ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಟ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಎನ್‌ಐಎ ಅಧಿಕಾರಿಗಳ ತಂಡ ಶನಿವಾರ ಬಂಧಿಸಿರುವುದಾಗಿ ಮಾಹಿತಿ ಬಂದಿದೆ. ಶಾಹಿದ್ (೪೦) ಬಂಧನಕ್ಕೆ ಒಳಗಾದ ಆರೋಪಿಯಾಗಿದ್ದು, ಬೆಳ್ಳಾರೆಯಿಂದಲೇ ತನ್ನ ನಿವಾಸದಲ್ಲಿ ಉಳಿದುಕೊಂಡಿದ್ದ ಎಂದು ಹೇಳಲಾಗಿದೆ. ಈತ ಸೆರೆ ಸಿಕ್ಕ ಮೂರನೇ ಆರೋಪಿಯಾಗಿದ್ದಾನೆ.
ಎನ್‌ಐಎ ಅಧಿಕಾರಿಗಳ ತಂಡ ವಾರದ ಹಿಂದೆ ಶಾಫಿ ಮತ್ತು ಇಕ್ಬಾಲ್ ಎಂಬಿಬ್ಬರನ್ನು ಬಂಧಿಸಿದ್ದರು. ಬಳಿಕ ಕಾರ್ಯಾಚರಣೆ ಮುಂದುವರಿಸಿದ್ದರು. ಅಂತೆಯೇ ಶನಿವಾರ ಬೆಳ್ಳಾರೆಯ ನಿವಾಸದಿಂದ ಶಾಹಿದ್‌ನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಶಾಹಿದ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಆರೋಪಿಗಳ ಮಾಹಿತಿ ನೀಡಿದವರಿಗೆ NIA ಬಹುಮಾನ ಘೋಷಣೆ ಮಾಡಿತ್ತು.
ಇದನ್ನೂ ಓದಿ | ಬಂಧಿತ ಪಿಎಫ್‌ಐ ಮುಖಂಡರಿಗೆ ಪ್ರವೀಣ್ ನೆಟ್ಟಾರು ಹತ್ಯೆ ಲಿಂಕ್