ದೇಶಾದ್ಯಂತ ರಾಮೋತ್ಸವದ ಸಂಭ್ರಮ ಸಡಗರ ಮನೆ ಮಾಡಿದೆ. ಈ ಐತಿಹಾಸಿಕ ದಿನವನ್ನು ಕರುನಾಡಿನ ಗಲ್ಲಿ ಗಲ್ಲಿಯಲ್ಲೂ ಅದ್ಧೂರಿಯಾಗಿ (Ram Mandir) ಆಚರಿಸಲಾಗುತ್ತಿದೆ. ಕೋಟ್ಯಂತರ ಭಕ್ತ ಸಮೂಹ, ಭಕ್ತಿ ಭಾವದಲ್ಲಿ ಭಾವೈಕ್ಯತೆಯೊಂದಿಗೆ ಮಿಂದೇಳುತ್ತಿದೆ. ವಿಶಿಷ್ಟ, ವಿಭಿನ್ನ ಸೇವೆ ಮೂಲಕ ರಾಮನ (Ayodhya Mandir) ಕೃಪೆಗೆ ಪಾತ್ರರಾಗುತ್ತಿದ್ದಾರೆ. ದೇಶದ ಮೂಲೆ-ಮೂಲೆಯಲ್ಲೂ ರಾಮಜಪವೇ ಝೇಂಕರಿಸುತ್ತಿದೆ.
ರಾಜ್ಯದಲ್ಲಿ ಮಕ್ಕಳು ಬಾಲ ರಾಮನ ವೇಷದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೆಣ್ಣುಮಕ್ಕಳು ಮದರಂಗಿಯ ಮೂಲಕ ರಾಮನ ಹೆಸರನ್ನು ಬಿಡಿಸಿಕೊಂಡಿದ್ದಾರೆ. ಈ ವೇಳೆ ವಿಸ್ತಾರ ನ್ಯೂಸ್ ಸಹ ಜನರ ಸಂಭ್ರಮದಲ್ಲಿ ಭಾಗಿಯಾಗಿದ್ದು, ಸೆಲ್ಫಿ ವಿತ್ ರಾಮೋತ್ಸವಕ್ಕೆ (Selfie With Ramotsava) ಕರೆ ನೀಡಿತ್ತು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರತಿಕ್ರಿಯೆ ಲಭ್ಯವಾಗಿದ್ದು, ಫೋಟೋಗಳನ್ನು ಕಳಿಸಿ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ರಾಮೋತ್ಸವದ ಸಂತಸವು ಹೇಗಿತ್ತು? ಇಲ್ಲಿದೆ ನೋಡಿ ಫೋಟೊ ಗ್ಯಾಲರಿ.
ಬಿಲ್ಲು ಹಿಡಿದ ಜೀಕಿನಕಟ್ಟಿಯ ಶ್ರೀಜಯ್ ಚರಂತಿಮಠ
ರಾಮನ ಅವತಾರದಲ್ಲಿ ಮಿಂಚಿದ ಮುಂಡರಗಿಯ ಸಮೃದ್ಧ ನಾಗಭೂಷಣ ಹಿರೇಮಠ
ಮುದ್ದು ರಾಮನಾಗಿ ಮುಂಡರಗಿಯ ಅಭಿನವ ಹಿರೇಮಠ ಕಂಡಿದ್ದು ಹೀಗೆ
ರಾಮನ ಭಕ್ತಿ ಗಾಯನದಲ್ಲಿ ಮುಳುಗಿದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಭಗವತಿ ಗುಡಿಯಲ್ಲಿ ಸವಿತಾ ಕೊಡಂದೂರು ಮತ್ತು ಬಳಗ
ಯಾವುದೇ ಬಣ್ಣವನ್ನು ಬಳಸದೆ ಮೂರು ತರಹದ ಸಿರಿಧಾನ್ಯ ಬಳಸಿ ರಾಮ ಮಂದಿರದ ಚಿತ್ರವನ್ನು ಬಿಡಿಸಿದ ರಾಮ ಭಕ್ತ ಯುವ ಕಲಾವಿದ ಗಣೇಶ ರಾಯ್ಕರ
ಬೆಂಗಳೂರಿನ ವಿಜಯನಗರದಲ್ಲಿ ಸರ್ವಂ ರಾಮಮಯಂ
ಮದರಂಗಿಯಲ್ಲೂ ರಾಮನ ಜಪ ಮಾಡಿದ ಬೆಂಗಳೂರಿನ ವಿಜಯನಗರದ ನಿವಾಸಿಗಳು
ರಾಮೋತ್ಸವದಲ್ಲಿ ಭಾಗಿಯಾದ ಕಂಪ್ಲಿಯ ಡಾ.ಬಿ.ಸುಧಾಕರ್ ಮತ್ತು ಕುಟುಂಬ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