂರು)
2. ಬಿ. ಜನಾರ್ಧನ (ಬ್ಯಾಂಕ್ ಜನಾರ್ದನ)

ರಂಗಭೂಮಿ

1. ಎ.ಜಿ ಚಿದಂಬರ ರಾವ್ ಜಂಬೆ (ಶಿವಮೊಗ್ಗ)
2. ಪಿ ಗಂಗಾಧರ ಸ್ವಾಮಿ (ಮೈಸೂರು)
3. ಎಚ್ ಬಿ ಸರೊಜಮ್ಮ (ಧಾರವಾಡ)
4. ತಯ್ಯಬ್​ಖಾನ್​ ಎಂ ಇನಾಮದಾರ( ಬಾಗಲಕೋಟೆ)
5. ಡಾ ವಿಶ್ವನಾಥ್ ವಂಶಾಕೃತ ಮಠ (ಬಾಗಲಕೋಟೆ)
6. ಪಿ ತಿಪ್ಪೇಸ್ವಾಮಿ (ಚಿತ್ರದುರ್ಗ)

ಶಿಲ್ಪ ಕಲೆ/ ಚಿತ್ರ ಕಲೆ/ ಕರಕುಶಲ

1.ಟಿ ಶಿವಶಂಕರ್​ (ದಾವಣಗೆರೆ)
2.ಕಾಳಪ್ಪ ವಿಶ್ವಕರ್ಮ (ರಾಯಚೂರು)
3.ಮಾರ್ಥಾ ಜಾಕಿಮೊವಿಚ್​ (ಬೆಂಗಳೂರು)
4.ಪಿ ಗೌರಯ್ಯ (ಮೈಸೂರು)

ಜಾನಪದ

    1. ಹುಸೇನಾಬಿ ಬುಡೆನ್‌ ಸಾಬ್‌ ಸಿದ್ದಿ- ಉತ್ತರ ಕನ್ನಡ
    2. ಶಿವಂಗಿ ಶಣ್ಮರಿ- ದಾವಣಗೆರೆ
    3. ಮಹದೇವು- ಮೈಸೂರು
    4. ನರಸಪ್ಪಾ- ಬೀದರ್‌
    5. ಶಕುಂತಲಾ ದೇವಲಾನಾಯಕ- ಕಲಬುರಗಿ
    6. ಎಚ್‌.ಕೆ. ಕಾರಮಂಚಪ್ಪ- ಬಳ್ಳಾರಿ
    7. ಶಂಭು ಬಳಿಗಾರ- ಗದಗ
    8. ವಿಭೂತಿ ಗುಂಡಪ್ಪ-ಕೊಪ್ಪಳ
    9. ಚೌಡಮ್ಮ-ಚಿಕ್ಕಮಗಳೂರು

    ಸಮಾಜಸೇವೆ

    1. ಹುಚ್ಚಮ್ಮ ಬಸಪ್ಪ ಚೌದ್ರಿ- ಕೊಪ್ಪಳ
    2. ಚಾರ್ಮಾಡಿ ಹಸನಬ್ಬ- ದಕ್ಷಿಣ ಕನ್ನಡ
    3. ಕೆ ರೂಪ್ಲಾ ನಾಯಕ್‌- ದಾವಣಗೆರೆ
    4. ನಿಜಗುಣಾನಂದ ಮಹಾಸ್ವಾಮಿಗಳು, ನಿಷ್ಕಲ ಮಂಟಪ- ಬೆಳಗಾವಿ
    5. ನಾಗರಾಜು.ಜಿ- ಬೆಂಗಳೂರು

