ರಾಯಚೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ (Rama janmabhumi) ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆ (Rama Mandir Ayodhya) ನಡೆಯುತ್ತಿರುವ ನಡುವೆಯೇ ಇತ್ತ ಶ್ರೀ ಗುರು ರಾಘವೇಂದ್ರರ ಪುಣ್ಯಭೂಮಿಯಾಗಿರುವ ಮಂತ್ರಾಲಯದಲ್ಲಿ (Sri Kshetra Mantralaya) ರಾಮನ ಭವ್ಯ ಶೋಭಾ ಯಾತ್ರೆ (Shobha yatra) ನಡೆದಿದೆ. ಅಚ್ಚರಿ ಎಂದರೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಡಾ.ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ನಡೆಯುತ್ತಿರುವ ಈ ಶೋಭಾಯಾತ್ರೆಗೆ ಚಾಲನೆ ನೀಡಿದ್ದು ಒಬ್ಬ ಮುಸ್ಲಿಂ ವ್ಯಕ್ತಿ (Muslim Man inaugurates Shobhayatra). ಈ ಮೂಲಕ ಶ್ರೀಗಳು ಮಂತ್ರಾಲಯದ ಸೌಹಾರ್ದ ಪರಂಪರೆಯನ್ನು ಮುಂದುವರಿಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಮಂತ್ರಾಲಯ ಮಠದಲ್ಲಿ ಸಂಭ್ರಮ ಕಳೆ ಕಟ್ಟಿದೆ. ಮಂತ್ರಾಲಯ ರಾಜಬೀದಿಗಳಲ್ಲಿ ಶ್ರೀರಾಮನ ಭವ್ಯ ಮೆರವಣಿಗೆ ನಡೆದಿದ್ದು ಶ್ರೀಗಳು ಮಠದ ಆವರಣದಲ್ಲಿ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಆ ಬಳಿಕ ಮುಸಲ್ಮಾನ ಬಾಂಧವರು ಕೇಸರಿ ಧ್ವಜ ಹಿಡಿದು ಶೋಭಾಯಾತ್ರೆಗೆ ಚಾಲನೆ ಕೊಟ್ಟರು.
ಮಂತ್ರಾಲಯದಲ್ಲೂ ಶ್ರೀ ರಾಮ ಮೂರ್ತಿ ಪ್ರತಿಷ್ಠಾಪನೆ
ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಜತೆಗೆ ಇತ್ತ ಮಂತ್ರಾಲಯದಲ್ಲೂ 36 ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿ ಸ್ಥಾಪನೆಗೆ ನಿರ್ಧರಿಸಲಾಗಿದೆ.. ನಿಜವೆಂದರೆ, ಶ್ರೀರಾಮನಿಗೂ ಮಂತ್ರಾಲಯಕ್ಕೂ ನಂಟು ಇದೆ. ಇಲ್ಲಿ ರಾಯರಿಗಿಂತಲೂ ಮೊದಲು ಪ್ರಭು ಶ್ರೀರಾಮಚಂದ್ರನಿಗೆ ಪೂಜೆ ನಡೆಯುತ್ತದೆ. ಹಾಗಾಗಿ ಮಂತ್ರಾಲಯದಲ್ಲಿ ಅಭಯ ಶ್ರೀರಾಮನ ಮೂರ್ತಿ ಸ್ಥಾಪನೆಗೆ ಶ್ರೀಗಳು ನಿರ್ಧರಿಸಿದ್ದರು.
7 ಜನ ಭಕ್ತರಿಂದ ಟ್ರಸ್ಟ್ ನಿರ್ಮಿಸಿ, ರಾಮನ ಪ್ರತಿಷ್ಟಾಪನೆ ನಿರ್ಧಾರ ಮಾಡಿದ ಶ್ರೀಗಳು ರಾಮ ಭಂಟ ಹನುಮನ ಎದುರೇ ನೆಲೆಗೊಂಡ ಪ್ರಭು ಶ್ರೀರಾಮನ ಮೂರ್ತಿ ಸ್ಥಾಪಿಸಲಿದ್ದಾರೆ.
ಇದನ್ನೂ ಓದಿ: Rama Mandir : ಧೈರ್ಯವಾಗಿ ಶುಭಾಶಯ ಕೋರಿದ ಡಿಕೆಶಿ, ಹೆಬ್ಬಾಳ್ಕರ್; ಸಿದ್ದರಾಮಯ್ಯ ಮೌನ!
ಸೋಮವಾರ ಮಂತ್ರಾಲಯದ ರಾಜಬೀದಿಗಳಲ್ಲಿ ಶ್ರೀರಾಮನ ಶೋಭಾ ಯಾತ್ರೆ ನಡೆದು ಅಂತಿಮವಾಗಿ ಅಭಯ ಶ್ರೀರಾಮನ ಪಾದಗಳಿಗೆ ಶ್ರೀಗಳಿಂದ ಫಲ ಪುಷ್ಪ ಸಮರ್ಪಣೆ ಮಾಡಲಾಯಿತು. ಆ ಮೂಲಕ ಸಾಂಕೇತಿಕವಾಗಿ ವಿಗ್ರಹ ಸ್ಥಾಪನೆ ಮಾಡಲಾಯಿತು.
ಶೋಭಾ ಯಾತ್ರೆಯ ಹಿನ್ನೆಲೆಯಲ್ಲಿ ರಾಯರ ಮಠ ಸಂಪೂರ್ಣವಾಗಿ ಕೇಸರಿಮಯವಾಗಿದೆ. ರಾಯರ ಭಕ್ತರು.
ಡಾ. ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಶೋಭಾ ಯಾತ್ರೆ ನಡೆಯಿತು. ಶ್ರೀರಾಮ, ಸೀತೆ, ಲಕ್ಷ್ಮಣ, ಆಂಜನೇಯನ ವೇಷಧಾರಿಗಳು ಸಂಭ್ರಮಿಸಿದರು. ಶ್ರೀರಾಮ ಚಂದ್ರನ ಡಿಜೆ ಹಾಡಿಗೆ ಭಕ್ತರು ಹೆಜ್ಜೆ ಹಾಕಿದರು.