Site icon Vistara News

Ramesh Jarkiholi: ದೆಹಲಿಯಿಂದ ಮುಂಬೈನತ್ತ ಹಾರಿದ ರಮೇಶ್‌ ಜಾರಕಿಹೊಳಿ; ಸಿಐಡಿ ತನಿಖೆಗೆ ಸಿಡಿ ಕೇಸ್‌ ವಹಿಸಲು ಒತ್ತಡ ತಂತ್ರ

ramesh jarakiholi dk shivakumar

ಬೆಂಗಳೂರು: ತಮ್ಮ ವಿರುದ್ಧದ ಸಿಡಿ ಬಿಡುಗಡೆ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಕೈವಾಡವಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪಟ್ಟುಹಿಡಿದು ಕುಳಿತಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarkiholi), ಈ ಸಂಬಂಧ ದೆಹಲಿಗೆ ಭೇಟಿ ನೀಡಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಈಗ ಮುಂಬೈಗೆ ಪ್ರಯಾಣ ಬೆಳೆಸಿದ್ದು, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ, ಸ್ನೇಹಿತ ದೇವೇಂದ್ರ ಫಡ್ನವಿಸ್‌ (Devendra Fadnavis) ಅವರ ಭೇಟಿಗೆ ಮುಂದಾಗಿದ್ದಾರೆ.

ಶತಾಯಗತಾಯ ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕೆಂದು ಪಟ್ಟುಹಿಡಿದಿರುವ ರಮೇಶ್‌ ಜಾರಕಿಹೊಳಿ, ಫಡ್ನವಿಸ್‌ ಜತೆ ಮಾತುಕತೆಗೆ ಮುಂದಾಗಿದ್ದಾರೆ. ಅವರ ಮೂಲಕ ಕೇಂದ್ರದಲ್ಲಿ ಒತ್ತಡ ಹೇರುವ ತಂತ್ರವನ್ನು ಅನುಸರಿಸಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಮೇಶ್‌ ಜಾರಕಿಹೊಳಿ, ಫಡ್ನವಿಸ್‌ ಮತ್ತು ನಾನು ತುಂಬಾ ಸ್ನೇಹಿತರು. ಅವರನ್ನು ಭೇಟಿಯಾಗುವ ಸಂಬಂಧ ನಾನು ಮುಂಬೈಗೆ ಬಂದಿದ್ದೇನೆ. ಇದರಲ್ಲಿ ಬೇರೆ ಏನೂ ವಿಷಯವಿಲ್ಲ ಎಂದು ಹೇಳಿದ್ದಾರೆ. ಆದರೆ, ಸಿಡಿ ವಿಚಾರವನ್ನು ಸಿಬಿಐಗೆ ವಹಿಸುವಂತೆ ಒತ್ತಡ ಹೇರುವ ಉದ್ದೇಶದಿಂದಲೇ ಅವರು ಭೇಟಿ ನೀಡಿದ್ದಾರೆನ್ನಲಾಗಿದೆ.

ಇದನ್ನೂ ಓದಿ: Traffic Fine: ಓವರ್‌ ಸ್ಪೀಡ್‌ಗಾಗಿ ಟ್ರಾಫಿಕ್ ಫೈನ್ ಕಟ್ಟಿದ ಶಾಸಕ ಎಲ್‌. ನಾಗೇಂದ್ರ; ಇವರಿಗೂ ಸಿಕ್ತು ಶೇ. 50 ರಿಯಾಯ್ತಿ!

ಇನ್ನು ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸುವ ಸಂಬಂಧ ಗೃಹ ಸಚಿವರು ಏನು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಮೇಶ್‌ ಜಾರಕಿಹೊಳಿ, ಈ ವಿಚಾರದ ಬಗ್ಗೆ ಮಂಗಳವಾರ ಅಥವಾ ಬುಧವಾರದಂದು ಮಾಹಿತಿಯನ್ನು ತಿಳಿಸಲಾಗುವುದು ಎಂದು ಹೈಕಮಾಂಡ್‌ನವರು ತಿಳಿಸಿದ್ದಾರೆ. ಅಲ್ಲಿಯವರೆಗೆ ನಾನು ಆ ಬಗ್ಗೆ ಏನೂ ಹೇಳುವುದಿಲ್ಲ ಎಂದು ಹೇಳಿದ್ದಾರೆ.

ಅಮಿತ್ ಶಾ ಸಿಡಿ ಎಕ್ಸ್‌ಪರ್ಟ್; ಬಿ.ಕೆ. ಹರಿಪ್ರಸಾದ್

ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಅವರು ಸಿಡಿ ಎಕ್ಸ್‌ಪರ್ಟ್ ಆಗಿದ್ದಾರೆ. ಗುಜರಾತ್‌ ಬಿಜೆಪಿ ನಾಯಕ ಸಂಜಯ್ ಜೋಶಿ ಅವರ ಸಿಡಿ ಮಾಡಿಸಿದ್ದು ಅವರೇ ಅಲ್ಲವೇ? ಅದಕ್ಕಾಗಿಯೇ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ದೆಹಲಿಗೆ ಹೋಗಿ ಅವರನ್ನು ಭೇಟಿ ಮಾಡಿರಬೇಕು ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: POCSO Case : ವಿದ್ಯಾರ್ಥಿನಿ ಜತೆ ಅನುಚಿತ ವರ್ತನೆ, ಸರಕಾರಿ ಶಾಲೆ ಶಿಕ್ಷಕನ ಮೇಲೆ ಪೋಕ್ಸೊ ಕೇಸ್‌

ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಮಿತ್‌ ಶಾ ಅವರು ಸಿಡಿ ಎಕ್ಸ್‌ಪರ್ಟ್‌ ಆಗಿರುವುದರಿಂದ ಅವರ ಬಳಿ ಸಲಹೆ ಪಡೆದುಕೊಳ್ಳಲು ರಮೇಶ್‌ ಜಾರಕಿಹೊಳಿ ಹೋಗಿರಬೇಕು ಎಂದು ಹೇಳಿದ್ದಾರೆ. “ತಮ್ಮ ವಿರುದ್ಧದ ಸಿಡಿ ಬಿಡುಗಡೆ ಹಿಂದೆ ಡಿ.ಕೆ. ಶಿವಕುಮಾರ್‌ ಕೈವಾಡವಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು” ಎಂದು ಆರೋಪ ಮಾಡಿರುವ ರಮೇಶ್‌ ಜಾರಕಿಹೊಳಿ ಅವರು ಅಮಿತ್‌ ಶಾರನ್ನು ಭೇಟಿ ಮಾಡಿದ ವಿಷಯಕ್ಕೆ ಈ ಪ್ರತಿಕ್ರಿಯೆ ನೀಡಿದರು.

Exit mobile version