ರಾಮನಗರ: ಜಿಲ್ಲೆಯಲ್ಲಿ ಮಳೆಯ (Rain News) ಅವಾಂತರ ಹೆಚ್ಚಾಗಿದ್ದು, ಅರ್ಕಾವತಿ ನದಿಯ ರಭಸಕ್ಕೆ ಹರಿಸಂದ್ರ ಸೇತುವೆ ಗುರುವಾರ ಕೊಚ್ಚಿ ಹೋಗಿದೆ. ಇದರಿಂದಾಗಿ ರಾಮನಗರ ತಾಲೂಕಿನ ಸಂಗಬಸಪ್ಪನದೊಡ್ಡಿ-ಮಾದಾಪುರ ಹಾಗೂ ಹರಿಸಂದ್ರ ರಸ್ತೆ ಸಂಪರ್ಕ ಕಡಿತಗೊಂಡಿದೆ.
ದಶಪಥ ಹೆದ್ದಾರಿ ಮೈಸೂರು-ಬೆಂಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಜನರು ಸುಮಾರು 10ರಿಂದ 17 ಕಿ.ಮೀ ಸುತ್ತಿ ಬಳಸಿ ಶಾಲೆ, ಕೆಲಸಕ್ಕೆ ಹಾಗೂ ಹೆದ್ದಾರಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳ ಹಿಂದೆ ಸುಗ್ಗನಹಳ್ಳಿ ಸೇತುವೆ ಸಹ ಕುಸಿದಿತ್ತು ಎನ್ನಲಾಗಿದೆ. ಸುಗ್ಗನಹಳ್ಳಿಯಿಂದ ಕೇವಲ ಮೂರ್ನಾಲ್ಕು ಕಿ.ಮೀ ದೂರಲ್ಲಿ ಮತ್ತೊಂದು ಸೇತುವೆ ಕುಸಿದಿದೆ.
ಮಂಚನಬೆಲೆ ಜಲಾಶಯದಿಂದ ಅತಿ ಹೆಚ್ಚು ನೀರು ಹೊರಬಿಟ್ಟಿರುವ ಪರಿಣಾಮ ಅರ್ಕಾವತಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.
ಇದನ್ನೂ ಓದಿ | Rain News| ಮಳೆಯಿಂದ ಸಾಂಕ್ರಾಮಿಕ ರೋಗಗಳ ಭೀತಿ, ಮುನ್ನೆಚ್ಚರಿಕೆ ವಹಿಸಲು ಆಸ್ಪತ್ರೆಗಳಿಗೆ ಸೂಚನೆ