    ಆಡಳಿತ

    1. ಜಿ.ವಿ ಬಲರಾಮ್‌- ತುಮಕೂರು

    ವೈದ್ಯಕೀಯ

    1. ಡಾ. ಸಿ ರಾಮಚಂದ್ರ- ಬೆಂಗಳೂರು
    2. ಡಾ. ಪ್ರಶಾಂತ್‌ ಶೆಟ್ಟಿ- ದಕ್ಷಿಣ ಕನ್ನಡ

    ಸಾಹಿತ್ಯ

    1. ಪ್ರೊ. .ಸಿ. ನಾಗಣ್ಣ- ಚಾಮರಾಜನಗರ
    2. ಸುಬ್ಬು ಹೊಲೆಯಾರ್‌ – ಹಾಸನ
    3. ಸತೀಶ ಕುಲಕರ್ಣಿ- ಹಾವೇರಿ
    4.ಲಕ್ಷ್ಮೀಪತಿ ಕೋಲಾರ- ಕೋಲಾರ
    5. ಪರಪ್ಪ ಗುರುಪಾದಪ್ಪ ಸಿದ್ಧಾಪುರ- ವಿಜಯಪುರ
    6.ಡಾ.ಕೆ. ಷರೀಫಾ – ಬೆಂಗಳೂರು

    ಶಿಕ್ಷಣ

    1.ರಾಮಪ್ಪ (ರಾಮಣ್ಣ) ಹವಳೆ – ರಾಯಚೂರು
    2. ಕೆ. ಚಂದ್ರಶೇಖರ್‌ – ಕೋಲಾರ
    3. ಕೆ.ಟಿ. ಚಂದು- ಮಂಡ್ಯ

    ಕ್ರೀಡೆ

    1. ಕುಮಾರಿ ದಿವ್ಯಾ ಟಿ.ಎಸ್.-‌ ಕೋಲಾರ
    2. ಅದಿತಿ ಅಶೋಕ್‌ – ಬೆಂಗಳೂರು
    3. ಅಶೊಕ್‌ ಗದಿಗೆಪ್ಪ ಎಣಗಿ – ಧಾರವಾಡ

    ನ್ಯಾಯಾಂಗ

    1.ಜ.ವಿ. ಗೋಪಾಲಗೌಡ- ಚಿಕ್ಕಬಳ್ಳಾಪುರ

    ಪರಿಸರ

    1. ಸೋಮನಾಥರೆಡ್ಡಿ ಪೂರ್ಮಾ – ಕಲಬುರಗಿ
    2. ದ್ಯಾವನಗೌಡ ಟಿ. ಪಾಟೀಲ- ಧಾರವಾಡ
    3. ಶಿವರೆಡ್ಡಿ ಹನುಮರೆಡ್ಡಿ ವಾಸನ- ಬಾಗಲಕೋಟೆ

    ಸಂಕೀರ್ಣ

    1. ಎಂ.ಎಂ.ಮದರಿ- ವಿಜಯಪುರ
    2. ಹಾಜಿ ಹಬ್ದುಲ್ಲಾ ಪರ್ಕಳ- ಉಡುಪಿ
    3. ಮಿಮಿಕ್ರಿ ದಯಾನಂದ್-‌ ಮೈಸೂರು
    4. ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್-‌ ಮೈಸೂರು
    5. ಲೆ.ಜ. ಕೊಡನ ಪೂವಯ್ಯ ಕಾರ್ಯಪ್ಪ- ಕೊಡಗು

    ಮಾಧ್ಯಮ ಕ್ಷೇತ್ರ

    1.ದಿನೇಶ್‌ ಅಮೀನ್‌ ಮಟ್ಟು -ದಕ್ಷಿಣ ಕನ್ನಡ
    2. ಜವರಪ್ಪ: ಮೈಸೂರು
    3. ಮಾಯಾ ಶರ್ಮ: ಬೆಂಗಳೂರು
    4. ರಫೀ ಭಂಡಾರಿ: ವಿಜಯಪುರ

    ಕ್ಷೇತ್ರ: ವಿಜ್ಞಾನ/ತಂತ್ರಜ್ಞಾನ

    1.ಎಸ್‌ ಸೋಮನಾಥನ್‌(ಇಸ್ರೋ ಅಧ್ಯಕ್ಷರು): ಬೆಂಗಳೂರು
    2.ಪ್ರೊ. ಗೋಪಾಲನ್‌ ಜಗದೀಶ್‌: ಚಾಮರಾಜ ನಗರ

