Site icon Vistara News

Leopard Attack: ಚನ್ನಪಟ್ಟಣದಲ್ಲಿ ಬಾಲಕನ ಮೇಲೆ ಚಿರತೆ ದಾಳಿ

Leopard Attack

ರಾಮನಗರ: ಚನ್ನಪಟ್ಟಣದಲ್ಲಿ ಬಾಲಕನೊಬ್ಬನ ಮೇಲೆ ಚಿರತೆ ದಾಳಿ ಮಾಡಿದ್ದು, ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಚನ್ನಪಟ್ಟಣ ತಾಲೂಕಿನ ಚಿಕ್ಕಬೋರೇಗೌಡನ ದೊಡ್ಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗೌತಮ್ (14) ಚಿರತೆ ದಾಳಿಗೆ ಒಳಗಾದ ಬಾಲಕ. ನಿನ್ನೆ ಸಂಜೆ ಗದ್ದೆ ಬಳಿ ತೆರಳಿದಾಗ ಬಾಲಕನ ಮೇಲೆ ಚಿರತೆ ಏಕಾಏಕಿ ಎಗರಿದ್ದು, ಬಾಲಕನ 2 ಕಿವಿಗಳ ಭಾಗದಲ್ಲಿ ಕಿತ್ತಿದೆ. ಚನ್ನಪಟ್ಟಣ ತಾಲೂಕು ಆಸ್ಪತ್ರೆಗೆ ಬಾಲಕನನ್ನು ದಾಖಲು ಮಾಡಲಾಗಿದೆ.

ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಚಿರತೆ- ಮಾನವ ಮುಖಾಮುಖಿ ಹೆಚ್ಚಿದೆ.

ಇದನ್ನೂ ಓದಿ: Leopard Attack: ನಾಯಿ ಎಳೆದೊಯ್ದು ತಿಂದು ಹಾಕಿರುವ ಚಿರತೆ; ಬೆಂಗಳೂರಿನಲ್ಲಿ ಮತ್ತೆ ಆತಂಕ

Exit mobile version