ಉಡುಪಿ: ನಗರದಲ್ಲಿ ಬುಧವಾರ ಕೃಷ್ಣಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ನಡುವೆ ಮಲ್ಪೆ ಕೊಳ ಪರಿಸರದಲ್ಲಿ ಆಯೋಜನೆಯಾಗಿದ್ದ ಹುಲಿವೇಷ ಸ್ಪರ್ಧೆಯಲ್ಲಿ ತಾಸೆಯ ಬೀಟ್ಗೆ ನಟ ರಕ್ಷಿತ್ ಶೆಟ್ಟಿ (Rakshit Shetty) ಅವರು ಬಿಂದಾಸ್ ಆಗಿ ಕುಣಿದು ಸಂಭ್ರಮಿಸಿದ್ದು ಕಂಡುಬಂತು.
ಕಡಲ ತಡಿಯಲ್ಲಿ ಹುಲಿ ಕುಣಿತ ಸ್ಪರ್ಧೆ ವೀಕ್ಷಿಸಲು ಸಪ್ತಸಾಗರದಾಚೆ ಎಲ್ಲೋ ತಂಡದೊಂದಿಗೆ ಸಿಂಪಲ್ ಸ್ಟಾರ್ ಶೆಟ್ಟಿ, ರುಕ್ಮಿಣಿ ವಸಂತ್, ನಿರ್ದೇಶಕ ಹೇಮಂತ್ ಭೇಟಿ ನೀಡಿದ್ದರು. ಹುಲಿ ಕುಣಿತದ ಬೀಟ್ಗೆ ರಕ್ಷಿತ್ ಶೆಟ್ಟಿ ಸಖತ್ ಸ್ಟೆಪ್ಸ್ ಹಾಕಿ ಖುಷಿ ಪಟ್ಟರು.
ಕಾರ್ಯಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ ಅವರು ಮಾತನಾಡಿ, ಬಹಳ ವರ್ಷಗಳಿಂದ ಇಲ್ಲಿ ಹುಲಿವೇಷ ಸ್ಪರ್ಧೆ ನಡೆಸುತ್ತಿದ್ದಾರೆ. ಇದುವರೆಗೆ ನಾನು ಬಂದಿರಲು ಸಾಧ್ಯವಾಗಿರಲಿಲ್ಲ. ಈಗ ಇಲ್ಲಿಗೆ ಬಂದಿರುವುದು ಬಹಳ ಸಂತಸವಾಗಿದೆ. ಹತ್ತು ವರ್ಷದ ಹಿಂದೆ ಕೃಷ್ಣಾಷ್ಟಮಿ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ನಾನು ಉಳಿದವರು ಕಂಡಂತೆ ಚಿತ್ರದ ಶೂಟಿಂಗ್ ಮಾಡುತ್ತಿದ್ದೆ. ಇದೀಗ ಕೃಷ್ಣಾಷ್ಟಮಿಯಂದೇ ನಿಮ್ಮ ಮುಂದೆ ವೇದಿಕೆ ಹತ್ತುವ ಸೌಭಾಗ್ಯ ದೊರಕಿದೆ ಎಂದು ಹೇಳಿದರು.
ಕೃಷ್ಣಾಷ್ಟಮಿ ಸಂದರ್ಭದಲ್ಲಿ ನನ್ನ ʼಸಪ್ತಸಾಗರದಾಚೆ ಎಲ್ಲೋʼ ಸಿನಿಮಾ ಬಿಡುಗಡೆಯಾಗಿದೆ. ಪ್ರೇಕ್ಷಕರು ವೀಕ್ಷಿಸಿ ಚಿತ್ರವನ್ನು ಯಶಸ್ಸುಗೊಳಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ | Rishab Shetty: ರಾಧಾ-ಕೃಷ್ಣನಾಗಿ ಮಿಂಚಿದ ರಿಷಬ್ ಶೆಟ್ಟಿ ಮಕ್ಕಳು