    ಹೊರನಾಡು/ಹೊರದೇಶ

    1.ಸೀತಾರಾಮ ಅಯ್ಯಂಗಾರ್‌
    2. ದೀಪಕ್‌ ಶೆಟ್ಟಿ
    3. ಶಶಿಕಿರಣ್‌ ಶೆಟ್ಟಿ

    ಸ್ವಾತಂತ್ರ್ಯ ಹೋರಾಟಗಾರರು

    1. ಪುಟ್ಟಸ್ವಾಮಿಗೌಡ: ರಾಮನಗರ

    ಕರ್ನಾಟಕ ಸಂಭ್ರಮ 50ರ ರಾಜ್ಯೋತ್ಸವ ಪ್ರಶಸ್ತಿ-2023 (ಸಂಘ- ಸಂಸ್ಥೆ ಕ್ಷೇತ್ರ)

    1. ಕರ್ನಾಟಕ ಸಂಘ – ಶಿವಮೊಗ್ಗ
    2. ಬಿ.ಎನ್‌. ಶ್ರೀರಾಮ ಪುಸ್ತಕ ಪ್ರಕಾಶನ – ಮೈಸೂರು
    3. ಮಿಥಿಕ್‌ ಸೊಸೈಟಿ – ಬೆಂಗಳೂರು
    4. ಕರ್ನಾಟಕ ಸಾಹಿತ್ಯ ಸಂಘ – ಯಾದಗಿರಿ
    5. ಮೌಲಾನಾ ಆಜಾದ್‌ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ – ದಾವಣಗೆರೆ
    6. ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ – ದಕ್ಷಿಣ ಕನ್ನಡ
    7. ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ – ಬಾಗಲಕೋಟೆ
    8. ಚಿಣ್ಣರ ಬಿಂಬ – ಮುಂಬೈ
    9. ಮಾರುತಿ ಜನಸೇವಾ ಸಂಘ – ದಕ್ಷಿಣ ಕನ್ನಡ
    10. ವಿದ್ಯಾದಾನ ಸಮಿತಿ – ಗದಗ

    ಇದನ್ನೂ ಓದಿ: Kannada Rajyotsava : ರಾಜ್ಯೋತ್ಸವ ದಿನ ಹಾಡಬೇಕಾದ 5 ಹಾಡುಗಳು ಇಲ್ಲಿವೆ; ಸಾಹಿತ್ಯ ಸಂಗೀತ ಸಹಿತ!

    ಸಂಗೀತ ನೃತ್ಯ ಕ್ಷೇತ್ರದಿಂದ ಸಾಹಿತ್ಯ ಕ್ಷೇತ್ರದವರೆಗೆ ಪೂರ್ಣ ಪಟ್ಟಿ ಇಲ್ಲಿದೆ

    ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಎಲ್ಲ ಕ್ಷೇತ್ರಗಳನ್ನ ನಾವು ಪರಿಗಣನೆ ಮಾಡಿದ್ದೇವೆ ಎಂದು ತಿಳಿಸಿದರು.

    ಶಿಕ್ಷಣ ಕ್ಷೇತ್ರದಿಂದ ಸ್ವಾತಂತ್ರ್ಯ ಹೋರಾಟಗಾರರ ವರೆಗೆ

    ಇದನ್ನೂ ಓದಿ: Indira Gandhi : ಇಂದಿರಾ ಗಾಂಧಿಯಂಥ ಜನಪರ-ಜನಪ್ರಿಯ ಪ್ರಧಾನಿ ಮತ್ತೊಬ್ಬರು ಬಂದಿಲ್ಲ: ಸಿಎಂ ಸಿದ್ದರಾಮಯ್ಯ

    ಈ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ಪ್ರಕಟ

    Exit mobile version