ಬೆಂಗಳೂರು: ಭಕ್ತರಿಗಾಗಿ ಸದಾ ಮಿಡಿಯುತ್ತಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಅವರು ದಣಿವರಿಯದ ಮಹಾನ್ ದಾರ್ಶನಿಕರು. ಅವರು ಅತ್ಯಂತ ಸರಳ ಸ್ವಾಮೀಜಿಯಾಗಿದ್ದು, ಎಲ್ಲ ಕಡೆಯೂ ಶ್ವೇತ ವಸ್ತ್ರಧಾರಿಯಾಗಿಯೇ ಸಂಚರಿಸುತ್ತಿದ್ದರು. ಫುಟ್‌ಪಾತ್‌ಗಳ ಮೇಲೆಯೇ ಕುಳಿತು ಪ್ರವಚನಗಳನ್ನು ನೀಡುತ್ತಿದ್ದರು. ಭಕ್ತರು ದಾರಿ ಮಧ್ಯೆ ಸಿಕ್ಕರೆ ನಿಂತು ಮಾತನಾಡುತ್ತಿದ್ದರು.
ಅವರ ಬಾಲ್ಯದ ಜೀವನದ ಸಹಿತ ಇಲ್ಲಿಯವರೆಗೆ ಹಲವಾರು ಸಂಗತಿಗಳುಳ್ಳ ಕೆಲವು ಅಪರೂಪದ ಫೋಟೊಗಳೂ ಇಲ್ಲಿವೆ. ದ್ವಿಚಕ್ರ ವಾಹನದ ರೈಡಿಂಗ್‌ನಿಂದ ಹಿಡಿದು, ಮಕ್ಕಳ ಜತೆ ಮಕ್ಕಳಂತೆ ನಡೆದುಕೊಳ್ಳುವ ಚೇತನರಾಗಿದ್ದರು. ಅವರ ಕೆಲವು ಫೋಟೊಗಳು ಇಲ್ಲಿವೆ.