ಚಿಕ್ಕೋಡಿ: ಶಕುನಿ ಕೆಲಸ ಮಾಡಿ ಬಿ.ಎಸ್.ಯಡಿಯೂರಪ್ಪ (B S Yediyurappa) ಮಾಜಿ ಸಿಎಂ ಆಗುವುದಕ್ಕೆ ಲಕ್ಷ್ಮಣ್ ಸವದಿಯೇ (Laxman Sangappa Savadi) ಕಾರಣ. ಹೈಕಮಾಂಡ್‌ಗೆ ಸುಳ್ಳು ಹೇಳಿ ಸಿಎಂ ಸ್ಥಾನದಿಂದ (Karnataka Election) ಇಳಿಸಿ ಯಡಿಯೂರಪ್ಪಗೆ ಸಾಕಷ್ಟು ಕಷ್ಟ ನೀಡಿದ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಆರೋಪಿಸಿದ್ದಾರೆ.
ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪ್ರಚಾರ ನಡೆಸಿದ ಅವರು, ಸುಳ್ಳು ಹೇಳುವುದಕ್ಕೆ ಸವದಿ ನಿಪುಣ. ಪಾರ್ಟಿ ಬಿಡುವ ಸಮಯದಲ್ಲಿ ಎಲ್ಲಾ ಸುಳ್ಳು ಹೇಳಿದ. ಶ್ರೀಮಂತ ಪಾಟೀಲ್ ಅವರು ಯಾವತ್ತೂ ಸವದಿಯನ್ನು ಬೈಯ್ಯುತ್ತಿರುತ್ತಾರೆ. ಈ ಚುನಾವಣೆ ಮುಗಿದ ಕೂಡಲೇ ಡಿಸಿಸಿ ಬ್ಯಾಂಕ್‌ನಿಂದ ಸವದಿಯನ್ನು ಕೆಳಗೆ ಇಳಿಸುತ್ತೇನೆ. ಬ್ಯಾಂಕ್‌ನಲ್ಲಿ ಎಲ್ಲಾ ಸದಸ್ಯರು ನಮ್ಮವರೇ ಇದ್ದಾರೆ. ಎಲ್ಲರಿಂದ ರಾಜೀನಾಮೆ ಕೊಡಿಸಿ ಮತ್ತೊಮ್ಮೆ ಚುನಾವಣೆ ಮಾಡಲಾಗುವುದು. ಆಗ ಸವದಿ ಹೇಗೆ ಗೆದ್ದು ಬರುತ್ತಾನೋ ನೋಡುತ್ತೇವೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಮಾತನಾಡಿ, ನಿಮ್ಮ ಉಪಕಾರ ನಮ್ಮ ಮೇಲಿಲ್ಲ ಎಂದು ನಾವು ಘಂಟಾಘೋಷವಾಗಿ ಹೇಳಬೇಕಾಗುತ್ತದೆ. ನಮ್ಮಿಂದ ನೀವು ಎಂಎಲ್‌ಸಿ, ಡಿಸಿಎಂ ಆಗಿದ್ದಿರಿ. 50 ಕೋಟಿ ರೂ. ಕೊಟ್ಟಿದ್ದು ನಿಜವಾಗಿದ್ದರೆ ಯಾವಾಗ ಕೊಡುತ್ತಾರೆ ಕೊಡಲಿ. ಸಿದ್ದೇಶ್ವರ ದೇವಸ್ಥಾನಕ್ಕೆ ಬರಲು ನಾನು ತಯಾರಿದ್ದೇನೆ. ನೀವು ಬರದಿದ್ದರೆ ನಾನೇ ದೇವಸ್ಥಾನಕ್ಕೆ ಹೋಗಿ ಬರುವೆ ಎಂದು ಲಕ್ಷ್ಮಣ್ ಸವದಿ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ | Amit Shah: ಮೀಸಲಾತಿ ರದ್ದುಪಡಿಸುವ ಕಾಂಗ್ರೆಸ್‌ಗೆ ಅಧಿಕಾರ ಸಿಗುವುದಿಲ್ಲ: ಬಿಜೆಪಿಯಿಂದ ನವ ಕರ್ನಾಟಕದ ಕನಸು ನನಸು ಎಂದ ಅಮಿತ್ ಶಾ
ನಾನು ಹಣ ಗಳಿಸಬೇಕಿದ್ದರೆ ಸಾಕಷ್ಟು ವೇದಿಕೆಗಳಿದ್ದವು. ನಿಮ್ಮ ಹಾಗೂ ನಮ್ಮ ನಡುವೆ ಯಾವುದೇ ಮಾತುಕತೆ ನಡೆದಿಲ್ಲ, ಭೇಟಿಯೂ ಆಗಿಲ್ಲ. ಓರ್ವ ದೊಡ್ಡ ಪ್ರಭಾವಿ ವ್ಯಕ್ತಿಯಾಗಿ ಈ ರೀತಿ ಆರೋಪ ಮಾಡುತ್ತೀರಲ್ಲ. ನಿಮಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. 2013ರ ಚುನಾವಣೆಯಲ್ಲಿ ಸೋತಿದ್ದೇನೆ ಸಾಕು ಎಂದಿದ್ದೆ. ಆದರೆ, 2018ರಲ್ಲಿ ರಮೇಶ್ ಜಾರಕಿಹೊಳಿ ನನ್ನನ್ನು ಮತ್ತೆ ಚುನಾವಣೆಗೆ ನಿಲ್ಲಿಸಿದ್ದರು ಎಂದು ಹೇಳಿದರು.