Site icon Vistara News

Ramalinga Reddy : ಬಿಜೆಪಿಯವರೇ ವೇಷ ಬದಲಿಸಿ ಗಲಭೆ ಸೃಷ್ಟಿಸ್ತಾರೆ; ರಾಮಲಿಂಗಾ ರೆಡ್ಡಿ ವಿವಾದಾತ್ಮಕ ಹೇಳಿಕೆ

Ramalingareddy BJP Statement

ಬೆಂಗಳೂರು: ʻʻಬಿಜೆಪಿಯವರು ಅಧಿಕಾರದಲ್ಲಿ ಇಲ್ಲದಾಗ ಕಿತಾಪತಿ ಮಾಡುವುದು, ಕಿತ್ತಾಟ ತಂದಿಡುವ ಕೆಲಸ ಮಾಡ್ತಾರೆ. ಬಿಜೆಪಿ ಕಾರ್ಯಕರ್ತರೇ (BJP Activists) ವೇಷ ಬದಲಿಸಿಕೊಂಡು ಹೆಸರು ಬದಲಿಸಿಕೊಂಡು ಕಿಡಿಗೇಡಿತನ (Changing dress, Names and do mischiefs) ಮಾಡುವುದು ಸಾಮಾನ್ಯʼʼ- ಹೀಗೊಂದು ವಿವಾದಾತ್ಮಕ ಮಾತು (Controversial Statement) ಆಡಿದ್ದಾರೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy).

ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ದಾರಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ʻʻಕೋಮು ಗಲಭೆ ಮಾಡಿಸುವುದು, ಜಗಳ ಮಾಡಿಸುವುದು ಬಿಜೆಪಿಯವರಿಗೆ ಅಭ್ಯಾಸವಾಗಿ ಹೋಗಿದೆʼʼ ಎಂದರು.

ʻʻಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುವ ಕೆಲಸವನ್ನು ಮೊದಲಿನಿಂದಲೂ ಮಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಪೊಲೀಸ್ ನೈತಿಕಗಿರಿ, ಗಲಾಟೆ ಮಾಡುವುದು‌, ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ಅವರ ಹುಟ್ಟುಗುಣ. ರಕ್ತದಲ್ಲೇ ಅವರಿಗೆ ಇದೆಲ್ಲ ಬಂದು ಬಿಟ್ಟಿದೆʼʼ ಎಂದು ಹೇಳಿದರು.

ಮಂಗಳೂರಿನಲ್ಲಿ ಉಲ್ಟಾ ಹೊಡೆದ ರಾಮಲಿಂಗಾರೆಡ್ಡಿ!

ಬೆಂಗಳೂರು ವಿಮಾನದಲ್ಲಿ ರಾಮಲಿಂಗಾ ರೆಡ್ಡಿ ಅವರು ಹೇಳಿಕೆ ನೀಡಿ ಅವರು ಮಂಗಳೂರು ತಲುಪುವ ಹೊತ್ತಿಗೆ ಅವರ ಹೇಳಿಕೆ ಭಾರಿ ವಿವಾದವನ್ನೇ ಸೃಷ್ಟಿಸಿಬಿಟ್ಟಿತ್ತು. ಹಲವಾರು ಬಿಜೆಪಿ ನಾಯಕರು ಅವರ ವಿರುದ್ಧ ಸಿಡಿದೆದ್ದಿದ್ದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಚಿವರು, ನಾನು ಶಿವಮೊಗ್ಗದ ವಿಚಾರವನ್ನು ಉಲ್ಲೇಖಿಸಿ ಈ ಮಾತು ಹೇಳಿಲ್ಲ. ಬಿಜೆಪಿಯವರು ಜನರಲ್ ಆಗಿ ಯಾವ ರೀತಿ ಮಾಡ್ತಾರೆ ಅಂತ ಹೇಳಿದ್ದೆ ಅಷ್ಟೇ ಎಂದರು.

ಶಿವಮೊಗ್ಗದಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ಆಗಲಿ, ಆಗುತ್ತದೆ. ಶಿವಮೊಗ್ಗ ಘಟನೆಯಲ್ಲಿ ಯಾರೇ ತಪ್ಪು ಮಾಡಿದ್ರೂ‌ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ ಅವರು, ನಾನು ಬಿಜೆಪಿಯವರು ವೇಷ ಮರೆಸಿಕೊಂಡು ಇಂಥ ಕೃತ್ಯಗಳನ್ನು ಮಾಡುತ್ತಾರೆ ಅಂತ ಹೇಳಿದ್ದು ಹಳೆಯ ಘಟನೆಗಳ ಬಗ್ಗೆ ಎಂದರು ಸ್ಪಷ್ಟನೆ ನೀಡಿದರು.

