ಚಿಕ್ಕಮಗಳೂರು: ದೇಶದ 16 ರಾಜ್ಯಗಳಲ್ಲಿ ರಾಮೋತ್ಸವದ (Ayodhya Rama Mandir) ಪ್ರಯುಕ್ತ ಸೋಮವಾರ (ಜನವರಿ 22) ಸರ್ಕಾರಿ ರಜೆ (Government Holiday) ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರ ಕೂಡಾ ಅರ್ಧ ದಿನ ರಜೆ ಕೊಟ್ಟಿದ್ದು, ಮಧ್ಯಾಹ್ನದ ನಂತರ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಸಾಕಷ್ಟು ಒತ್ತಡ, ಮನವಿಯ ಬಳಿಕವೂ ಸರ್ಕಾರ ರಜೆ ಘೋಷಣೆ ಮಾಡಿಲ್ಲ. ಇದು ರಾಜ್ಯದಲ್ಲಿ ರಾಮ ಭಕ್ತರ ಬೇಸರಕ್ಕೆ ಕಾರಣವಾಗಿದೆ.
ಈ ನಡುವೆ ಕೆಲವು ಕಡೆ ರಜೆ ನೀಡದಿರು ವಿಚಾರದಲ್ಲಿ ಪ್ರತಿಭಟನೆಯೂ ನಡೆದಿದೆ. ಚಿಕ್ಕಮಗಳೂರು ನಗರದ (Chikkamagaluru News) ಎಐಟಿ ಕಾಲೇಜಿನಲ್ಲಿ ರಜೆ ನೀಡಿಲ್ಲ ಎಂದು ಆಕ್ಷೇಪಿಸಿ ರಜೆ ನೀಡದ ಕಾಲೇಜು ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಸೋಮವಾರ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಕಾಲೇಜು ಗೇಟ್ ಬಳಿಯೇ ನಿಂತು ಜೈ ಶ್ರೀರಾಮ ಘೋಷಣೆ ಕೂಗಿದರು. ಜತೆಗೆ ರಜೆ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದರು. ಕಾಲೇಜಿನ ಆಡಳಿತ ಮಂಡಳಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯ ಪ್ರತಿ ಬಡಾವಣೆಗಳಲ್ಲೂ ಪ್ರಸಾದ ವಿತರಣೆ
ಬೆಳಗಾವಿ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬೆಳಗಾವಿ ನಗರದ ಪ್ರತಿ ಬಡಾವಣೆಗಳಲ್ಲೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಬೆಳಗಿನ ಉಪಾಹಾರಕ್ಕೆ ಜಿಲೆಬಿ, 56 ಪದಾರ್ಥಗಳಿಂದ ತಯಾರಿಸಿದ ಬೋಗ ಡೋಕಲಾ, ಸಮೋಸಾ ವಿತರಣೆ ನಡೆದರೆ, ಮಧ್ಯಾಹ್ನ ಪೂರಿ ಊಟ, ಸಂಜೆ ಹೊಳಿಗೆ ಊಟದ ಕಾರ್ಯಕ್ರಮವಿದೆ.
ಏಕತಾ ಯುವಕ ಮಂಡಳದ ವತಿಯಿಂದ ಈ ಪ್ರಸಾದ ವಿತರಣೆ ನಡೆಯಲಿದ್ದು, ಬೆಳಗಾವಿ ಹೆಮು ಕಲಾಣಿ ಚೌಕ್ ನಲ್ಲಿ ಅಡುಗೆ ಸಿದ್ಧವಾಗುತ್ತಿದೆ. ಇಲ್ಲಿ ಪ್ರಾಣ ಪ್ರತಿಷ್ಠೆಯ ಲೈವ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅದನ್ನು ವೀಕ್ಷಿಸಲು ಬರುವ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಮಾತಲಾಡಿದೆ.
ಇದನ್ನೂ ಓದಿ : Rama Mandir : ಮಂದಿರ ಉದ್ಘಾಟನೆ ದಿನ ರಜೆ ಹಾಕಿದ್ರೆ 1000 ರೂ. ದಂಡ; ಮಕ್ಕಳಿಗೆ ಕ್ರಿಶ್ಚಿಯನ್ ಶಾಲೆ ಫತ್ವಾ!
ಹುಬ್ಬಳ್ಳಿಯಲ್ಲಿ ಭಕ್ತರಿಗೆ ಸಹಸ್ರಾರು ಲಾಡು ವಿತರಣೆ
ಹುಬ್ಬಳ್ಳಿಯಲ್ಲಿ ರಾಮೋತ್ಸವ ಸಂಭ್ರಮ ಮುಗಿಲು ಮುಟ್ಟಿದೆ. ಇಲ್ಲಿನ ವಿಕ್ಟೊರಿಯಾ ರಸ್ತೆಯ ದೊಂಗಡಿ ಕುಟುಂಬ ಅದ್ದೂರಿಯಾಗಿ ರಾಮೋತ್ಸವ ಆಚರಣೆ ನಡೆಯುತ್ತಿದ್ದು, ಎಲ್ಲರಿಗೂ ಲಾಡು ವಿತರಣೆಯ ಮೂಲಕ ಸಂಭ್ರಮ ಆಚರಿಸುತ್ತಿದೆ. ಸುಮಾರು 8 ಸಾವಿರ ಲಾಡು ಸಿದ್ಧಪಡಿಸಲಾಗಿದೆ. ಏಕ್ತಾ ಯುವಕ ಮಂಡಳವು ಸುಮಾರು ೧೨ ಸಾವಿರ ಭಕ್ತರಿಗೆ ಊಟದ ವ್ಯವಸ್ಥೆ ಮಾಡಿದೆ.