ರಾಮನಗರ: ಮಂಜನಬೆಲೆ ಜಲಾಶಯದಿಂದ ಸುಮಾರು 12 ಸಾವಿರ ಕ್ಯುಸೆಕ್ ನೀರು (Rain News) ಹೊರಬಿಡಲಾಗಿದೆ ಎಂಬ ಸುದ್ದಿ ಆತಂಕ ಸೃಷ್ಟಿಸಿದ ಬೆನ್ನಲ್ಲೇ ರಾಮನಗರ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. “ಜಲಾಶಯದಿಂದ 12 ಸಾವಿರ ಕ್ಯುಸೆಕ್ ಅಲ್ಲ, ಕೇವಲ 5 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
“ನಾನು ಜಿಲ್ಲಾಧಿಕಾರಿಯಾಗಿ ನಿಮಗೆ ಹೇಳುತ್ತಿದ್ದೇನೆ. ಯಾರೂ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. 12 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ ಎಂಬುದು ಸುಳ್ಳು ಸುದ್ದಿ. 6 ಸಾವಿರ ಕ್ಯುಸೆಕ್‌ಗಿಂತ ಅಧಿಕ ನೀರು ಬಿಡುಗಡೆ ಮಾಡಿದರೆ ಮಾತ್ರ ರಾಮನಗರದ 17ನೇ ವಾರ್ಡ್‌ನ ಜನರಿಗೆ ತೊಂದರೆಯಾಗುತ್ತದೆ. ಆದರೆ, ಅಷ್ಟು ಪ್ರಮಾಣದಲ್ಲಿ ನೀರು ಬಿಟ್ಟಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಮಂಚನಬೆಲೆ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟರೆ ಅರ್ಕಾವತಿಯ ಹರಿವು ಹೆಚ್ಚಾಗುತ್ತದೆ. ಅರ್ಕಾವತಿಯು ರಾಮನಗರದ ಮೂಲಕ ಹಾದುಹೋಗುವುದರಿಂದ ನದಿ ತೀರದ 17ನೇ ವಾರ್ಡ್‌ನ ಜನರಿಗೆ ತೊಂದರೆಯಾಗುತ್ತದೆ. ಹಾಗಾಗಿ, ಮಂಚನಬೆಲೆಯಿಂದ 12 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ ಎಂಬ ವದಂತಿ ಹರಡಿದ ಕಾರಣ ಜನ ಆತಂಕಕ್ಕೀಡಾಗಿದ್ದರು.
ಇದನ್ನೂ ಓದಿ | Leopard Attack | ರಾಮನಗರದಲ್ಲಿ ಚಿರತೆ ದಾಳಿಯಿಂದ ಯುವಕನಿಗೆ ಗಾಯ