Site icon Vistara News

ರಥೋತ್ಸವ | ಮುರಿದು ಬಿದ್ದ ಚನ್ನಪ್ಪನಪುರದ ವೀರಭದ್ರೇಶ್ವರ ರಥ; ಪ್ರಾಣಾಪಾಯದಿಂದ ಭಕ್ತರು ಪಾರು

chamarajanagara ratha 3

ಚಾಮರಾಜನಗರ: ತಾಲೂಕಿನ ಚನ್ನಪ್ಪನಪುರದ ಸುಮಾರು ಆರು ಶತಮಾನಕ್ಕಿಂತಲೂ ಪುರಾತನವಾಗಿರುವ ವೀರಭದ್ರೇಶ್ವರ ದೇವಸ್ಥಾನದ ವೀರಭದ್ರೇಶ್ವರನ ರಥವು ರಥೋತ್ಸವ ವೇಳೆ ಮುರಿದುಬಿದ್ದಿದೆ. ಸಾವಿರಾರು ಮಂದಿ ಈ ರಥೋತ್ಸವದಲ್ಲಿ ಭಾಗಿಯಾಗಿದ್ದರು. ರಥ ಬೀಳುವ ವೇಳೆ ಎಲ್ಲರೂ ದೂರ ಸರಿದಿದ್ದರಿಂದ ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಾಗಿಲ್ಲ.

ಕೋವಿಡ್‌ ಕಾರಣದಿಂದ ಕಳೆದ ಎರಡು ವರ್ಷಗಳ ಕಾಲ ರಥೋತ್ಸವವನ್ನು ಆಯೋಜಿಸಿರಲಿಲ್ಲ. ಆದರೆ, ಈ ವರ್ಷ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗ್ಗೆ ವೀರಭದ್ರೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಧಾರ್ಮಿಕ ಕೈಂಕರ್ಯಗಳನ್ನು ಪೂರೈಸಿ ಮಧ್ಯಾಹ್ನ ೧೨ ಗಂಟೆ ವೇಳೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ.

ರಥವು ದೇವಸ್ಥಾನದ ಒಂದು ಸುತ್ತು ಹಾಕಿ ಬರಬೇಕಿತ್ತು. ಭಕ್ತರು ಭಕ್ತಿಯಿಂದ ರಥವನ್ನು ಎಳೆಯುತ್ತಾ ಅರ್ಧ ದೂರ ಸಾಗಿದ್ದಾರೆ. ಈ ವೇಳೆ ರಥದ ಚಕ್ರವು ಕಲ್ಲಿನ ಮೇಲೆ ಹತ್ತಿದ್ದರಿಂದ ಒಂದು ಕಡೆ ವಾಲಿದೆ. ಚಕ್ರವೂ ಮುರಿದಿದ್ದರಿಂದ ರಥವು ತುಂಡಾಗಿ ಮಗುಚಿ ಬಿದ್ದಿದೆ. ಆದರೆ, ಭಕ್ತರು ಹಿಂದೆ ಸರಿದಿದ್ದರಿಂದ ಯಾರಿಗೂ ಪ್ರಾಣಾಪಾಯವಾಗಿಲ್ಲ.

ಇದನ್ನೂ ಓದಿ | Weather Report | ಚಾಮರಾಜನಗರ, ಚಿಕ್ಕಮಗಳೂರು ಸೇರಿ ಹಲವೆಡೆ ನಾಳೆ ಭಾರಿ ಮಳೆ ಮುನ್ಸೂಚನೆ

Exit mobile version