ʻʻಬಿಜೆಪಿಯವರು ವೇಷ ಮರೆಸಿಕೊಂಡು, ಹೆಸರು ಬದಲಿಸಿಕೊಂಡು ಇಂಥ ಕೃತ್ಯಗಳನ್ನು ಮಾಡುತ್ತಾರೆ ಎಂದು ನಾನು ಹೇಳಿದ್ದು ಹಳೆಯ ಘಟನೆಗಳ ಬಗ್ಗೆ. ಶಿವಮೊಗ್ಗ ಘಟನೆಗೂ ಮತ್ತು ನನ್ನ ಹೇಳಿಕೆಗೂ ಯಾವುದೇ ಸಂಬಂಧ ಇಲ್ಲʼʼ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ :Shivamogga violence : ಕೋಲಾರ, ಶಿವಮೊಗ್ಗ ಟೆಸ್ಟಿಂಗ್‌ ಡೋಸ್‌; ಪಿಕ್ಚರ್‌ ಅಭೀ ಬಾಕಿ ಹೈ ಎಂದ ಸಿ.ಟಿ ರವಿ

ಕೇಸ್‌ ವಾಪಸ್‌ ಬೇಡಿಕೆ ಸಮರ್ಥನೆ ಮಾಡಿದ ರೆಡ್ಡಿ

ʻʻಕಾನೂನಿನಿಗಿಂತ ದೊಡ್ಡವರು ಯಾರೂ ಇಲ್ಲ, ತಪ್ಲು ಮಾಡಿದವ್ರ ಮೇಲೆ ಕ್ರಮ ಆಗಲಿ. ಹಿಂದೆ ಪುಲಿಕೇಶಿ ನಗರ ಗಲಾಟೆಯಲ್ಲೂ ನಾನು ಅದೇ ಹೇಳಿದ್ದೆ. ನಾನು ಗೃಹಮಂತ್ರಿ ಆಗಿದ್ದವನು, ನನಗೆ ಕಾನೂನು ಗೊತ್ತಿಲ್ವಾ?ʼʼ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ʻʻರೈತರು, ಕನ್ನಡಪರ ಹೋರಾಟಗಾರರು ಹಾಗೂ ಸಾರ್ವಜನಿಕ ಹಿತಾಸಕ್ತಿ ಹೋರಾಟಗಾರರ ಕೇಸ್ ವಾಪಾಸ್ ಪಡೆಯುತ್ತೇವೆ. ಆಸ್ತಿ ಪಾಸ್ತಿ ನಷ್ಟ ಆಗಿರಬಾರದು, ಪೊಲೀಸರ ಮೇಲೆ ಹಲ್ಲೆ ಆಗದ ಕೇಸ್ ಗಳನ್ನು ಮಾತ್ರ ನಾವು ವಾಪಸ್ ಪಡೆಯಲು ಶಿಫಾರಸ್ಸು ಮಾಡ್ತೇವೆ. ಅದು ಬಿಟ್ಟರೆ ಕೋಮು ಗಲಭೆ ಕೇಸ್‌ಗಳಲ್ಲಿ ಶಿಫಾರಸ್ಸು ಮಾಡುವುದಿಲ್ಲʼʼ ಎಂದು ಹೇಳಿದರು.

ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಹೇಳಿಕೆಗೆ ತಿರುಗೇಟು ನೀಡಿದ ರಾಮ ಲಿಂಗಾ ರೆಡ್ಡಿ ಅವರು, ʻʻನನಗೆ ತಾಕತ್ತಿದ್ಯೋ ಇಲ್ವೋ ಅಂಥ ಅವನಿಗೆ ಏನ್ ಗೊತ್ತು? ನನಗೆ ಏಕವಚನದಲ್ಲಿ ಬೈಯ್ಯೋಕೆ ಗೊತ್ತಿಲ್ಬಾ? ಆದ್ರೆ ನಾನು ಬೈಯ್ಯೋಕೆ ಆಗಲ್ಲ ಮಾತಿನ ಗೌರವ, ರೀತಿ ವಿಧಾನ ಗೊತ್ತಿಲ್ಲಾಂದ್ರೆ ನಾನು ಹಾಗೆ ಮಾಡಲು ಆಗಲ್ಲ. ಅವರ ಮಟ್ಟಕ್ಕೆ ನಾವು ಇಳಿಯೋಕೆ ಆಗಲ್ಲʼʼ ಎಂದರು.

Exit mobile version