Site icon Vistara News

Rama Mandir : ಆ ಜೋಡಿಯ ಮದುವೆಗೆ ರಾಮನೇ ಸಾಕ್ಷಿ, ಕೈಯಲ್ಲೇ ಎರಡು ಕಿ.ಮೀ. ನಡೆದ ಯುವಕ!

Rama Mandir Marriage

ದಾವಣಗೆರೆ: ಸೋಮವಾರ ಇಡೀ ದೇಶಾದ್ಯಂತ ರಾಮ ಮಂದಿರದ್ದೇ (Rama Mandir) ಹವಾ. ಎಲ್ಲೆಲ್ಲರೂ ರಾಮ ಜಪ. ಹೀಗಾಗಿ ಬೇರೆ ಯಾವ ಕಾರ್ಯಕ್ರಮಕ್ಕೂ ಅವಕಾಶವೇ ಇಲ್ಲ! ಹೀಗಾಗಿ ಸೋಮವಾರ ನಡೆದ ಅನ್ಯ ಕಾರ್ಯಕ್ರಮಗಳಿಗೆ ಜನರ ಕೊರತೆ ಕಾಡಿತ್ತು. ಈ ನಡುವೆ, ಇಂದೇ ಮದುವೆ ಇಟ್ಟುಕೊಂಡಿದ್ದವರು (Lord Rama at Marriage hall) ಕೂಡಾ ಮದುವೆ ಮನೆಯಲ್ಲಿ ರಾಮ ನಾಮ ಜಪ ಮಾಡಬೇಕಾದ ಅನಿವಾರ್ಯತೆ.

ದಾವಣಗೆರೆ ನಗರದ ಬಾಪೂಜಿ ಕಲ್ಯಾಣ ಮಂಟಪದಲ್ಲಿ (Davanagere Bapuji Kalyana Mantap) ಒಂದು ಮದುವೆ ಆಯೋಜನೆಯಾಗಿತ್ತು. ರಾಮ ಮಂದಿರ ಉದ್ಘಾಟನೆಯ ದಿನವೇ ತಮ್ಮ ಮದುವೆಯಾಗುತ್ತಿರುವ ಬಗ್ಗೆ ಈ ನವಜೋಡಿ ಸಿಕ್ಕಾಪಟ್ಟೆ ಖುಷಿಯಾಗಿದ್ದರು. ಮತ್ತು ಈ ನೆನಪನ್ನು ಸದಾಕಾಲ ಉಳಿಸಿಕೊಳ್ಳುವುದಕ್ಕಾಗಿ ರಾಮನನ್ನೇ ಸಾಕ್ಷಿಯಾಗಿಟ್ಟು ಮದುವೆಯಾದರು.

ದಾವಣಗೆರೆಯ ರೋಹಿತ್, ಅರ್ಪಿತಾ ವಿವಾಹವಾದ ಜೋಡಿಗಳು. ಈ ಜೋಡಿ ಮದುವೆ ಮನೆಯಲ್ಲೇ ಶ್ರೀ ರಾಮನ ದೊಡ್ಡ ಕಟೌಟ್‌ ಇಟ್ಟಿದ್ದರು. ಮಾಂಗಲ್ಯಧಾರಣೆ ಬಳಿಕ ಶ್ರೀ ರಾಮನ ಆಶೀರ್ವಾದ ಪಡೆದರು. ರಾಮನ ಕಟೌಟ್ ಪುಷ್ಪ ನಮನ ಸಲ್ಲಿಸಿದರು. ಜೈ ಶ್ರೀ ರಾಮ ಎಂದು ಘೋಷಣೆ ಕೂಗಿ ಸಂಭ್ರಮಿಸಲಾಯಿತು.

ಎರಡು ಕಿ.ಮೀ. ಕೈಯಲ್ಲೇ ನಡೆದ ಯುವಕ

ಶಿವಮೊಗ್ಗ : ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸಾಗರದ ಯುವಕನೊಬ್ಬ ಎರಡು ಕಿಮೀ ಕೈಯಲ್ಲೇ ನಡೆದು ಹರಕೆ ತೀರಿಸಿದ್ದಾನೆ.

ರಾಮ ಜನ್ಮಭೂಮಿಗೆ ಪಾದಯಾತ್ರೆ ಮೂಲಕ ಹೋಗುವ ಆಸೆ ಇಟ್ಟುಕೊಂಡಿದ್ದ ಸಾಗರದ ಪ್ರಭು ಎಂಬವರಿಗೆ ಕಾರಣಾಂತರಗಳಿಂದ ಪಾದಯಾತ್ರೆ ಮಾಡಲು ಆಗಲಿಲ್ಲ. ಹಾಗಾಗಿ ಅವರು ಸೋಮವಾರ ಸುಮಾರು 2 ಕಿ.ಮೀ ಕೈ ನಡಿಗೆ ಮೂಲಕ ಸೇವೆ ಸಲ್ಲಿಸಿದರು.

ಇದನ್ನೂ ಓದಿ: Rama Mandir : ತಾವೇ ಕಟ್ಟಿದ ರಾಮ ದೇಗುಲದಲ್ಲಿ ಕೆ.ಎನ್‌. ರಾಜಣ್ಣ ಪೂಜೆ; ನನ್ನ ರಾಮ ಮೋದಿ ರಾಮನಲ್ಲ!

ಸಾಗರದ ರಾಮನಗರದಿಂದ ನಗರೇಶ್ವರ ದೇವಸ್ಥಾನ ತನಕ ಕೈಯಲ್ಲೇ ಡನೆದ ಅವರಿಗೆ ಸ್ಥಳೀಯ ಹಿಂದೂ ಮುಖಂಡರು ಸಾಥ್‌ ನೀಡಿದರು. ರಸ್ತೆಯ ಉದ್ದಕ್ಕೂ ಜೈ ಶ್ರೀರಾಮ್‌ ಘೋಷಣೆ ಕೂಗಲಾಯಿತು.

Exit mobile version