Site icon Vistara News

Rama Mandir : ಏನೀ ಅಚ್ಚರಿ!; ಎಲ್ಲಿ ರಾಮನೋ ಅಲ್ಲಿ ಹನುಮನು ಎಂಬಂತೆ ಪೂಜೆ ವೇಳೆ ಆಂಜನೇಯ ಪ್ರತ್ಯಕ್ಷ

Hanuma at rama pooje

ಗದಗ: ಎಲ್ಲಿ ರಾಮನೋ ಅಲ್ಲಿ ಹನುಮನು ಅನ್ನುವ ಮಾತನ್ನು ನಾವು ಕೇಳಿದ್ದೇವೆ. ಆ ಮಾತು ರಾಮ ಮಂದಿರ (Rama Mandir) ಲೋಕಾರ್ಪಣೆಯ ಸಂದರ್ಭದಲ್ಲಿ ಕೆಲವು ಕಡೆ ನಿಜವಾಗಿದೆ. ಗದಗ ಜಿಲ್ಲೆಯ (Gadaga News) ಎರಡು ಕಡೆ ರಾಮನ ಪೂಜೆ, ಭಜನೆ ನಡೆಯುತ್ತಿದ್ದ ಸ್ಥಳಕ್ಕೆ ಆಂಜನೇಯ (Monkey appeared) ಆಗಮಿಸಿ, ಪೂಜೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡದ್ದು ಕಂಡುಬಂತು.

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾನ ಹಿನ್ನೆಲೆಯಲ್ಲಿ ಮುಳಗುಂದ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಪೂಜೆ ಏರ್ಪಡಿಸಲಾಗಿತ್ತು. ಅಲ್ಲಿ ಶ್ರೀರಾಮ ದೇವರ ಪೂಜೆ ವೇಳೆ ವಾನರ ರೂಪಿ ಹನುಮ ಪ್ರತ್ಯಕ್ಷನಾಗಿದ್ದಾನೆ! ಗರ್ಭಗುಡಿ ಹೊಸ್ತಿಲಲ್ಲಿ ಕುಳಿತು ಶ್ರೀರಾಮನ ದರ್ಶನ ಪಡೆದ ಹನುಮ ಅಚ್ಚರಿ ಮೂಡಿಸಿದ್ದಾನೆ. ರಾಮನ ದರ್ಶನ ಮಾಡಿ ಅಲ್ಲಿಗೆ ಬಂದ ಭಕ್ತರ ಜತೆಗೆ ಪ್ರೀತಿಯಿಂದ ಮೈದಡವಿಸಿಕೊಂಡು ತೆರಳಿದೆ.

ಮುಳುಗುಂದ ದೇವಸ್ಥಾನಕ್ಕೆ ಬಂದ ಹನುಮ

ಬಾಗಲಕೋಟೆಯಲ್ಲೂ ರಾಮ ನಾಮ ಸ್ಮರಣೆ ವೇಳೆ ಬಂದ ಹನುಮ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೂಡಾ ಪೂಜೆಯ ವೇಳೆ ಹನುಮ ಆಗಮಿಸಿದ್ದಾನೆ. ಶ್ರೀ ರಾಮನ ಆರಾಧನೆ ಕಾರ್ಯಕ್ರಮಕ್ಕೆ ರಾಮನ ಬಂಟ ಹನುಮಂತ ಬಂದಿದ್ದು ಎಲ್ಲರಿಗೂ ಖುಷಿ ನೀಡಿತು.

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮ ಹಾಗೂ ಮಾರುತಿ ದೇವರ ಪೂಜೆ, ಹವನ ನಡೆಯುತ್ತಿತ್ತು. ಸೋಮೇಶ್ವರ ದೇವಸ್ಥಾನದಲ್ಲಿ ನಡೆದ ಯಜ್ಞದ ಸಮಯದಲ್ಲಿ ಕಾಣಿಸಿಕೊಂಡ ಹನುಮ ತುಂಬ ಹೊತ್ತು ಯಜ್ಞ ಕುಂಡದ ಬಳಿ ಕುಳಿತು ಯಜ್ಞವನ್ನು ವೀಕ್ಷಿಸಿದ್ದಾನೆ. ಹೋಮ ಮುಗಿಯುವವರೆಗೂ ಮಂಗ ಅಲ್ಲಿಯೇ ಇದ್ದು ಜನರಲ್ಲಿ ಅಚ್ಚರಿ ಮೂಡಿಸಿತು.

