ರಾಮನಗರ: ತಾಯಿ ಕಳೆದುಕೊಂಡು ನಿತ್ರಾಣಗೊಂಡ ಆನೆಮರಿಗೆ ಗ್ರಾಮಸ್ಥರು ಶುಕ್ರವಾರ (ಸೆ.9) ಆಶ್ರಯ ನೀಡಿ ಆರೈಕೆ ಮಾಡಿದ್ದು, ಮಾನವೀಯತೆ ಮೆರೆದಿದ್ದಾರೆ. ಕಂದಕಕ್ಕೆ ತಾಯಿ ಆನೆ ಬಿದ್ದು ಸಾವಿಗೀಡಾಗಿದ್ದು, ಪಟಾಣಿ ಆನೆ ಅನಾಥವಾಗಿತ್ತು. ತಾಯಿ ಇಲ್ಲದೆ ಏಕಾಂಗಿಯಾಗಿ ಆಹಾರಕ್ಕಾಗಿ ಅರಸುತ್ತಾ ಹಸುಗಳೊಂದಿಗೆ ಊರಿಗೆ ಬಂದಿದೆ.
ಕನಕಪುರ ತಾಲೂಕಿನ ಕಾವೇರಿ ವನ್ಯಜೀವಿಧಾಮದ ಕುದುರೆದಾರಿಯಲ್ಲಿ ತಾಯಿ ಆನೆ ಸಾವಿಗೀಡಾಗಿದೆ. ತಾಯಿ ಇಲ್ಲದ ಒಂದು ತಿಂಗಳ ಆನೆಮರಿ ಎರಡ್ಮೂರು ದಿನಗಳ ಕಾಲ ಮಳೆ, ಚಳಿಯಲ್ಲಿಯೇ ಅಮ್ಮನಿಗಾಗಿ ಕಣ್ಣೀರು ಸುರಿಸಿತ್ತು. ಬಳಿಕ ಹಾಗೇ ಅಲ್ಲಿಂದ ಅಲೆಯುತ್ತಾ ಕಾಡುಗಳನ್ನು ಸುತ್ತಿದೆ. ಆಗ ದಾರಿಯಲ್ಲಿ ಸಿಕ್ಕ ಹಸುಗಳೊಂದಿಗೆ ಗ್ರಾಮಕ್ಕೆ ಬಂದಿದೆ.
ಆನೆ ಮರಿಯನ್ನು ನೋಡಿದ ಗ್ರಾಮಸ್ಥರು ತಕ್ಷಣವೇ ಅದಕ್ಕೆ ಆರೈಕೆ ಮಾಡಿದ್ದು, ಬೇಕಾದ ಆಹಾರವನ್ನು ನೀಡಿದ್ದಾರೆ. ಪುಟ್ಟ ಮಕ್ಕಳು ಅದರೊಂದಿಗೆ ಆಟ ಆಡಿ ಖುಷಿಪಟ್ಟಿದ್ದಾರೆ. ಬಳಿಕ ಗ್ರಾಮಸ್ಥರು ವಿಷಯವನ್ನು ಅರಣ್ಯ ಇಲಾಖೆಗೆ ಮುಟ್ಟಿಸಿದ್ದಾರೆ. ಇದಾದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ತಾಯಿ ಆನೆಗಾಗಿ ಹುಡುಕಾಟ ನಡೆಸಿದ್ದಾರೆ. ಆಗ ತಾಯಿ ಆನೆ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ | Chamarajanagar News | ತಾಯಿಯಿಂದ ಬೇರ್ಪಟ್ಟು ಪುರಾಣಿಪೋಡಿ ಶಾಲೆಗೆ ಬಂದ ಪುಟಾಣಿ ಆನೆ!
ಇತ್ತ ಮರಿಯಾನೆ ಅನಾಥವಾಗಿದ್ದು, ಕಾಡಿಗೆ ಮೇಯಲು ಹೋಗಿದ್ದ ಹಸುಗಳ ಜತೆ ಸೋಲಿಗೆರೆ ಗ್ರಾಮದ ಸಮೀಪದಲ್ಲಿನ ಕೊಂಡನಗುಂದಿಗೆ ಬಂದಿದೆ. ಅರಣ್ಯ ಇಲಾಖೆ ಜತೆಗೂಡಿ ಮೂರು ದಿನಗಳಿಂದ ಮರಿ ಆನೆಗೆ ಗ್ರಾಮಸ್ಥರು ಆರೈಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ | ಮಹಾರಾಷ್ಟ್ರದಿಂದ ರಕ್ಷಣೆ ಮಾಡಿ ತರಲಾಗಿದ್ದ ಸುಂದರ್ ಆನೆ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಾವು