ವಿಜಯನಗರ: ಯುವಕರ ಬೈಕ್ ಕ್ರೇಜ್ ಹೊಸತೇನಲ್ಲ. ಆದರೆ, ಕೆಲವರು ವ್ಹೀಲಿಂಗ್ ಮಾಡುವ ಮೂಲಕ, ಇನ್ನು ಕೆಲವರು ಯದ್ವಾತದ್ವಾ ವೇಗವಾಗಿ ಸವಾರಿ ಮಾಡುವ ಮೂಲಕ ತಮ್ಮ ಪ್ರಾಣವನ್ನೇ ಪಣವಾಗಿಡುತ್ತಾರೆ. ಹೊಸಪೇಟೆಯ ಚಿತ್ತವಾಡ್ಗಿಯ ಗೃಹ ರಕ್ಷಕ ದಳದ ಕಚೇರಿಯ ಬಳಿ ಇರುವ ಬೈಪಾಸ್ ರಸ್ತೆಯಲ್ಲಿ ಯುವಕರ ತಂಡವೊಂದು ರ‍್ಯಾಶ್ ಡ್ರೈವಿಂಗ್ ಮಾಡಲು ಹೋಗಿ ಡಿವೈಡರ್‌ಗೆ ಬಡಿದು ಅವಘಡ (Road accident) ಸಂಭವಿಸಿದೆ.
ಹುಡುಗರ ತಂಡವೊಂದು ಬೇರೆ ಬೇರೆ ಬೈಕ್‌ಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಮೆರವಣಿಗೆ ರೀತಿಯಲ್ಲಿ ಡ್ರೈವ್ ಮಾಡುತ್ತಾ ಸಾಗುತ್ತಿದ್ದರು. ಸಾಕಷ್ಟು ಕೇಕೆ ಅಬ್ಬರಗಳಿಂದ ಕೂಡಿದ ಅವರ ಮೆರವಣಿಗೆ ವೇಳೆ ದುರಂತವೊಂದು ಸಂಭವಿಸಿದೆ. ವಿರೂಪಾಕ್ಷ ಹಾಗೂ ಮಲ್ಲಿಕಾರ್ಜುನ ಎಂಬ ಹುಡುಗರು ಎನ್‌ಫೀಲ್ಡ್ ಬೈಕ್‌ನಲ್ಲಿ ಸಾಗುತ್ತಿದ್ದು, ಅತ್ತಿಂದಿತ್ತ ವಾಹನವನ್ನು ಓಲಾಡಿಸುತ್ತಿದ್ದರು. ಸ್ಟಂಟ್ ಮಾಡಲು ಹೋದ ಈ ಯುವಕರು ಸ್ಪೀಡ್ ಆಗಿ ಡ್ರೈವ್ ಮಾಡಿದ್ದರಿಂದ ಬೈಕ್ ಡಿವೈಡರ್‌ಗೆ ಬಡಿದಿದೆ. ಆಗ ಇಬ್ಬರೂ ಯುವಕರು ಹಾರಿ ಬಿದ್ದಿದ್ದಾರೆ. ಈ ಸ್ಪೀಡ್ ಡ್ರೈವಿಂಗ್‌ನ್ನು ಎದುರಿದ್ದ ಬೈಕ್‌ನವರು ವಿಡಿಯೊ ಮಾಡಿದ್ದಾರೆ.
ಇಬ್ಬರೂ ಸವಾರರಿಗೆ ಕಾಲು ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ. ಪೊಲೀಸರು ಬೈಕನ್ನು ವಶಕ್ಕೆ ಪಡೆದಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Road accident : ಕ್ಯಾಂಟರ್ ಡಿಕ್ಕಿಯಾಗಿ ಶಾಲಾ ಉದ್ಯೋಗಿ ಮಹಿಳೆ ದುರ್ಮರಣ, ರಸ್ತೆ ಕಾಮಗಾರಿ ಕಿರಿಕಿರಿ