ಹೋಮ ಕುಂಡದ ಪಕ್ಕದಲ್ಲಿ ಕುಳಿತ ಹನುಮ ಅಲ್ಲಿದ್ದ ದೀಪವನ್ನು ಹಿಡಿದುಕೊಂಡಿತು. ಅದನ್ನು ತೆಗೆದು ಮತ್ತೊಂದು ದಿಕ್ಕಿನಲ್ಲಿ ಇಟ್ಟರೆ ಅಲ್ಲಿಗೂ ಹೋಗಿ ಕುಳಿತುಕೊಂಡಿತು. ಕೊನೆಗೆ ಹೋಮ ಮುಗಿಯುತ್ತಿದ್ದಂತೆಯೇ ಅಲ್ಲಿಂದ ಹೊರಟಿತು.

ಬಾಗಲಕೋಟೆಯಲ್ಲಿ ಹನುಮಾನ್‌ ದೇಗುಲ ಉದ್ಘಾಟನೆ

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ಬಾಗಲಕೋಟೆಯಲ್ಲಿ ರಾಮನ ಬಂಟ ಪಂಚಮುಖಿ ಹನುಮಾನ್ ದೇಗುಲ ಉದ್ಘಾಟನೆ ನಡೆಯಿತು. ಗರ್ಭ ಗುಡಿಯಲ್ಲಿ ವಿರಾಜಮಾನನಾದ ಪಂಚಮುಖಿ ಹನುಮನಿಗೆ ಪ್ರಾಣ ಪ್ರತಿಷ್ಠೆ ನಡೆಸಲಾಯಿತು. ದೇಗುಲಕ್ಕೆ ಗೋವನ್ನು ದೇಗುಲಕ್ಕೆ ಗೋವು ಕರೆತಂದು ಪೂಜೆ ಸಲ್ಲಿಸಲಾಯಿತು.

ಮಂತ್ರಘೋಷಗಳ ಮಧ್ಯೆ ಪಂಚಮುಖಿ ಹನುಮಾನ್ ದೇಗುಲ ಉದ್ಘಾಟನೆ ನಡೆದು ಗೋವಿನ ಪೂಜೆ ಜರುಗಿತು. ಬಾಗಲಕೋಟೆಯ ಮುಚಖಂಡಿ ಕ್ರಾಸ್ ಬಳಿ ಇರುವ ಪಂಚಮುಖಿ ಹನುಮಾನ್ ದೇಗುಲ ಇದಾಗಿದೆ.

ಇದನ್ನೂ ಓದಿ: Ram Mandir: ನಾನು ನಾಸ್ತಿಕನಲ್ಲ-ಆಸ್ತಿಕ; ಜೈ ಶ್ರೀರಾಮ್‌ ಘೋಷಣೆ ಕೂಗಿದ ಸಿಎಂ!


ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಂದ ರಾಮೋತ್ಸವ

ಸ್ಯಾಂಡಿಯಾಗೋ (ಅಮೆರಿಕ): ಅಮೆರಿಕದ ಸ್ಯಾಂಡಿಯಾಗೋದಲ್ಲಿ ವಾಸಿಸುತ್ತಿರುವ ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಮಣಕವಾಡ ಗ್ರಾಮದ ದಂಪತಿ ಮನೆಯಲ್ಲೇ ರಾಮನ ವಿಗ್ರಹ ಇಟ್ಟು ಪೂಜೆ ನೆರವೇರಿಸಿದ್ದಾರೆ.

ಅಮೆರಿಕದಲ್ಲಿ ವಾಸವಾಗಿರುವ ಸಾಫ್ಟ್‌ವೇರ್ ಎಂ ಜಿನಿಯರ್ ಶಶಿಧರ್ ಚಾಕಲಬ್ಬಿ ಮತ್ತು ಸಾನ್ವಿ ದಂಪತಿಯಿಂದ ಶ್ರೀರಾಮಪೂಜೆ ನಡೆಯಿತು. ಮನೆಯಲ್ಲಿ ಮಂಟಪ ಮಾಡಿ ಶ್ರೀರಾಮನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಬಳಿಕ ಅನಿವಾಸಿ ಭಾರತೀಯರು, ಸ್ನೇಹಿತರಿಗೆ ಅನ್ನಪ್ರಸಾದ ವಿತರಣೆ ಮಾಡಿದರು.

Exit mobile version