Site icon Vistara News

Rapido Bike Vs Auto: ಮುಂದುವರಿದ ಚಾಲಕರ ಸಂಘರ್ಷ; ರ‍್ಯಾಪಿಡೋ ಬೈಕ್‌ ಚಾಲಕನ ಜತೆ ಆಟೋ ಡ್ರೈವರ್‌ ಕಿರಿಕ್‌, ಪ್ರಯಾಣಿಕರು ಕಂಗಾಲು

#image_title

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್‌ Vs ಆಟೋ ಚಾಲಕರ ನಡುವಿನ‌ (Rapido Bike Vs Auto) ಸಂಘರ್ಷ ಮುಂದುವರಿದಿದೆ. ಯುವತಿಯೊಬ್ಬಳನ್ನು ರ‍್ಯಾಪಿಡೋ ಬೈಕ್ ಚಾಲಕ ಡ್ರಾಪ್‌ ಮಾಡುವ ವೇಳೆ ಆಟೋ ಚಾಲಕ ತಡೆದು ಕಿರಿಕ್ ಮಾಡಿರುವುದಾಗಿ ಆರೋಪಿಸಿದ್ದಾರೆ.

ಈ ಸಂಬಂಧ ಅಮೃತ ಎಂಬುವವರು ತಮ್ಮ ಟ್ವಿಟರ್‌ ಖಾತೆ ಮೂಲಕ ಬೆಂಗಳೂರು ನಗರ ಪೊಲೀಸರಿಗೆ ವಿಡಿಯೊ ಸಹಿತ ಟ್ವೀಟ್‌ ಮಾಡಿ ದೂರಿದ್ದಾರೆ. ಆಟೋ ಚಾಲಕನ ದೌರ್ಜನ್ಯವನ್ನು ಖಂಡಿಸಿದ್ದಾರೆ. ಚಾಲಕರ ನಡುವಿನ ಸಮಸ್ಯೆಯಿಂದಾಗಿ ಪ್ರಯಾಣಿಕರು ಕಷ್ಟಕ್ಕೆ ಸಿಲುಕುವಂತಾಗಿದೆ ಎಂದಿದ್ದಾರೆ.

ಘಟನೆಯಲ್ಲಿ ಆಟೋ ಚಾಲಕ, ಬೈಕ್‌ ಚಾಲಕನಿಂದ ಕೀ ಯನ್ನು ಕಸಿದುಕೊಂಡು ನನ್ನನ್ನು ಬೈಕಿನಿಂದ ತಳ್ಳಿದ್ದಾನೆ. ನನ್ನೊಂದಿಗೆ ಇತರೆ ಸ್ನೇಹಿತರು ಇದ್ದಿದ್ದರಿಂದ ಹಲ್ಲೆ ನಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ.

Yellow Board ವಾಹನ ಓಡಿಸುವಂತೆ ಆಟೋ ಚಾಲಕನ ತಾಕೀತು

ಯುವತಿ ಟ್ವೀಟ್‌ ಮೂಲಕ ಘಟನೆಯ ವಿಡಿಯೊ ಶೇರ್‌ ಮಾಡಿದ್ದಾರೆ. ವಿಡಿಯೊದಲ್ಲಿ ಆಟೋ ಚಾಲಕ
ರ‍್ಯಾಪಿಡೋ ಬೈಕ್‌ ಚಾಲಕನಿಗೆ Yellow Board ವಾಹನವನ್ನು ಓಡಿಸುವಂತೆ ತಾಕೀತು ಮಾಡಿದ್ದಾರೆ. ಇತ್ತ ಬೈಕ್‌ ಚಾಲಕ ಪೊಲೀಸರಿಗೆ ಕಾಲ್‌ ಮಾಡಲು ಹೋದಾಗ ʻಪೊಲೀಸರಿಗೆ ಕಾಲ್ ಮಾಡಿದರೆ ಎಷ್ಟ್ ಜನ ಬಂದ್ ನಿಲ್ತಾರೆ ಗೊತ್ತಾ’ ಎಂದು ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Digital lending : ಡಿಜಿಟಲ್‌ ಲೆಂಡಿಂಗ್‌ನಲ್ಲಿ ರಿಕವರಿ ಏಜೆಂಟರ ಬಗ್ಗೆ ಸಾಲಗಾರರಿಗೆ ಮೊದಲೇ ತಿಳಿಸಬೇಕು: ಆರ್‌ಬಿಐ

ಬೈಕ್ ಚಾಲಕನಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಪೋಸ್ಟ್ ಮಾಡಿ ಈ ರೀತಿಯ ನಡವಳಿಕೆ ಸರಿಯಲ್ಲ ಎಂದು ಯುವತಿ ಆಕ್ರೋಶ ಹೊರಹಾಕಿದ್ದಾರೆ.

Exit mobile version