ರಾಮನಗರ: ಅರ್ಕಾವತಿ ನದಿಯ ನೀರಿನಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ.
ರಾಮನಗರ ತಾಲೂಕಿನ ಕೂನ್ಗಲ್ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದೆ. ಕೂನ್ಗಲ್ ಹಾಗೂ ಕೆ.ಪಿ ದೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಬಳಿ ಹೆಚ್ಚು ನೀರು ಹರಿಯುತ್ತಿರುವ ಕಾರಣ, ಆಳದ ಅರಿವಿಲ್ಲದೆ ನೀರಿಗಿಳಿದ ಗ್ರಾಮದ ನಿವಾಸಿ ನಸರುಲ್ಲಾ ಎಂಬವರು ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ | Accident | ಅಪಘಾತದಲ್ಲಿ ಬೈಕ್ ಸವಾರ ಸಾವು, ಗುದ್ದಿ ಪರಾರಿಯಾದ ಕಾರು ಚಾಲಕ