Site icon Vistara News

Rama Mandir : ಇದು ದೇಶಕ್ಕೇ ನಡೆದ ಪ್ರಾಣಪ್ರತಿಷ್ಠೆ; ದೀಪ ಬೆಳಗಿದ ಕಿಚ್ಚ ಸುದೀಪ್ ವ್ಯಾಖ್ಯಾನ

Sudeep Rama Rajya

ಬೆಂಗಳೂರು: ಸೋಮವಾರ (ಜನವರಿ 22) ಮಧ್ಯಾಹ್ನ ಅಯೋಧ್ಯೆಯಲ್ಲಿ ರಾಮ ಮಂದಿರ (Rama Mandir) ಲೋಕಾರ್ಪಣೆ ವೈಭವದಿಂದ ನಡೆಯಿತು. ದೇಶದೆಲ್ಲೆಡೆ ರಾಮೋತ್ಸವದ ಸಡಗರ (Ramotsava Celebration) ವ್ಯಾಪಿಸಿದೆ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕರೆಯಂತೆ ಸೋಮವಾರ ಸಂಜೆ ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮವನ್ನು (Deepavali Celebration) ಆಚರಿಸಲಾಯಿತು. ರಾಜಕಾರಣಿಗಳು, ಸೆಲೆಬ್ರಿಟಿಗಳು, ಜನಸಾಮಾನ್ಯರು ಈ ಸಂಭ್ರಮದಲ್ಲಿ ಭಾಗಿಯಾದರು.

ಖ್ಯಾತ ಚಿತ್ರ ನಟ ಕಿಚ್ಚ ಸುದೀಪ್‌ (Kichcha Sudeep) ಅವರು ತಮ್ಮ ಮನೆಯಲ್ಲಿ ಬಾಲ ರಾಮನ ಮೂರ್ತಿಗೆ ದೀಪ ಬೆಳಗಿ ಪೂಜೆ ಮಾಡಿದ್ದಾರೆ. ಜತೆಗೆ ರಾಮನ ಗುಣಗಾನ ಮಾಡಿದ್ದಾರೆ. ಇಡೀ ದೇಶ ರಾಮನ ಸ್ಮರಣೆ ಮಾಡುತ್ತಿರುವ ನಡುವೆಯೇ ಕಿಚ್ಚ ಸುದೀಪ್ ಧ್ವನಿಗೂಡಿಸಿದ್ದು ಗಮನ ಸೆಳೆದಿದೆ. ರಾಮ ನಮ್ಮ ಬದುಕಿನಲ್ಲಿ ಎಷ್ಟು ಮುಖ್ಯ ಮತ್ತು ಹೇಗೆ? ಎಂಬುದನ್ನು ಸುದೀಪ್‌ ತಮ್ಮ ಸಾಲುಗಳಲ್ಲಿ ಹೇಳಿದ್ದಾರೆ.

His shoulders our strength,
His chest our ambition,
His hands our valour,
His feet our salvation,
In his form, the essence of all creation.
So it begins, From here we rise! The prana-prathishta Of a nation, Of a people, Of light after 500 years of dark.-Jai Shri Ram

ಇದನ್ನೂ ಓದಿ : Ram Mandir: ಅಯೋಧ್ಯೆಯಲ್ಲಿ ರಾಮ ದೀಪೋತ್ಸವ! ರಾಮಜ್ಯೋತಿ ಬೆಳಗಿದ ಪಿಎಂ ಮೋದಿ

ಅವನ ತೋಳುಗಳೇ ನಮ್ಮ ಬಲ
ಅವನ ವಿಸ್ತಾರ ಎದೆಯೇ ನಮ್ಮ ಮಹತ್ವಾಕಾಂಕ್ಷೆ
ಅವನ ಕೈಗಳು ನಮ್ಮ ಶೌರ್ಯ
ಅವನ ಪಾದ ನಮ್ಮ ಪಾಲಿಗೆ ಮೋಕ್ಷ
ಅವನ ರೂಪದಲ್ಲಿ, ಎಲ್ಲಾ ಸೃಷ್ಟಿಯ ಸಾರವಿದೆ.
ಹೀಗಾಗಿ ಎಲ್ಲವೂ ಇಲ್ಲಿಂದಲೇ ಆರಂಭವಾಗುತ್ತದೆ. ಇಲ್ಲಿಂದಲೇ ನಮ್ಮ ಏಳಿಗೆ ಶುರು
500 ವರ್ಷಗಳ ಅಂಧಕಾರದ ಬಳಿಕ ಒಂದು ರಾಷ್ಟ್ರದ ಪ್ರಾಣಪ್ರತಿಷ್ಠೆಯಾಗಿದೆ, ದೇಶದ ಜನರ ಪ್ರಾಣಪ್ರತಿಷ್ಠೆಯಾಗಿದೆ- ಜೈಶ್ರೀರಾಂ
ಎಂದು ಸುದೀಪ್‌ ತಮ್ಮ ಟ್ವಿಟರ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

Exit mobile version