ಚಿಕ್ಕಬಳ್ಳಾಪುರ: ಪುಷ್ಪ ಸಿನಿಮಾ ಸ್ಟೈಲಲ್ಲಿ ರಕ್ತಚಂದನ ಸಾಗಿಸುತಿದ್ದ ಗ್ಯಾಂಗ್ ಸೆರೆಯಾಗಿದೆ. ಜಿಲ್ಲೆಯ ಚಿಂತಾಮಣಿ ತಾಲೂಕಿನ ಹಿರೇಕಟ್ಟಿಗೇನಹಳ್ಳಿ ಬಳಿ ಸೀಮೆ ಹಸುವಿನೊಂದಿಗೆ ಹುಲ್ಲು ಮುಚ್ಚಿ ರಕ್ತ ಚಂದನ ಸಾಗಿಸುತ್ತಿದ್ದಾಗ ಖದೀಮರು ಸಿಕ್ಕಿಬಿದ್ದಿದ್ದಾರೆ.
ಲಕ್ಷಾಂತರ ರೂಪಾಯಿ ಬೆಲೆ ಬಾಳುವ ರಕ್ತ ಚಂದನವನ್ನು ವಾಹನದಲ್ಲಿ ಸಾಗಿಸುತ್ತಿದ್ದಾಗ ಚಿಂತಾಮಣಿ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳರನ್ನು ಸೆರೆ ಹಿಡಿದಿದ್ದಾರೆ. ಪೊಲೀಸರನ್ನು ನೋಡುತ್ತಿದ್ದಂತೆ ಪರಾರಿಯಾಗಲು ಆರೋಪಿಗಳು ಯತ್ನಿಸಿದ್ದಾರೆ. ಹೀಗಾಗಿ ಎರಡು ಕಿ.ಮೀ. ಓಡುತ್ತಾ ಬೆನ್ನಟ್ಟಿದ ಪೊಲೀಸರು ಕೊನೆಗೂ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ | Paying Guest facility : ಪಿಜಿ ಅವ್ಯವಸ್ಥೆ; ಧಮ್ಕಿ ಹಾಕೋ ವಾರ್ಡನ್, ಮತ್ತೇರಿಸಿ ಬರ್ತಾರಾ ಯುವತಿಯರು!?
ಇಬ್ಬರು ಕಳ್ಳರನ್ನು ಬಂಧಿಸಲಾಗಿದ್ದು, 392 ಕೆಜಿ ರಕ್ತ ಚಂದನದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ಕಳ್ಳರ ಸೆರೆಗೆ ಪೊಲೀಸರು ಬಲೆ ಬೀಸಿದ್ದು, ಗ್ರಾಮಸ್ಥರ ಸಹಕಾರದಿಂದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಆಟ ಕಡಿಮೆ ಮಾಡು, ಓದಿಗೆ ಗಮನ ಕೊಡು ಎಂದಿದ್ದಕ್ಕೇ ಯುವಕ ಆತ್ಮಹತ್ಯೆ
ಧಾರವಾಡ: ಕ್ರೀಡೆಯ ಬಗ್ಗೆ ಆಸಕ್ತಿ (Interest on Sports) ಕಡಿಮೆ ಮಾಡಿ ಓದಿನ ಕಡೆ ಗಮನಕೊಡು ಎಂದು ಹೆತ್ತವರು ಸಲಹೆ ನೀಡಿದ್ದನ್ನೇ ದೊಡ್ಡ ವಿಚಾರ ಮಾಡಿ ನೊಂದುಕೊಂಡು ಯುವಕನೊಬ್ಬ ಆತ್ಮಹತ್ಯೆಗೆ (Self Harming) ಶರಣಾಗಿದ್ದಾನೆ. ಧಾರವಾಡದ (Dharwad News) ಸಾಧನ ಕೇರಿಯ ನಿವಾಸಿ ಚೇತನ್ ತೊಂಡಿಹಾಳ ಎಂಬಾತನೇ ಪ್ರಾಣ ಕಳೆದುಕೊಂಡವನು. ಅವನು ಧಾರವಾಡದ ಕೆಲಗೇರಿ ಕೆರೆಗೆ ಜಿಗಿದು ಮೃತಪಟ್ಟಿದ್ದಾನೆ.
ಪುಟ್ಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಯುವಕ ಎಲ್ಲಾ ಹೊತ್ತಿನಲ್ಲೂ ಆಟದ ಮೇಲೆಯೇ ಗಮನ ಕೊಡುತ್ತಿದ್ದ. ಆದರೆ, ಪಾಠದ ಕಡೆಗೆ ಗಮನ ಕೊಡುತ್ತಿರಲಿಲ್ಲ ಎನ್ನುವ ಕೊರಗು ತಂದೆಗಿತ್ತು. ಹಾಗಾಗಿ ಅವರು ಆಟ ಬಿಟ್ಟು ಸ್ವಲ್ಪ ಓದಿನ ಕಡೆಗೆ ಗಮನ ಕೊಡು ಎಂದು ಬುದ್ಧಿವಾದ ಹೇಳಿದ್ದರು. ಆದರೆ, ಚೇತನ್ ಇಷ್ಟಕ್ಕೇ ನೊಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದ.
ಇದನ್ನೂ ಓದಿ | Attempting to Convert: ಯೋಗಿ ನಾಡಿನಲ್ಲಿ ಮತಾಂತರಕ್ಕೆ ಯತ್ನ; ಪಾದ್ರಿ ಸೇರಿ 10 ಮಂದಿಯ ಬಂಧನ
ಸೋಮವಾರ ಸಂಜೆ ಯಾವುದೇ ಮಾತು ಹೇಳದೆ ಮನೆಯಿಂದ ಕಾಣೆಯಾಗಿದ್ದ ಚೇತನ್‌ಗಾಗಿ ಮನೆಯವರು ಭಾರಿ ಹುಡುಕಾಟ ನಡೆಸಿದ್ದರು. ಆತನ ಶವ ಬುಧವಾರ ಬೆಳಗ್ಗೆ ಕೆಲಗೇರಿ ಕೆರೆಯಲ್ಲಿ ಪತ್ತೆಯಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.